HEALTH TIPS

ಸಿರಿಬಾಗಿಲು ಪ್ರತಿಷ್ಠಾನದಿಂದ ಯಕ್ಷಗಾನ ಕಲಾವಿದರಿಗೆ ಲೇಖನ ಸ್ಪರ್ಧೆ


          ಕುಂಬಳೆ: ಯಕ್ಷಗಾನೀಯ ಹಲವಾರು ಚಟುವಟಿಕೆಗಳಲ್ಲಿ ಪ್ರಧಾನ ಪಾತ್ರವಹಿಸುತ್ತಿರುವ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನ ಕೊರೋನಾ  ದಿಗ್ಬಂಧದ ಮಧ್ಯೆಯೂ ಈಗಾಗಲೇ ಕೊರೋನಾಸುರ ಕಾಳಗ ಯಕ್ಷಗಾನ ದಾಖಲೀಕರಿಸಿ ಯೂಟ್ಯೂಬ್ ಮೂಲಕ ಆಸಕ್ತರಿಗೆ ಉಚಿತವಾಗಿ ದೊರೆಯುವಂತೆ ಮಾಡಿ ದೇಶ ವಿದೇಶಗಳಿಂದಲೂ ವಿದ್ವಾಂಸರ ಗಣ್ಯರ ಪ್ರಶಂಸೆಗೆ ಪಾತ್ರವಾಗಿದ್ದು ಹತ್ತಾರು ಟಿ ವಿ ಮಾಧ್ಯಮಗಳೂ ಸಕಾಲಿಕವಾಗಿ ಪ್ರಸಾರ ಮಾಡಿರುತ್ತದೆ. ಇದೀಗ ಪ್ರತಿಷ್ಠಾನ ವತಿಯಿಂದ ಕೊರೋನ ದಿಗ್ಬಂಧದ ಮಧ್ಯೆ ಆಸಕ್ತ ತೆಂಕು ಬಡಗು ಯಕ್ಷಗಾನ ಕಲಾವಿದರಿಗೆ ಲೇಖನ ಸ್ಪರ್ಧೆಯನ್ನು ಏರ್ಪಡಿಸಿದೆ. ಕೊರೋನ ದಿಗ್ಬಂಧನ - ನಾನು ಕಲಿತ ಪಾಠಗಳು ಎಂಬ ವಿಷಯದ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ.  ಈಗಾಗಲೇ ರಾಧಾಕೃಷ್ಣ ಕಲ್ಚಾರ್, ಯೋಗೀಶ ರಾವ್  ಚಿಗುರುಪಾದೆ,  ಆರತಿ ಪಟ್ರಮೆ, ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಡಾ.ಶ್ರುತಕೀರ್ತಿ ರಾಜ್ ಉಜಿರೆ, ರವಿಶಂಕರ ವಳಕ್ಕುಂಜ ರನ್ನು ಒಳಗೊಂಡ ಸಂಚಾಲಕ ಸಮಿತಿಯನ್ನು ರೂಪೀಕರಿಸಲಾಗಿದೆ.
         ಸ್ಪರ್ಧೆ ಮೂರು ವಿಭಾಗಗಳಲ್ಲಿ ನಡೆಯಲಿದ್ದು ಯಕ್ಷಗಾನ ವೃತ್ತಿಕಲಾವಿದರು, ಹವ್ಯಾಸಿ ಕಲಾವಿದರು, ತಾಳಮದ್ದಳೆ ಅರ್ಥಧಾರಿಗಳು ಎಂದು ವಿಂಗಡಿಸಲಾಗಿದೆ. ಮಹಿಳಾ ಕಲಾವಿದರಿಗೂ ಭಾಗವಹಿಸಲು ಅವಕಾಶವಿದೆ. ತೀರ್ಪುಗಾರರು ಭಾಷೆ, ಶೈಲಿ ವ್ಯಾಕರಣ ಗಮನಿಸಲಿದ್ದಾರೆ. ಹಾಗೂ ಪ್ರವೇಶ ಉಚಿತವಾಗಿರುತ್ತದೆ.
        ಸ್ಪರ್ಧಾ ವಿಜೇತರಿಗೆ ತಲಾ ಮೂರು ಬಹುಮಾನ ನೀಡಲಾಗುವುದು. ಮೊದಲ ಬಹುಮಾನ 3000ರೂ.,  ಎರಡನೇ ಬಹುಮಾನ 2000 ರೂ, ಮೂರನೇ ಬಹುಮನ 1000 ರೂ.ಹಾಗೂ ಪ್ರತೀ ವಿಭಾಗಗಕ್ಕೂ ಒಂದು ಆಕರ್ಷಕ ಬಹುಮಾನ ನೀಡಲಾಗುವುದು.
      ಕಲಾವಿದರು ತಮ್ಮ ಬರಹಗಳನ್ನು ಮೇ 3ರ ಒಳಗಾಗಿ ತಲಪುವಂತೆ  ಪ್ರತಿಷ್ಠಾನ ಕೋರಿರುತ್ತದೆ. ಹಾಗೂ ಕಳುಹಿಸಬೇಕಾದ ವಾಟ್ಸಪ್ ಮೊಬೈಲ್ ಸಂಖ್ಯೆ 9448344380, 8073740237 ಇ  ಮೈಲ್‍ ವಿಳಾಸ siribagilupratishtana@gmail.com

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries