ಮಂಜೇಶ್ವರ: ಕೋವಿಡ್-19 ನಿಂದಾಗಿ ನಿತ್ಯ ವರಮಾನವಿಲ್ಲದೆ ಕಷ್ಟ ಪಡುತ್ತಿರುವ ಜನತೆಗೆ ಒಂದು ಸಾಂತ್ವನವೆಂಬ ನೆಲೆಯಲ್ಲಿ ಸ್ವರ್ಣ ಆಭರಣ ಅಡವು ಇಟ್ಟು ಹದಿನೈದು ಸಾವಿರ ರೂಪಾಯಿ ತನಕ ಪಡೆಯುವ ಸಾಲಕ್ಕೆ ಪೂರ್ಣವಾಗಿ ಬಡ್ಡಿ ರಹಿತವಾಗಿ ಸಾಲ ನೀಡಲು ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ತೀರ್ಮಾನಿಸಿದೆ.
ಕಾಸರಗೋಡು ಜಿಲ್ಲೆಯ ಹೋಟ್ ಸ್ಪೋಟ್ ಪ್ರದೇಶದಲ್ಲಿ ಲಾಕ್‍ಡೌನ್ ಚಾಲ್ತಿಯಲ್ಲಿರುವ ತನಕ ಈ ಸೌಲಭ್ಯ ದೊರೆಯುವುದು. ಎಪ್ರಿಲ್ 16 ರಿಂದ ಪ್ರಸ್ತುತ ರೀತಿಯಲ್ಲಿ ಸಾಲ ಪಡೆಯುವವರಿಗೆ ಈ ಅನುಕೂಲತೆ ದೊರೆಯುವುದಾಗಿ ಬ್ಯಾಂಕ್‍ನ ಅಧ್ಯಕ್ಷ ಬಿ.ವಿ.ರಾಜನ್, ಕಾರ್ಯದರ್ಶಿ ರಾಜನ್ ಪಿ.ನಾಯರ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

