ಕಾಸರಗೋಡು: ಕಾಸರಗೋಡು ಜಿಲ್ಲೆಯ ಎಲ್ಲೆಡೆ ಏಪ್ರಿಲ್ 7ರಿಂದ ಪೆÇಲೀಸರ ಸಹಾಯ ಲಭ್ಯವಾಗಲಿದೆ. 'ಪಟ್ಟಿ ಕಳುಹಿಸಿ-ಸಾಮಾಗ್ರಿಗಳನ್ನು ಪೆÇಲೀಸರು ನಿಮ್ಮಮನೆಗೆ ತಲಪಿಸುವರು' ಎಂಬ ಹೆಸರಲ್ಲಿ ಈ ಯೋಜನೆ ಜಾರಿಗೊಳ್ಳಲಿದೆ ಎಂದು ಇನ್ಸ್ ಪೆಕ್ಟರ್‍ಜನರಲ್ ಆಫ್ ಪೆÇಲೀಸ್ ವಿಜಯ್ ಸಖಾರೆ ತಿಳಿಸಿದರು. ಜೀವರಕ್ಷಣೆಯ ಔಷಧಗಳು, ಅನಿವಾರ್ಯ ಸಾಮಾಗ್ರಿಗಳ ಅಗತ್ಯವಿರುವವರು ಸಂಬಂzsಪಟ್ಟ ಪಟ್ಟಿಯನ್ನು9497935780, 9497980940 ಎಂಬ ವಾಟ್ಸ್ ಆಪ್ ನಂಬ್ರಕ್ಕೆ ಕಳುಹಿಸಿದರೆ ಸಾಕು, ಪೆÇಲೀಸರು ಮನೆಗಳಿಗೆ ತಲಪಿಸಲಿದ್ದಾರೆ. ಸಾಮಾಗ್ರಿಗಳನ್ನು ಪಡೆದುಕೊಂಡು ಬಿಲ್ಲಿನ ಮೊತ್ತವನ್ನು ಸೂಕ್ತ ಪ್ರಮಾಣದಲ್ಲೇ ನೀಡಿದರೆ ಸಾಕು.
ಡಬ್ಬಲ್ ಲಾಕ್ ಡೌನ್ ಆದೇಶ ಜಾರಿಯಲ್ಲಿರುವ ಪ್ರದೇಶಗಳಲ್ಲಿ ಏ.1 ರಿಂದಲೇ ಪೆÇಲೀಸರು ಈ ಯೋಜನೆ ಜಾರಿಗೊಳಿಸಿದ್ದರು. ವಿದ್ಯಾನಗರ, ಮೇಲಪ್ಪರಂಬ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ವರೆಗೆ 162 ಮಂದಿಗೆ ಜೀವರಕ್ಷಣೆ ಔಷಧಗಳನ್ನು ಮತ್ತು 100 ಮಂದಿಗೆ ಅನಿವಾರ್ಯ ಸಾಮಾಗ್ರಿಗಳನ್ನು ಪೆÇಲೀಸರು ಮನೆಗಳಿಗೇ ತಲಪಿಸಿದ್ದಾರೆ. ಏ. 7ರಿಂದ ಈ ಕ್ರಮ ಜಿಲ್ಲೆಯಾದ್ಯಂತ ಜಾರಿಗೊಳ್ಳಲಿದೆ. ಲಾಕ್ ಡೌನ್ ಆದೇಶ ಜಾರಿಯಲ್ಲಿರುವ ಕಾರಣ ಜನ ಈ ಸೌಲಭ್ಯವನ್ನು ಗರಿಷ್ಠ ಪ್ರಮಾಣದಲ್ಲಿ ಸದುಪಯೋಗಪಡಿಸಬೇಕು ಎಂದು ಐ.ಜಿ. ವಿಜಯ್ ಸಖಾರೆ ತಿಳಿಸಿದ್ದಾರೆ. ಲಾಕ್‍ಡೌನ್ ಆದೇಶ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಜನರನ್ನು ಮನೆಯಿಂದ ಹೊರಗಿಳಿಯದಂತೆ ಮಾಡಲು ಈ ಕ್ರಮ ಅನುಸರಿಸಲಾಗುತ್ತಿದೆ.
8 ರಂದು ಸಂದರ್ಶನ
ಕೊರೋನಾ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಕಾಸರಗೋಡು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಟಾಫ್ ನರ್ಸ್, ಫಾರ್ಮಸಿಸ್ಟ್ ಹುದ್ದೆ ನೇಮಕಾತಿ ನಡೆಯಲಿದೆ. ಈ ಸಂಬಂಧ ಆನ್ ಲೈನ್ ಸಂದರ್ಶನ ಏ.8ರಂದು ನಡೆಯಲಿದೆ. ಸ್ಟಾಫ್ ನರ್ಸ್ ಹುದ್ದೆಗೆ ಪ್ಲಸ್ ಟು/ ಜಿ.ಎನ್.ಎಂ/ ನಸಿರ್ಂಗ್ ಕೌನ್ಸಿಲ್ ನಲ್ಲಿ ನೋಂದಣಿ ಹೊಂದಿರಬೇಕು. ಫಾರ್ಮಸಿಸ್ಟ್ ಹುದ್ದೆಗೆ ಪ್ಲಸ್ ಟು/ ಡಿ.ಫಾಂ/ ಫಾರ್ಮಸಿ ಕೌನ್ಸಿಲ್ ನಲ್ಲಿನೋಂದಣಿ ಹೊಂದಿರಬೇಕು. ಉದ್ಯೋಗಾರ್ಥಿಗಳು ಸರ್ಟಿಫಿಕೆಟ್ ಗಳನ್ನು ಸ್ಕ್ಯಾನ್ ನಡೆಸಿ ಪ್ರತ್ಯೇಕ ಇ-ಮೇಲ್ ವಿಳಾಸಕ್ಕೆ ಕಳುಹಿಸಬೇಕು. ಈ ಬಗ್ಗೆ ಮಾಹಿತಿಗೆ ದೂರವಾಣಿ ಸಂಖ್ಯೆ: 8848818792, 9495146688 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಶಾಸಕರ ನೆರವು:
ಮಂಜೇಶ್ವರ ವಿಧಾನಸಭಾ ಆಸ್ತಿ ಅಭಿವೃದ್ಧಿ ನಿಧಿಯಿಂದ ಶಾಸಕ ಎಂ.ಸಿ.ಕಮರುದ್ದೀನ್ ಅವರು 25 ಲಕ್ಷರೂ.ಮಂಜೂರು ಮಾಡಿದ್ದಾರೆ. ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ಅನಿವಾರ್ಯ ಉಪಕರಣಗಳನ್ನು ಈ ನಿಧಿಯಿಂದ
ಖರೀದಿಸಲಾಗುವುದು.

