HEALTH TIPS

ವ್ಯಾಪಾರಿ ಸಂಘಟನೆಯಿಂದ ಸದಸ್ಯನ ತಾತ್ಕಾಲಿಕ ಅಮಾನತು


          ಕುಂಬಳೆ: ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಸದಸ್ಯರಾಗಿದ್ದು, ಸಂಘಟನಾ ವಿರುದ್ದ ಕಾರ್ಯಾಚರಿಸಿದ ಹಿನ್ನೆಲೆಯಲ್ಲಿ ಮೊಹಮ್ಮದ್ ರಫೀಕ್ ಕೆ.ಐ  ಅವರನ್ನು  ಕುಂಬಳೆ ಸಮಿತಿಯಿಂದ ಮುಂದಿನ ಆರು ತಿಂಗಳಿಗೆ ಅಮಾನತುಗೊಳಿಸಲಾಗಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
     ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ವ್ಯಾಪಾರಿಗಳ ಸಂಪೂರ್ಣ ಆಶೋತ್ತರಗಳಿಗಾಗಿ ಕಾರ್ಯ ನಿರ್ವಹಿಸುವ ಸಂಘಟನೆಯಾಗಿ ದೇಶ ವ್ಯಾಪಕವಾಗಿ ಹೆಸರುಪಡೆದಿದೆ. ಸಂಘಟನೆಯ ಸದಸ್ಯರಾದವರು ಎಂದಿಗೂ ಸಂಘಟನಾ ವಿರುದ್ದ ನಿಲುವುಗಳನ್ನು ತಳೆಯುವುದು ಕ್ಷಮ್ಯವಲ್ಲ. ನಾಗರಿಕರಿಗೆ ಪ್ರಯೋಜನಕಾರಿಯಾಗುವ ಸಂಘಟನಾತ್ಮಕ ನಿಲುವುಗಳನ್ನು ದಿಕ್ಕರಿಸಿ, ಸಂಘಟನೆಗೆ ವಿರುದ್ದವಾಗಿ ಹೇಳಿಕೆಗಳನ್ನು ನೀಡುವ ಮೂಲಕ ಮೊಹಮ್ಮದ್ ರಫೀಕ್ ಕೆ.ಐ ನಿಯಮಗಳನ್ನು ಗಾಳಿಗೆ ತೂರಿ ಸಂಘಟನಾ ನಿಲುವುಗಳಿಗೆ ವಿರುದ್ದ ಕಾರ್ಯನಿರ್ವಹಿಸಿರುವುದು ತಿಳಿದುಬಂದಿರುವುದರಿಂದ ಅವರನ್ನು ಮುಂದಿನ ಆರು ತಿಂಗಳುಗಳ ವರೆಗೆ ಅಮಾನತುಗೊಳಿಸಲಾಗಿರುವುದಾಗಿ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಜಿಲ್ಲಾ ಸಮಿತಿ ಹಾಗೂ ಕುಂಬಳೆ ಘಟಕ ಜಂಟಿ ಪ್ರಕಟಣೆಯಲ್ಲಿ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries