ಕಾಸರಗೋಡು: ಮಂಜೇಶ್ವರ ಗಡಿ ಚೆಕ್ ಪೆÇೀಸ್ಟ್ ನಲ್ಲಿ ಶನಿವಾರ(ಮೇ 9) ಇತರ ರಾಜ್ಯಗಲಿಂದ 362 ಮಂದಿ ಕೇರಳ ಪ್ರವೇಶ ಮಾಡಿದ್ದಾರೆ. 672 ಮಂದಿಗೆ ಪಾಸ್ ಮಂಜೂರು ಮಾಡಲಾಗಿದೆ.
ಈ ವರೆಗೆ ಮಂಜೇಶ್ವರ ಚೆಕ್ ಪೆÇೀಸ್ಟ್ ಮೂಲಕ 4017 ಮಂದಿ ಕೇರಳಕ್ಕೆ ಆಗಮಿಸಿದ್ದಾರೆ. 9840 ಮಂದಿಗೆ ಪಾಸ್ ಮಂಜೂರು ಮಾಡಲಾಗಿದೆ. ಕಾಸರಗೋಡು ಜಿಲ್ಲೆಗೆ ಈ ವರೆಗೆ 1299 ಮಂದಿ ಆಗಮಿಸಿದ್ದಾರೆ.
ಗಡಿ ಪ್ರದೇಶಕ್ಕೆ ಪಾಸ್ ಇಲ್ಲದೆ ಆಗಮಿಸಿರುವ ಮಂದಿಯ ಸಮಸ್ಯೆ ಪರಿಹಾರಕ್ಕೆ ಕಂದಾಯ ಸಚಿವ ಇ.ಚಂದ್ರಶೇಖರನ್ ಕ್ರಮ ಕೈಗೊಂಡಿದ್ದಾರೆ. ಇವರಲ್ಲಿ ಕಾಸರಗೋಡು ಜಿಲ್ಲೆಯವರನ್ನು ಪತ್ತೆಮಾಡಿ, ಅವರ ದಾಖಲೆ ಪತ್ರಗಳನ್ನು ಪರಿಶೀಲಿಸಿ ಜಿಲ್ಲೆಯ ಪ್ರವೇಶ ಮತ್ತು ಕ್ವಾರೆಂಟೈನ್ ದಾಖಲಾತಿಗೆ ಆದೇಶ ನೀಡಿದ್ದಾರೆ.

