HEALTH TIPS

ತಿರುಗಾಡುವವರು ಜೋಪಾನ-- ಪೆÇಲೀಸ್ ಡ್ರೋನ್ ನಿಗಾ ಆರಂಭ

     
     ಕಾಸರಗೋಡು: ಪೆÇಲೀಸ್ ನೇತೃತ್ವದಲ್ಲಿ ಡಬ್ಬಲ್ ಲಾಕ್ ಡೌನ್ ಆದೇಶ ಜಾರಿಯಲ್ಲಿರುವ 6 ಗ್ರಾಮಪಂಚಾಯತ್ ಗಳಲ್ಲಿ ಮತ್ತು ಕಾಸರಗೋಡು ನಗರಸಭೆ ವ್ಯಾಪ್ತಿಯಲ್ಲಿ ಆದೇಶ ಉಲ್ಲಂಘಿಸುವವರನ್ನು ಪತ್ತೆಮಾಡುವ ನಿಟ್ಟಿನಲ್ಲಿ ಡ್ರೋನ್ ನಿಗಾ ಆರಂಭಗೊಂಡಿದೆ.
         ಪಳ್ಳಿಕ್ಕರೆ, ಚೆಮ್ನಾಡ್, ಉದುಮಾ, ಚೆಂಗಳ, ಮಧೂರು, ಮೊಗ್ರಾಲ್ ಪುತ್ತೂರು ಗ್ರಾಮಪಂಚಾಯತ್ ಗಳು ಮತ್ತು ಕಾಸರಗೋಡು ನಗರಸಭೆಯಲ್ಲಿ ಈ ಡ್ರೋನ್ ನಿಗಾ ಆರಂಭಿಸಲಾಗಿದೆ. ಆದೇಶ ಉಲ್ಲಂಘನೆ ನಡೆಸಿ ಈ ಮೂಲಕ ಪತ್ತೆಯಾಗಿ ಬಂಧಿತರಾಗುವವರನ್ನು ರಾಜ್ಯ ಸರಕಾರದ ವಿಶೇಷ ನಿಗಾ ಕೇಂದ್ರ ಗಳಿಗೆ ವರ್ಗಾಯಿಸಲಾಗುವುದು ಎಂದು ಐ.ಜಿ. ವಿಜಯ್ ಸಖಾರೆ ತಿಳಿಸಿದರು.
     7 ಡ್ರೋನ್ ಗಳನ್ನು ಕಾಸರಗೋಡು ಜಿಲ್ಲೆಯಲ್ಲಿ ಪೆÇಲೀಸರು ಸಿದ್ಧಪಡಿಸಿದ್ದಾರೆ. ಈ ನಿಗಾ ಚಟುವಟಿಕೆಗಳಿಗೆ ಕೋಯಿಕೋಡ್ ವಲಯ ಐ.ಜಿ. ಅಶೋಕ್ ಯಾದವ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಎಸ್.ಸಾಬು, ಟೆಲಿ ಕಮ್ಯೂನಿಕೇಷನ್ ಎಸ್.ಪಿ.ಡಿ.ಶಿಲ್ಪಾ, ಡಿ.ವೈ.ಎಸ್.ಪಿ. ಪಿ.ಪಿ.ಬಾಲಕೃಷ್ಣನ್ ನಾಯರ್, ಸಿ.ಐ.ಅಬ್ದುಲ್ ರಹೀಂ ಮೇಲ್ನೋಟ ವಹಿಸುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries