HEALTH TIPS

ಕೊರೊನಾ ಕಾಸರಗೋಡು ಜಿಲ್ಲೆಯಲ್ಲಿ ಮತ್ತೆ ನಾಲ್ವರಿಗೆ ಸೋಂಕು

   
        ಕಾಸರಗೋಡು: ಕೇರಳ ರಾಜ್ಯದಲ್ಲಿ ಮಂಗಳವಾರ 9 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದ್ದು, ಇವರಲ್ಲಿ 4 ಮಂದಿ ಕಾಸರಗೋಡು ನಿವಾಸಿಗಳಾಗಿದ್ದಾರೆ. ಕಣ್ಣೂರು ಜಿಲ್ಲೆ - 3, ಮಲಪ್ಪುರ ಮತ್ತು ಕೊಲ್ಲಂ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಕೊರೊನಾ ವೈರಸ್ ಸೋಂಕು ದೃಢಪಡಿಸಲಾಗಿದೆ. ಇವರಲ್ಲಿ ನಾಲ್ವರು ವಿದೇಶದಿಂದ ಬಂದವರು. ಇಬ್ಬರು ನಿಜಾಮುದ್ದೀನ್ ಸಮಾವೇಶದಲ್ಲಿ ಭಾಗವಹಿಸಿದವರು. ಕೊರೊನಾ ವೈರಸ್ ಸೋಂಕಿತರೊಂದಿಗಿನ ಸಂಪರ್ಕದಿಂದ ಮೂವರಿಗೆ ಕೊರೊನಾ ವೈರಸ್ ಸೋಂಕು ಬಾಧಿಸಿದೆ. ಮಂಗಳವಾರ 12 ಮಂದಿ ಕೊರೊನಾ ವೈರಸ್ ಸೋಂಕಿನಿಂದ ಮುಕ್ತರಾಗಿದ್ದಾರೆ.
       ಕಣ್ಣೂರು ಜಿಲ್ಲೆಯಲ್ಲಿ 5, ಎರ್ನಾಕುಳಂನಲ್ಲಿ 4, ತಿರುವನಂತಪುರ, ಆಲಪ್ಪುಳ, ಕಾಸರಗೋಡಿನಲ್ಲಿ ತಲಾ ಒಬ್ಬರಂತೆ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಕೇರಳದಲ್ಲಿ ಈ ವರೆಗೆ 336 ಮಂದಿಗೆ ಕೊರೊನಾ ವೈರಸ್ ಸೋಂಕು ಬಾಧಿಸಿದ್ದು, ಪ್ರಸ್ತುತ 263 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವರೆಗೆ 71 ಮಂದಿ ಗುಣಮುಖರಾಗಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ ಕೊರೊನಾ ವೈರಸ್ ಸೋಂಕು ದೃಢಗೊಳ್ಳುವುದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಬಾಧಿತರ ಸಂಖ್ಯೆ 152 ಕ್ಕೇರಿದೆ.
        ರಾಜ್ಯದಲ್ಲಿ 1,46,686 ಮಂದಿ ನಿಗಾದಲ್ಲಿದ್ದಾರೆ. ಅವರಲ್ಲಿ 752 ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. 145934 ಮಂದಿ ಮನೆಗಳಲ್ಲಿ ನಿಗಾದಲ್ಲಿದ್ದಾರೆ. ಮಂಗಳವಾರ ಒಟ್ಟು 131 ಮಂದಿಯನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ತನಕ 11,232 ಸ್ಯಾಂಪಲ್‍ಗಳನ್ನು ಪರಿಶೀಲನೆಗೆ ಕಳುಹಿಸಲಾಗಿದ್ದು, ಅದರಲ್ಲಿ 10250 ನೆಗೆಟಿವ್ ಫಲಿತಾಂಶ ಬಂದಿದೆ.
ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ ಕೊರೊನಾ ವೈರಸ್ ಸೋಂಕಿತರು ಮೊಗ್ರಾಲ್, ಮಧೂರು, ಉದುಮ ಮತ್ತು ಪಳ್ಳಿಕೆರೆ ನಿವಾಸಿಗಳಾಗಿದ್ದಾರೆ. ಇವರಲ್ಲಿ 67 ವರ್ಷದ ವೃದ್ಧರೂ, 10 ವರ್ಷದ ಬಾಲಕನೂ ಇದ್ದಾನೆ.
        ಇವರಲ್ಲಿ ಇಬ್ಬರು ದುಬೈಯಿಂದ ಬಂದವರು ಹಾಗು ಇನ್ನಿಬ್ಬರು ಇವರ ಸಂಪರ್ಕದಲ್ಲಿದ್ದವರು. ಜಿಲ್ಲೆಯಲ್ಲಿ ಒಟ್ಟು 11,87 ಮಂದಿ ನಿಗಾದಲ್ಲಿದ್ದು, 10856 ಮಂದಿ ಮನೆಗಳಲ್ಲೂ, 231 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ಹೊಸದಾಗಿ 14 ಮಂದಿಯನ್ನು ಐಸೋಲೇಷನ್‍ಗೆ ದಾಖಲಿಸಲಾಗಿದೆ. ಶುಕ್ರವಾರ 32 ಸ್ಯಾಂಪಲ್‍ಗಳನ್ನು ಕಳುಹಿಸಲಾಗಿದೆ. ಒಟ್ಟು 1777 ಸ್ಯಾಂಪಲ್‍ಗಳಲ್ಲಿ ಲಭ್ಯ 1000 ಸ್ಯಾಂಪಲ್‍ಗಳು ನೆಗೆಟಿವ್ ಆಗಿದೆ. 624 ಮಂದಿಯ ಫಲಿತಾಂಶ ಬರಬೇಕಷ್ಟೆ.
          ಕಾಸರಗೋಡಿನಲ್ಲಿ ಪೆÇಲೀಸ್ ಕ್ರಮ ಬಿಗಿ :
    ಕೋವಿಡ್ 19 ಬಾ„ತರು ಅತ್ಯಧಿಕ ಸಂಖ್ಯೆಯಲ್ಲಿರುವ ಕಾಸರಗೋಡು ಜಿಲ್ಲೆಯಲ್ಲಿ ಪೆÇಲೀಸ್ ಕ್ರಮವನ್ನು ಬಿಗಿಗೊಳಿಸಲಾಗಿದೆ. ಚೆಂಗಳ, ಮೊಗ್ರಾಲ್ ಪುತ್ತೂರು, ಚೆಮ್ನಾಡ್, ಮಧೂರು, ಉದುಮ, ಪಳ್ಳಿಕ್ಕರೆ ಗ್ರಾಮ ಪಂಚಾಯತ್‍ಗಳ ವ್ಯಾಪ್ತಿಯಲ್ಲಿ ಮತ್ತು ಕಾಸರಗೋಡು ನಗರಸಭೆ ವ್ಯಾಪ್ತಿ ಪ್ರದೇಶಗಳಲ್ಲಿ ಕೋವಿಡ್ 19 ಬಾಧಿತರು ಅತ್ಯ„ಕ ಪ್ರಮಾಣದಲ್ಲಿದ್ದಾರೆ. ಈ ಪ್ರದೇಶಗಳನ್ನು ಕೋವಿಡ್ ಕಂಟಿಯನ್‍ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಈ ಪ್ರದೇಶದ ಜನ ಮನೆಗಳಿಂದ ಹೊರಗಿಳಿಯಕೂಡದು ಎಂದು ಐ.ಜಿ. ವಿಜಯ್ ಸಖಾರೆ ಆದೇಶ ನೀಡಿದ್ದಾರೆ.
      ಅನಿವಾರ್ಯ ಸಾಮಾಗ್ರಿಗಳನ್ನು ಮತ್ತು ಔಷಧಗಳನ್ನು ಪೆÇಲೀಸರು ಮನೆಗಳಿಗೇ ತಲಪಿಸುವರು. ಸಂಚಾರವನ್ನು ಪೆÇಲೀಸರು ಕಡ್ಡಾಯವಾಗಿ ನಿಯಂತ್ರಿಸಿದ್ದಾರೆ. ಈ ವಲಯಗಳಲ್ಲಿ ಪೆÇಲೀಸ್ ಡ್ರೋನ್ ನಿಗಾ ಆರಂಭಿಸಲಾಗಿದೆ. ಮನೆಗಳಿಂದ ಹೊರಗಿಳಿಯುವವರ ವಿರುದ್ಧ ಪೆÇಲೀಸರು ಕೇಸು ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ ಜಿಲ್ಲಾಡಳಿತೆ ಸಿದ್ಧಪಡಿಸಿದ ಕೊರೊನಾ ಕೇರ್ ಸೆಂಟರ್‍ಗಳಿಗೆ ಸರಕಾರಿ ಕ್ವಾರಂಟೈನ್‍ಗೆ ವರ್ಗಾಯಿಸಲಾಗುವುದು.
      ಕೋವಿಡ್ 19 ಹೆಚ್ಚಳ ನಿಯಂತ್ರಣ ನಿಟ್ಟಿನಲ್ಲಿ ಮನೆಗಳಲ್ಲೇ ಉಳಿಯಬೇಕು ಮತ್ತು ಸಾಮಾಜಿಕ ಅಂತರ ಪಾಲಿಸಬೇಕು. ರಾಜ್ಯ ಸರಕಾರದ ಆದೇಶಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಕೋವಿಡ್ 19 ಖಚಿತಗೊಂಡಿರುವ ಎಲ್ಲ ಪ್ರದೇಶಗಳಲ್ಲೂ ಪೆÇಲೀಸ್ ಕ್ರಮಗಳನ್ನು ಬಿಗಿಗೊಳಿಸಲಾಗಿದೆ. ಜಿಲ್ಲೆಯ ಎಲ್ಲ ಮನೆಗಳಲ್ಲೂ
       ಅನಿವಾರ್ಯ ಸಾಮಾಗ್ರಿ, ಔಷಧ ಅಗತ್ಯವಿರುವವರು ವಾಟ್ಸ್ ಆಪ್ ಸಂದೇಶ  ನೀಡಿದರೆ ಸಾಕು, ಪೆÇಲೀಸರು ಮನೆಗಳಿಗೆ ಇವನ್ನು ತಲಪಿಸುವರು ಎಂದು ಐ.ಜಿ. ತಿಳಿಸಿದರು.
      ದಾಖಲಾತಿ ಆರಂಭ : ಕಾಸರಗೋಡು ಮೆಡಿಕಲ್ ಕಾಲೇಜನ್ನು ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಡುಗೊಳಿಸಿದ ಮೇಲೆ ಕೋವಿಡ್ 19 ಸೋಂಕು ಬಾ„ತರ ದಾಖಲಾತಿ ಆರಂಭಗೊಂಡಿದೆ. ಎ.6ರಂದು ಕೋವಿಡ್ 19 ಸೋಂಕು ಖಚಿತಗೊಂಡ 9 ಮಂದಿಯಲ್ಲಿ 6 ಮಂದಿಯನ್ನು ಈ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರನ್ನು ಅವರ ಸಂಬಂ„ಕರು ಈಗಾಗಲೇ ದಾಖಲಾಗಿರುವ ಜಿಲ್ಲಾ-ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ದೌತ್ಯ ಜಿಲ್ಲಾ ಯೋಜನೆ ಪ್ರಬಂಧಕ ಡಾ.ರಾಮನ್ ಸ್ವಾತಿ ವಾಮನ್ ತಿಳಿಸಿದರು.
       ಯುದ್ಧೋಪಾದಿಯಲ್ಲಿ  ತಳಹದಿಯಲ್ಲಿ ಸಿದ್ಧಪಡಿಸಿರುವ ಆಸ್ಪತ್ರೆಯಲ್ಲಿ ಸುಮಾರು 200 ಹಾಸುಗೆಗಳು, ಹತ್ತು ಐ.ಸಿ.ಯು. ಹಾಸುಗೆಗಳು ಸಜ್ಜುಗೊಂಡಿವೆ. ದೇಶದಾದ್ಯಂತ ಜಾರಿಗೊಂಡಿರುವ ಲಾಕ್ ಡೌನ್ ಕಾರಣ ವಿವಿಧೆಡೆಗಳಲ್ಲಿ ಬಾಕಿಯಾಗಿದ್ದ ಆಸ್ಪತ್ರೆಯ ಉಪಕರಣಗಳು ಈಗ ಒಂದೊಂದಾಗಿ ತಲಪತೊಡಗಿವೆ. ತುರ್ತು ಪರಿಸ್ಥಿತಿಯಲ್ಲಿ ಅಗತ್ಯವಿರುವ ಪೆÇೀರ್ಟಿಬಲ್ ಎಕ್ಸ್‍ರೇ ಯೂನಿಟ್ ತತ್‍ಕ್ಷಣ ತಲಪಲಿದೆ. ಸುಮಾರು 17 ಸಿಬ್ಬಂದಿ ಅಲ್ಲದೆ ತಿರುವನಂತಪುರ ಮೆಡಿಕಲ್ ಕಾಲೇಜಿನ ಸಹಾಯಕ ವರಿಷ್ಠಾ„ಕಾರಿ ಡಾ.ಎಸ್.ಎಸ್.ಸಂತೋಷ್  ಕುಮಾರ್ ಅವರ ನೇತೃತ್ವದಲ್ಲಿ 27 ಮಂದಿಯ ಪರಿಣತರ ತಂಡ ಆಗಮಿಸಿ ಇಲ್ಲಿ ಸೇವೆ ಸಲ್ಲಿಸುತ್ತಿದೆ. ಮುಖ್ಯಮಂತ್ರಿ ಅವರ ಆದೇಶ ಪ್ರಕಾರ ಅವರು ಇಲ್ಲಿಗೆ ಆಗಮಿಸಿದ್ದಾರೆ.
         22 ಕೇಸುಗಳ ದಾಖಲು : ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 22 ಕೇಸುಗಳನ್ನು ದಾಖಲಿಸಲಾಗಿದೆ. 22 ಮಂದಿಯನ್ನು ಬಂ„ಸಲಾಗಿದೆ. 14 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಠಾಣೆಯಲ್ಲಿ 2, ಬೇಕಲದಲ್ಲಿ 2, ಮೇಲ್ಪರಂದಲ್ಲಿ 3, ವೆಳ್ಳರಿಕುಂಡ್ 1, ರಾಜಪುರಂ 4, ಚಂದೇರ 4, ಹೊಸದುರ್ಗ 2, ಅಂಬಲತ್ತರ 1 ಕೇಸುಗಳನ್ನು ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ 317 ಕೇಸುಗಳನ್ನು ದಾಖಲಿಸಲಾಗಿದೆ. 539 ಮಂದಿಯನ್ನು ಬಂ„ಸಲಾಗಿದೆ. 246 ವಾಹನಗಳನ್ನು ವಶಪಡಿಸಲಾಗಿದೆ.
                     

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries