ಕಾಸರಗೋಡು: ಕೋವಿಡ್-19ಬಾಧಿಸಿ ಕಣ್ಣೂರು ನಿವಾಸಿಯೊಬ್ಬರು ಇಂಗ್ಲೆಂಡ್‍ನಲ್ಲಿ ಮೃತಪಟ್ಟಿದ್ದಾರೆ. ಕಣ್ಣೂರು ಇರಿಟ್ಟಿ ವೆಳಿಮಾನಂ ನಿವಾಸಿ ಸಿಂಟೋಜಾರ್ಜ್(36)ಇಂಗ್ಲೆಂಡ್‍ನ ಆಸ್ಪತ್ರೆಯಲ್ಲಿ ಮೃತಪಟ್ಟವರು. ಇನ್ನೊಬ್ಬ ಕಣ್ಣೂರು ನಿವಾಸಿ ಕೋವಿಡ್-19ಬಾಧಿಸಿ ಅಜ್‍ಮಾಲ್‍ನಲ್ಲಿ ಮೃತಪಟ್ಟಿದ್ದಾರೆ. ಕೋಳಯಾಟ್ ಕೋಳತ್ತಯಿಲ್ ನಿವಾಸಿ ಹ್ಯಾರಿಸ್(36) ಸಾವಿಗೀಡಾದ ವ್ಯಕ್ತಿ. ಈ ಮೂಲಕ ರಾಜ್ಯದಿಂದ ಹೊರಗೆ ಕೋವಿಡ್ ಬಾಧಿಸಿ ಮೃತಪಟ್ಟವರ ಕೇರಳೀಯರ ಸಂಖ್ಯೆ 16ಕ್ಕೇರಿದೆ.
ಒಬ್ಬಾಕೆ ದಾದಿ ಸಹಿತ ನಾಲ್ಕು ಮಂದಿ ಕೋವಿಡ್ ಬಾಧಿಸಿ ಭಾನುವಾರ ವಿದೇಶದಲ್ಲಿ ಮೃತಪಟ್ಟಿದ್ದರು. ಯು.ಎಸ್‍ನಲ್ಲಿ ಇಬ್ಬರು, ಅಯರ್ಲೆಂಡ್, ಸೌದಿಅರೇಬಿಯಾದಲ್ಲಿ ತಲಾ ಒಬ್ಬರಂತೆ ಸಾವಿಗೀಡಾಗಿದ್ದರು. ಕಳೆದ ವಾರ ಒಬ್ಬ ಮಲಯಾಳಿ ವೈದ್ಯ ಬ್ರಿಟನ್‍ನ ಬರ್ಮಿಂಗ್‍ಹ್ಯಾಂನಲ್ಲಿ ಮೃತಪಟ್ಟಿದ್ದರು.

