ಮಂಜೇಶ್ವರ: ಮೀಯಪದವು ಶಾಲಾ ಅಧ್ಯಾಪಕಿ ರೂಪಶ್ರೀ ಯನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಕ್ರೈಮ್ ಬ್ರಾಂಚ್ ನ್ಯಾಯಾಲಯದಲ್ಲಿ ಆರೋಪ ಪಟ್ಟಿಯನ್ನು ಸಮರ್ಪಿಸಿತು.
ಘಟನೆಯಲ್ಲಿ ಸಹೋದ್ಯೋಗಿಯಾದ ವೆಂಕಟರಮಣ ಕಾರಂತ ಒಂದನೇ ಆರೋಪಿಯಾಗಿಯೂ ಸಹಾಯಕ ನಿರಂಜನ್ ನನ್ನ ಎರಡನೇ ಆರೋಪಿಯಾಗಿಯೂ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ನೀಡಲಾಗಿದೆ.
ಅಧ್ಯಾಪಿಕೆಯನ್ನು ನೀರಲ್ಲಿ ಮುಳುಗಿಸಿ ಮೃತದೇಹವನ್ನು ಸಮುದ್ರಕ್ಕೆಸೆದ ಪ್ರಕರಣಕ್ಕೆ ಸಂಬಂಧಿಸಿ ಕ್ರೈಮ್ ಬ್ರಾಂಚ್ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಮರ್ಪಿಸಿದೆ. ಆರೋಪಿಗಳನ್ನು ಬಂಧಿಸಿದ 81 ದಿನಗಳ ಬಳಿಕ ಕ್ರೈಮ್ ಬ್ರಾಂಚ್ ಡಿ ವೈ ಎಸ್ಪಿ ಕೆ.ಆರ್. ಸತೀಶ್ ಕುಮಾರ್ ನೇತೃತ್ವದಲ್ಲಿರುವ ತನಿಖಾ ತಂಡ 1700 ಪುಟಗಳಿರುವ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಮರ್ಪಿಸಿದೆ. ಜನವರಿ 16 ಕ್ಕೆ ನಾಪತ್ತೆಯಾದ ಅಧ್ಯಾಪಕಿ ರೂಪಶ್ರೀಯ ಮೃತ ದೇಹ ಮೂರು ದಿನಗಳ ಬಳಿಕ ಕೊಯಿಪ್ಪಾಡಿ ಕಡಪ್ಪುರದಲ್ಲಿ ನಗ್ನವಾಗಿ ಪತ್ತೆಯಾಗಿತ್ತು.


