ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಮತ್ತೆ 10 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. ಇದರೊಂದಿಗೆ ಜಿಲ್ಲೆಯಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 14ಕ್ಕೇರಿದೆ.
ಮೇ 4 ರಂದು ಮಹಾರಾಷ್ಟ್ರದಿಂದ ಬಂದ ಪೈವಳಿಕೆ ನಿವಾಸಿಯನ್ನು ತಲಪಾಡಿಯಿಂದ ಕಾರಿನಲ್ಲಿ ಕರೆದುಕೊಂಡು ಬಂದ(50 ವರ್ಷ) ವ್ಯಕ್ತಿ, ಇವರೊಂದಿಗಿದ್ದ ಮಹಿಳೆ(35ವರ್ಷ)ಗೆ ರೋಗ ಬಾಧಿಸಿದೆ. ಇವರ 11 ಮತ್ತು 8 ವರ್ಷದ ಮಕ್ಕಳಿಗೂ ರೋಗ ದೃಢೀಕರಿಸಲಾಗಿದೆ. ಕಾರು ಚಾಲಕ ಮೂರು ಬಾರಿ ಕಾಂಞಂಗಾಡ್ ಜಿಲ್ಲಾ ಆಸ್ಪತ್ರೆಗೆ ಕ್ಯಾನ್ಸರ್ ರೋಗಿಯೊಂದಿಗೆ ಬಂದಿದ್ದು, ಈತ ಆಸ್ಪತ್ರೆಯ ಕ್ಯಾನ್ಸರ್ ವಾರ್ಡ್, ಲ್ಯಾಬ್, ಎಕ್ಸ್‍ರೇ ರೂಂ ಮೊದಲಾದವುಗಳಿಗೆ ಪ್ರವೇಶಿಸಿದ್ದಾರೆ. ಜಿಲ್ಲಾ ಆಸ್ಪತ್ರೆಯ ಮತ್ತು ಕಾಸರಗೋಡು ಜನರಲ್ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತರಿಗೆ ರೋಗ ದೃಢೀಕರಿಸಲಾಗಿದೆ. ಕಾಸರಗೋಡು ನಗರಸಭೆ ವ್ಯಾಪ್ತಿಯ 65 ವರ್ಷ ಪ್ರಾಯದ ವ್ಯಕ್ತಿಗೂ ರೋಗ ಬಾಧಿಸಿದೆ. ಬೆಂಗಳೂರಿನಿಂದ ಬಂದ 26 ವರ್ಷದ ಕಳ್ಳಾರು ಪೂಡಂಕಲ್ಲಿನ ಯುವಕನಿಗೆ ಸೋಂಕು ದೃಢೀಕರಿಸಲಾಗಿದೆ. ಇನ್ನಿಬ್ಬರು ಕುಂಬಳೆಯ 58, 31 ವರ್ಷದ ವ್ಯಕ್ತಿಗಳು ಮಹಾರಾಷ್ಟ್ರದಿಂದ ಬಂದವರು. ಅಂತಾರಾಜ್ಯ ಪ್ರಯಾಣಿಕರಿಂದ ರೋಗ ವ್ಯಾಪನ ಸಾಧ್ಯತೆ ಹೆಚ್ಚುತ್ತಿರುವುದರಿಂದ ಸಾರ್ವಜನಿಕರು ಜಾಗ್ರತೆ ಪಾಲಿಸಬೇಕೆಂದು ಜಿಲ್ಲಾ ವೈದ್ಯಾಧಿಕಾರಿ ಡಾ.ರಾಂದಾಸ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್‍ಬಾಬು ತಿಳಿಸಿದ್ದಾರೆ.
ಕೇರಳ ರಾಜ್ಯದಲ್ಲಿ 26 ಮಂದಿಗೆ ಸೋಂಕು!:
ಕೇರಳ ರಾಜ್ಯದಲ್ಲಿ ಮತ್ತೆ 26 ಮಂದಿಗೆ ಕೊರೊನಾ ವೈರಸ್ ಸೋಂಕು ಬಾಧಿಸಿದೆ. ಕಾಸರಗೋಡು-10, ಮಲಪ್ಪುರಂ-5, ಪಾಲ್ಘಾಟ್-3, ವಯನಾಡು-3, ಕಣ್ಣೂರು-2, ಕಲ್ಲಿಕೋಟೆ-1, ಇಡುಕ್ಕಿ-1, ಪತ್ತನಂತಿಟ್ಟ-1 ಎಂಬಂತೆ ಗುರುವಾರ ರೋಗ ದೃಢೀಕರಿಸಲಾಗಿದೆ. ಇದೇ ವೇಳೆ ರಾಜ್ಯದಲ್ಲಿ ಗುರುವಾರ ಮೂವರು ಗುಣಮುಖರಾಗಿದ್ದಾರೆ. ಕೊಲ್ಲಂನಲ್ಲಿ ಇಬ್ಬರು ಹಾಗು ಕಣ್ಣೂರಿನಲ್ಲಿ ಒಬ್ಬರು ಗುಣಮುಖರಾಗಿದ್ದಾರೆ. ಸೋಂಕು ಬಾಧಿತರಲ್ಲಿ 14 ಮಂದಿ ಹೊರಗಿನಿಂದ ಬಂದವರು. 7 ಮಂದಿ ವಿದೇಶದಿಂದ, ಮುಂಬೈಯಿಂದ ನಾಲ್ವರು, ಚೆನ್ನೈಯಿಂದ ಇಬ್ಬರು, ಬೆಂಗಳೂರಿನಿಂದ ಬಂದ ಒಬ್ಬರಿಗೆ ರೋಗ ಬಾಧಿಸಿದೆ. ಇಡುಕ್ಕಿಯಲ್ಲಿ ಸರ್ವೇಲೆನ್ಸ್ ಪರೀಕ್ಷೆಯಲ್ಲಿ ಬೇಕರಿ ಮಾಲಕನಿಗೆ ರೋಗ ಪತ್ತೆಯಾಗಿದೆ. ಸಂಪರ್ಕದಿಂದ 11 ಮಂದಿಗೆ ರೋಗ ಬಾಧಿಸಿದೆ. ರೋಗ ಬಾಧಿತರಲ್ಲಿ ಕಾಸರಗೋಡಿನ ಇಬ್ಬರು ಆರೋಗ್ಯ ಕಾರ್ಯಕರ್ತರು ಹಾಗು ವಯನಾಡಿನ ಒಬ್ಬರು ಪೆÇಲೀಸ್‍ಗೆ ರೋಗ ಬಾಧಿಸಿದೆ.
27 ಕೇಸು ದಾಖಲು : ಲಾಕ್ ಡೌನ್ ಉಲ್ಲಂಘನೆ ಆರೋಪದಲ್ಲಿ ಜಿಲ್ಲೆಯಲ್ಲಿ 27 ಕೇಸುಗಳನ್ನು ಪೆÇಲೀಸರು ದಾಖಲಿಸಿದ್ದಾರೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 3, ಕುಂಬಳೆ-1, ವಿದ್ಯಾನಗರ-11, ಕಾಸರಗೋಡು-2, ಬದಿಯಡ್ಕ-4, ಮೇಲ್ಪರಂಬ-4, ಬೇಕಲ-1, ಚೀಮೇನಿ-1 ಎಂಬಂತೆ ಕೇಸುಗಳನ್ನು ದಾಖಲಿಸಲಾಗಿದೆ. ವಿವಿಧ ಕೇಸುಗಳಿಗೆ ಸಂಬಂಧಿಸಿ ಐದು ಮಂದಿಯನ್ನು ಬಂಧಿಸಲಾಗಿದೆ. ಮೂರು ವಾಹನಗಳನ್ನು ವಶಪಡಿಸಲಾಗಿದೆ. ಜಿಲ್ಲೆಯಲ್ಲಿ ಈ ತನಕ 2154 ಕೇಸುಗಳನ್ನು ದಾಖಲಿಸಿದ್ದು, 2782 ಮಂದಿಯನ್ನು ಬಂಧಿಸಲಾಗಿದೆ. 888 ವಾಹನಗಳನ್ನು ವಶಪಡಿಸಲಾಗಿದೆ.
ಗಡಿಗಳಲ್ಲಿ ಸಶಸ್ತ್ರ ಪೆÇಲೀಸರ ನೇಮಕ :
ಕರ್ನಾಟಕದ ಕೆಲವು ಗಡಿಗಳ ಅಡ್ಡದಾರಿಗಳ ಮೂಲಕ ಪಾಸ್‍ಗಳಿಲ್ಲದೆ ಜನರನ್ನು ಅಕ್ರಮವಾಗಿ ಜಿಲ್ಲೆಯ ಮೂಲಕ ಕೇರಳಕ್ಕೆ ಕರೆ ತರಲಾಗುತ್ತಿರುವುದನ್ನು ತಡೆಗಟ್ಟಲು ಇಂಥಾ ಪ್ರದೇಶಗಳಲ್ಲಿ ಸಶಸ್ತ್ರ ಪೆÇಲೀಸರನ್ನು ನೇಮಿಸುವ ಕ್ರಮ ಚುರುಕುಗೊಳಿಸಲಾಗಿದೆ. ತಲಪ್ಪಾಡಿ ಗಡಿ ಚೆಕ್‍ಪೆÇೀಸ್ಟ್ ಅಲ್ಲದೆ, ಮಂಜೇಶ್ವರ ಪೆÇಲೀಸ್ ಠಾಣೆ ವ್ಯಾಪ್ತಿಯ ಪ್ರದೇಶಗಳ 22 ಗಡಿ ಪ್ರದೇಶಗಳಲ್ಲಿ, ಆದೂರಿನ 9 ಗಡಿ ಪ್ರದೇಶಗಳಲ್ಲಿ, ಬದಿಯಡ್ಕದ 3 ಗಡಿ ಪ್ರದೇಶಗಳಲ್ಲಿ, ಬಂದಡ್ಕ-ಮಾಣಿಮೂಲೆ, ಪಾಣತ್ತೂರು ಪ್ರದೇಶಗಳಲ್ಲಿ ಸಶಸ್ತ್ರ ಪೆÇಲೀಸರನ್ನು ನೇಮಿಸಲಾಗಿದೆ.
ಕ್ವಾರೆಂಟೈನ್ ಆದೇಶ ಉಲ್ಲಂಘನೆ : 8 ಕೇಸು : ಕ್ವಾರೆಂಟೈನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಮೇ 12 ಮತ್ತು 13 ರಂದು ಜಿಲ್ಲೆಯಲ್ಲಿ 8 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಆರೋಪಿಗಳನ್ನು ಸರಕಾರಿ ನಿಯಂತ್ರಣದ ನಿಗಾ ಕೇಂದ್ರಗಳಿಗೆ ದಾಖಲಿಸಲಾಗಿದೆ.