ನ್ಯೂಯಾರ್ಕ್: ನ್ಯೂಜೆರ್ಸಿಯಲ್ಲಿ ವೈದ್ಯರಾಗಿದ್ದ ಭಾರತೀಯ ಮೂಲದ ತಂದೆ ಹಾಗೂ ಮಗಳು ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯಿಂದಾಗಿ ಮೃತಪಟ್ಟಿದ್ದಾರೆ. ಅವರ ನಿಧನ ಸಹಿಸಿಕೊಳ್ಳಲಾಗದು ಎಂದಿರುವ ಗೌರ್ವನರ್ ಫಿಲ್ ಮರ್ಫಿ, ಇತರ ಜೀವವನ್ನು ಉಳಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದಿದ್ದಾರೆ.
78 ವರ್ಷದ ಸತ್ಯೇಂದರ್ ದೇವ್ ಖನ್ನಾ, ಅವರ ಪುತ್ರಿ ಪ್ರಿಯಾ ಖನ್ನಾ 43 ಕೋವಿಡ್- 19 ನಿಂದ ಮೃತಪಟ್ಟ ವೈದ್ಯರು. ನ್ಯೂಜೆರ್ಸಿಯ ವಿವಿಧ ಆಸ್ಪತ್ರೆಗಳಲ್ಲಿ ದಶಕಗಳ ಕಾಲ ಸರ್ಜನ್, ಸರ್ಜಿಕಲ್ ವಿಭಾಗದ ಮುಖ್ಯಸ್ಥರಾಗಿ ಸತ್ಯೇಂದರ್ ದೇವ್ ಖನ್ನಾ ಸೇವೆ ಸಲ್ಲಿಸಿದ್ದರು. ಇಂಟರ್ನಲ್ ಮೆಡಿಸನ್ ಮತ್ತು ನೆಪೆÇ್ರೀಲಾಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಪ್ರಿಯಾ ಖನ್ನಾ, ಆರ್ ಡಬ್ಲ್ಯೂಜೆ ಬರ್ನಾಬಸ್ ಆರೋಗ್ಯ ಸಂಸ್ಥೆಯ ಅಂಗವಾಗಿರುವ ಯುನಿಯನ್ ಆಸ್ಪತ್ರೆಯ ಚೀಪ್ ರೆಸಿಡೆಂಟ್ಸ್ ಆಗಿದ್ದರು.
ಡಾ. ಸತ್ಯೇಂದರ್ ದೇವ್ ಖನ್ನಾ ಹಾಗೂ ಡಾ. ಪ್ರಿಯಾ ಖನ್ನಾ ತಂದೆ- ಮಗಳು. ಇತರರಿಗೆ ನೆರವಾಗಲು ಹೋಗಿ ತಮ್ಮ ಜೀವವನ್ನೇ ತ್ಯಾಗ ಮಾಡಿದ್ದಾರೆ. ಇದು ಆರೋಗ್ಯ ಮತ್ತು ಔಷಧಕ್ಕೆ ಮೀಸಲಾದ ಕುಟುಂಬ. ಮಾತುಗಳಿಂದ ಸಂತಾಪ ವ್ಯಕ್ತಪಡಿಸಲು ಆಗದು ಎಂದು ನ್ಯೂಜೆರ್ಸಿ ಗೌರ್ನರ್ ಮರ್ಫಿ ಟ್ವೀಟ್ ಮಾಡಿದ್ದಾರೆ.
ಕ್ಲಾರಾ ಮಾಸ್ ಮೆಡಿಕಲ್ ಸೆಂಟರ್ ನಲ್ಲಿ ಡಾ. ಸತ್ಯೇಂದರ್ ದೇವ್ ಖನ್ನಾ ಹಾಗೂ ಪ್ರಿಯಾ ಖನ್ನಾ ಇಬ್ಬರು ಮೃತಪಟ್ಟಿದ್ದಾರೆ. ಡಾ. ಸತ್ಯೇಂದರ್ ದೇವ್ ಖನ್ನಾ ಪತ್ನಿ ಕೊಮ್ಲಿಸ್ ಖನ್ನಾ ಶಿಶು ತಜ್ಞೆಯಾಗಿದ್ದಾರೆ. ಮತ್ತಿಬ್ಬರು ಮಕ್ಕಳಾದ ಸುಗಂಧ ಖನ್ನಾ, ಫಿಜಿಶೀಯನ್ ಆಗಿದ್ದರೆ ಅನಿಶಾ ಖನ್ನಾ ಶಿಶು ತಜ್ಞೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅನೇಕ ಜನರನ್ನು ಬದುಕುಳಿಸಿರುವ ಅವರ ಕುಟುಂಬಕ್ಕೆ ನಾವು ಬದ್ಧವಾಗಿದ್ದೇವೆ ಎಂದು ಮರ್ಫಿ ಸ್ಮರಿಸಿದ್ದಾರೆ.
Dr. Satyender Dev Khanna and Dr. Priya Khanna were father and daughter. They both dedicated their lives to helping others. This is a family dedicated to health and medicine. Our words cannot amply express our condolences.
89 people are talking about this



