HEALTH TIPS

ಜನಪರ ಸೇವೆ ಒದಗಿಸುವಲ್ಲಿ ಮುಂಚೂಣಿಯಲ್ಲಿರುವ ಅಂಗನವಾಡಿಗಳು


      ಕಾಸರಗೋಡು: ಕೋವಿಡ್ 19 ಸೋಂಕು ಹರಡುತ್ತಿರುವ ವೇಳೆ ಜನಪರ ಸೇವೆ ಒದಗಿಸುವಲ್ಲಿ ಜಿಲ್ಲೆಯ ಅಂಗನವಾಡಿಗಳು ಮುಂಚೂಣಿಯಲ್ಲಿವೆ. ಲಾಕ್ ಡೌನ್ ಆದೇಶ ಜಾರಿಗೆ ಬಂದ ಮೇಲೆ ಸದಾ ಎಚ್ಚೆತ್ತು ಕಾರ್ಯಾಚರಿಸುತ್ತಿವೆ. ಪೆÇೀಷಕಾಹಾರ ಖಚಿತಪಡಿಸುವಿಕೆ, ವಯೋವೃದ್ಧರ ಗಣನೆ ದಾಖಲಾತಿ, ಅನಿವಾರ್ಯ ಔಷಧ ವಿತರಣೆ,ಮಕ್ಕಳಿಗೆ ಆನ್ ಲೈನ್ ತರಬೇತು ಸಹಿತ ಚಟುವಟಿಕೆಗಳಿಗಾಗಿ ಅಂಗನವಾಡಿ ಕಾರ್ಯಕರ್ತರು ಅಹೋರಾತ್ರಿ ದುಡಿಯುತ್ತಿದ್ದಾರೆ. ಕೋವಿಡ್ ಸೋಂಕು ಖಚಿತಗೊಂಡವರ ಸಂಖ್ಯೆ ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಮಹಿಳಾ-ಶಿಶು ಅಭಿವೃಧ್ಧಿ ಇಲಾಖೆಯ "ಜತೆಗಿದೆ ಅಂಗನವಾಡಿಗಳು" ಎಂ ಯೋಜನೆ ಅಂಗನವಾಡಿಗಳನ್ನು ಕೇಂದ್ರೀಕರಿಸಿ ಆರಂಭಗೊಂಡಿದೆ. ಈಗ ಕುಟುಂಬಗಳಿಗೆ ನೇರವಾಗಿ ಅಂಗನವಾಡಿಗಳ ಸೇವೆ ಒದಗಿಸುವ ಜತೆಗಿದೆ ಅಂಗನವಾಡಿಗಳು ಯೋಜನೆಯ ದ್ವಿತೀಯ ಹಂತದ ಚಟುವಟಿಕೆಗಳು ರಚನೆಗೊಂಡಿವೆ. ವಾಟ್ಸ್ ಆಪ್ ಗ್ರೂಪ್, ವೀಡಿಯೋ ಕಾಲ್, ದೂರವಾಣಿ ಕಾನ್ ಫೆರೆನ್ಸ್ ಕರೆ ಮೂಲಕ ಈ ಚಟುವಟಿಕೆಗಳು ನಡೆಯಲಿವೆ. ಅಂಗನವಾಡಿ ಕಾರ್ಯಕರ್ತೆ ಮತ್ತು 7 ಮಂದಿ ಫಲಾನುಭವಿಗಳು ಈ ಗ್ರೂಪ್ ನಲ್ಲಿದ್ದಾರೆ. ಫಲಾನುಭವಿಗಳಿಗೆ ಲಾಕ್ ಡೌನ್ ಅವಧಿಯಲ್ಲಿ ಅಗತ್ಯವಿರುವ ಬೆಂಬಲ ಒದಗಿಸುವುದು, ಪರಸ್ಪರ ಸಂವಾದ ನಡೆಸುವ ಮೂಲಕ ಜಾಗೃತಿ ಒದಗಿಸುವುದು, ಆತಂಕ ಪರಿಹಾರ, ಫಲಾನುಭವಿಗಳಿಗಿರುವ ಆದೇಶ ಹಂಚಿಕೆ ಇತ್ಯಾದಿ ಗಳು ಈ ಚಟುವಟಿಕೆಗಳ ಉದ್ದೇಶ.
     ಜಿಲ್ಲೆಯಲ್ಲೂ "ಜೊತೆಗಿವೆ ಅಂಗನವಾಡಿಗಳು" ಎಂಬ ಯೋಜನೆ ಆರಂಭಗೊಂಡಿದೆ. ಈಗಾಗಲೇ 58 ವಾಟ್ಸ್ ಆಪ್ ಗ್ರೂಪ್ ಗಳ ಮೂಲಕ ಸಂವಾದ ನಡೆಸಲಾಗಿದೆ. ಜಿಲ್ಲೆಯ 1348 ಅಂಗನವಾಡಿಗಳು ಮತ್ತು ಹಾಲುಣಿಸುವ ತಾಯಂದಿರದಾದ ತಮ್ಮದೇ ವಾಟ್ಸ್ ಅಪ್ ಇದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries