ತಿರುವನಂತಪುರ: ಕೋವಿಡ್-19 ಲಾಕ್‍ಡೌನ್ ಹಿನ್ನೆಲೆಯಲ್ಲಿ ಮುಚ್ಚುಗಡೆಗೊಂಡಿದ್ದ ಮದ್ಯದಂಗಡಿ ಕೇರಳಾದ್ಯಂತ ಮೇ 28ರಿಂದ ತೆರೆದುಕೊಳ್ಳಲಿದೆ. ಬೆಳಗ್ಗೆ 9ರಿಂದ ಸಾಯಂಕಾಲ 5ರ ವರೆಗೆ ಮಾತ್ರ ಮದ್ಯ ಲಭ್ಯವಿರುವುದಾಗಿ ರಾಜ್ಯ ಅಬಕಾರಿ ಖಾತೆ ಸಚಿವ ಟಿ.ಪಿ ರಾಮಕೃಷ್ಣನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವರ್ಚುವಲ್ ಕ್ಯೂ(ಬೆವ್ ಕ್ಯೂ)ಮೂಲಕ ಬುಕ್ ಮಾಡಿ ಇ-ಟೋಕನ್ ಲಭಿಸಿದವರಿಗೆ ಮದ್ಯ ವಿತರಣೆ ನಡೆಸಲಾಗುವುದು. ಬೆಳಗ್ಗೆ 6ರಿಂದ ರಾತ್ರಿ 10ರ ವರೆಗೂ ಬುಕ್ಕಿಂಗ್ ನಡೆಯಲಿದೆ. ಟೋಕನ್ ಲಭಿಸದವರು ಮದ್ಯ ಮಾರಾಟ ಕೇಂದ್ರದ ಎದುರು ಬರಬೇಕಾಗಿಲ್ಲ ಎಂದು ತಿಳಿಸಿದ್ದಾರೆ. 612 ಬಾರ್ ಏಂಡ್ ರೆಸ್ಟಾರೆಂಟ್‍ಗಳ ಪೈಕಿ 576ಕ್ಕೆ ಮದ್ಯ ಮಾರಾಟಕ್ಕೆ ಅಂಗೀಕಾರ ಪಡೆದುಕೊಂಡಿದ್ದಾರೆ. ಬಾರ್‍ಗಳಲ್ಲಿ ಕುಳಿತು ಮದ್ಯಪಾನಕ್ಕೆ ಅವಕಾಶ ಕಲ್ಪಿಸದೆ, ಪಾರ್ಸೆಲ್‍ಮಾತ್ರ ನಡೆಯಲಿದೆ. ಕಂಟೈನ್‍ಮೆಂಟ್ ಹಾಗೂ ರೆಡ್ ಜೋನ್‍ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ ಎಂದು ಸಚಿವರು ತಿಳಿಸಿದ್ದಾರೆ.


