ಕಾಸರಗೋಡು: ಲೋಕ್ ಡೌನ್ ಹಿನ್ನೆಲೆಯಲ್ಲಿ ಫೆÇಟೋಗ್ರಾಫಿ ವಲಯದ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ತುತ್ತಾಗಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ 1000 ದಷ್ಟು ಮಂದಿ ಫೆÇಟೋಗ್ರಾಫಿ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ. ಸ್ಟುಡಿಯೋಗಳನ್ನು ತೆರೆಯಲು ಸಾಧ್ಯವಾಗದೆ ಸ್ಟುಡಿಯೋ ಮಾಲಕರೂ, ಕಾರ್ಮಿಕರು ಕೆಲಸವಿಲ್ಲದೆ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ. ಕೇಂದ್ರ-ರಾಜ್ಯ ಸರಕಾರಗಳ ಪ್ಯಾಕೇಜ್‍ಗಳಲ್ಲಿ ಈ ಕ್ಷೇತ್ರದಲ್ಲಿ ದುಡಿಯುವವರನ್ನು ಸೇರ್ಪಡೆಗೊಳಿಸಿಲ್ಲವೆಂದು ದೂರಲಾಗಿದೆ. ಬ್ಯಾಂಕ್‍ಗಳು, ಖಾಸಗಿ ಹಣಕಾಸು ಸಂಸ್ಥೆಗಳಿಂದ ಲಕ್ಷಾಂತರ ರೂಪಾಯಿ ಸಾಲ ಪಡೆದು ಹಲವು ಮಂದಿ ಸ್ಟುಡಿಯೋಗಳನ್ನು ನಡೆಸುತ್ತಿದ್ದಾರೆ. ಆದರೆ ವಿವಾಹ, ಉತ್ಸವಗಳ ಸೀಸನ್‍ಗಳಲ್ಲಿ ಮಾತ್ರವೇ ವರಮಾನ ನಿರೀಕ್ಷಿಸಿ ಜೀವನ ಸಾಗಿಸುವ ಈ ಕ್ಷೇತ್ರದಲ್ಲಿ ದುಡಿಯುವವರ ಪರಿಸ್ಥಿತಿ ಕಂಗಾಲಾಗಿದೆ. ಸರಕಾರದ ಧನಸಹಾಯ ಯೋಜನೆಗಳಲ್ಲಿ ಈ ಕ್ಷೇತ್ರದಲ್ಲಿ ದುಡಿಯುವವರನ್ನು ಸೇರ್ಪಡೆಗೊಳಿಸಬೇಕೆಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸುವುದಾಗಿ ಆಲ್ ಕೇರಳ ಫೆÇಟೋಗ್ರಾಫರ್ಸ್ ಅಸೋಸಿಯೇಶನ್(ಎಕೆಪಿಎ) ಜಿಲ್ಲಾ ಸಮಿತಿ ಅಧ್ಯಕ್ಷ ಹರೀಶ್ ಪಾಲಕುನ್ನು ಅವರು ತಿಳಿಸಿದ್ದಾರೆ.

