HEALTH TIPS

ಕಾಸರಗೋಡು ಬ್ಲಾಕ್ ಪಂಚಾಯತ್ ಬಜೆಟ್ ಮಂಡನೆ


       ಕಾಸರಗೋಡು: ಕಾಸರಗೋಡು ಬ್ಲಾಕ್ ಪಂಚಾಯತ್ ನ 2020-21ನೇ ವರ್ಷದ ವಾರ್ಷಿಕ ಬಜೆಟ್ ಮಂಡನೆಯಾಗಿದೆ. ಉಪಾಧ್ಯಕ್ಷೆ ಷಲೀಮಾ ಷಿನ್ನೂರ್ ಮುಂಗಡಪತ್ರ ಮಂಡಿಸಿದರು. 8,70,39,008 ರೂ. ಆದಾಯ, 8,46,41,000 ರೂ. ವೆಚ್ಚ, 23,98,008 ರೂ. ಮಿಗತೆ ನಿರೀಕ್ಷಿಸುವ ಬಜೆಟ್ ಈ ವೇಳೆ ಮಂಡಿಸಲಾಗಿದೆ.
    ಕೃಷಿ ವಲಯ, ಕುಡಿಯುವ ನೀರು, ಮೂಲಭೂತ ಸೌಲಭ್ಯ, ಪರಿಶಿಷ್ಟ ಜಾತಿ-ಪಂಗಡ ಜನಾಂಗದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಚೆರ್ಕದಲ್ಲಿ ಒಳಾಂಗಣ ವಾಲಿಬಾಲ್ ಕ್ರೀಡಾಗಣ ಜಂಟಿ ಯೋಜನೆಗೆ 50 ಲಕ್ಷ ರೂ., ಮಹಿಳಾ ಉದ್ದಿಮೆ ಉದ್ಯಾನಕ್ಕೆ 10 ಲಕ್ಷ ರೂ. ಮೀಸಲಿರಿಸಲಾಗಿದೆ.
     ಬ್ಲಾಕ್ ಪಂಚಾಯತ್ ಅಧ್ಯಕ್ಷ ಸಿ.ಎಚ್.ಮಹಮ್ಮದ್ ಕುಂuಟಿಜeಜಿiಟಿeಜ ಚಾಯಿಂಡಡಿ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯೀ ಸಮಿತಿ ಅಧ್ಯಕ್ಷರುಗಳಾದ ಟಿ.ಡಿ.ಕಬೀರ್, ಎ.ಎಸ್.ಅಹಮ್ಮದ್, ಆಯಿಷಾ ಸಹದುಲ್ಲ, ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು. ಬ್ಲೋಕ್ ಪಂಚಾಯತ್ ಕಾರ್ಯದರ್ಶಿ ಅನುಪಂ ಎಸ್.ಸ್ವಾಗತಿಸಿದರು.
ಹಾಲು ಸಂಗ್ರಹ, ವಿತರಣೆ ಸಂಬಂಧ ಸಮಸ್ಯೆಗಳ ಪರಿಹಾರಕ್ಕೆ ಕರೆಮಾಡಿ
      ಕೋವಿಡ್ 19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಜಾರಿಗೊಂಡಿರುವ ಲಾಕ್ ಡೌನ್ ಆದೇಶದ ಪರಿಣಾಮ ಹಾಲು ಲಭ್ಯತೆ, ಸಂಗ್ರಹ ಸಂಬಂಧ ಕೃಷಿಕರು, ಫಲಾನುಭವಿಗಳು ಅನುಭವಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಹಾಲು ಅಭಿವೃದ್ಧಿ ಇಲಾಖೆ ಮತ್ತು ಮಿಲ್ಮಾ ಸಂಸ್ಥೆಯ ಸಿಬ್ಬಂದಿಯನ್ನು ದೂರವಾಣಿ ಮೂಲಕ ಸಂಪರ್ಕಿಸಬಹುದು. ಹಾಲು ಸಂಗ್ರಹ ಮತ್ತು ಹಿಂಡಿ ಸಮಸ್ಯೆಗಳಿಗೆ: 994669405, ಹಾಲು ವಿತರಣೆ ಸಂಬಂಧ ಸಮಸ್ಯೆಗಳಿಗೆ: 9769066574, ಸಾರ್ವಜನಿಕ ವಿಚಾರಗಳಿಗೆ: 9446427010, 9446060540, ರಾಜ್ಯ ಮಟ್ಟದ ಸಂಪರ್ಕಕ್ಕೆ: 9496450432, 9446300767, 9446376988. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries