HEALTH TIPS

ಊರಿಗೆ ಮರಳುವ ಆನಿವಾಸಿಗಳನ್ನು ಸರಕಾರ ಸಜ್ಜುಗೊಳಿಸಿದ ಕ್ವಾರೆಂಟೈನ್ ಗಳಲ್ಲಿ ದಾಖಲಿಸಲಾಗುವುದು: ಜಿಲ್ಲಾಧಿಕಾರಿ


        ಕಾಸರಗೋಡು: ವಿದೇಶಗಳಿಂದ ಊರಿಗೆ ಮರಳುವವರನ್ನು ಜಿಲ್ಲೆಯ ತೆಂಕಣ ಭಾಗದಲ್ಲಿ ಸಜ್ಜುಗೊಳಿಸಲಾದ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
       ಈ ಚಟುವಟಿಕೆಗಳ ಏಕೀಕರಣಕ್ಕೆ ನೋಡೆಲ್ ಅಧಿಕಾರಿಯಾಗಿ ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್ ಅವರನ್ನು ನೇಮಿಸಲಾಗಿದೆ. ವಿದೇಶಗಳಿಂದ ಊರಿಗೆ ಮರಳುವವರನ್ನು ಸರಕಾರ ವಿಶೇಷವಾಗಿ ಸಜ್ಜುಗೊಳಿಸಿದ ಕ್ವಾರಂಟೈನ್ ಕೇಂದ್ರಗಳಲ್ಲಿ 7 ದಿನ ದಾಖಲಿಸಿ ಸ್ಯಾಂಪಲ್ ತಪಾಸಣೆ ನಡೆಸಲಾಗುವುದು. ಕೋವಿಡ್ 19 ಸೋಂಕು ಖಚಿತಗೊಂಡವನ್ನು ಮುಂದಿನ ಚಿಕಿತ್ಸೆಗಳಿಗಾಗಿ ಆಸ್ಪತ್ರೆಗಳಿಗೆ ದಾಖಲಿಸಲಾಗುವುದು. ವಯೋವೃದ್ಧರು, ಗರ್ಭಿಣಿಯರು, ಮಕ್ಕಳು ಮೊದಲಾವರನ್ನು 7 ದಿನಗಳ ಕ್ವಾಂರೆಂಟೈನ್ ನಿಂದ ಹೊರತುಪಡಿಸಲಾಗುವುದು ಎಂದು ಅವರು ಹೇಳಿದರು.
      ತಪಾಸಣೆಯಲ್ಲಿ ನೆಗೆಟಿವ್ ಫಲಿತಾಶ ಹೊಂದಿದವರನ್ನು ಮುಂದಿನ ನಿಗಾಗಳಿಗಾಗಿ ಮನೆಗಳಲ್ಲೇ ಕ್ವಾರಂಟೈನ್ ನಲ್ಲಿ ಇರಿಸಲಾಗುವುದು. ಅವರ ಮನೆಗಳಲ್ಲಿ ಈ ಸಂಬಂಧ ವ್ಯವಸ್ಥೆಗಳಿರುವ ಕುರಿತು ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್ ಮಟ್ಟದ ಸಮಿತಿ ಖಚಿತಪಡಿಸಲಿದೆ. ಸ್ವಂತ ಮನೆಯಲ್ಲಿ ಸೌಕರ್ಯಗಳಿಲ್ಲದೆ ಇರುವ ಮಂದಿಯನ್ನು( ಒಂದೊಮ್ಮೆ ಮನೆಯಲ್ಲಿ ಸೌಕರ್ಯಗಳಿದ್ದೂ, ಈ ಅವಧಿಯಲ್ಲಿ ಪ್ರತ್ಯೇಕ ಇರುವುದು ಉತ್ತಮ ಎಂದು ಆಗ್ರಹಿಸುವವರಿದ್ದರೆ) ಪ್ರತ್ಯೇಕ ವಸತಿಗೆ ವ್ಯವಸ್ಥೆ ಮಾಡಲಾಗುವುದು ಎಂದರು.
     ಈ ನಿಟ್ಟಿನಲ್ಲಿ ಜಿಲ್ಲಾಡಳಿತೆ 380 ವಸತಿಗೃಹಗಳ ಕೊಠಡಿಗಳನ್ನು ನಿಗದಿಪಡಿಸಿದೆ. ಈ ಕೊಠಡಿಗಳಿಗೆ ಸರಕಾರದ ಅನುಮತಿಯೊಂದಿಗೆ ದಿನ ಬಾಡಿಗೆ ಈಡುಮಾಡಿ ಮಂಜೂರುಮಾಡಲಾಗುವುದು. ವಸತಿಗೃಹಗಳ ಕೊಠಡಿಗಳಲ್ಲಿ ವಸತಿಹೂಡುವ ಆನಿವಾಸಿಗಳಿಗೆ ಆಹಾರ ಪೂರೈಕೆ ನಡೆಸುವ ಹೊಣೆ ಸ್ಥಳೀಯಾಡಳಿತ ಸಂಸ್ಥೆಗಳಿಗೆ ನೀಡಲಾಗುವುದು. ಸ್ವಂತ ಮನೆಯಲ್ಲಿ ಸೌಕರ್ಯ ಇಲದವರಿಗೆ, ಬಾಡಿಗೆ ಮನೆಗೆ ಬಾಡಿಗೆ ನೀಡಲು ಸಾಧ್ಯವಿಲ್ಲದವರಿಗಾಗಿ ಸರಕಾರ ಪ್ರತ್ಯೇಕ ಕ್ವಾರಂಟೈನ್ ವ್ಯವಸ್ಥೆ ಸಜ್ಜುಗೊಳಿಸಲಿದೆ. ಇವರಿಗೆ ಆಹಾರ ಒದಗಿಸುವ ನಿಟ್ಟಿನಲ್ಲಿ ವ್ಯಕ್ತಿಯೊಬ್ಬರಿಗೆ ಪ್ರತಿದಿನ 60 ರೂ.(ಮಕ್ಕಳಿಗೆ 45 ರೂ.) ರಾಜ್ಯ ದುರಂತ ಪರಿಹಾರ ನಿಧಿಯಿಂದ ಮಂಜೂರು ಮಾಡಲಾಗುವುದು. ಈ ಚಟುವಟಿಕೆಗಳ ಏಕೀಕಿರಣದ ಹೊಣೆಯನ್ನು ಕಾಸರಗೋಡು ಪಂಚಾಯತ್ ಡೆಪ್ಯೂಟಿ ಡೈರೆಕ್ಟರ್ ಅವರಿಗೆ ನೀಡಲಾಗಿದೆ ಎಂದರು.
       ವಿಮಾನ ನಿಲ್ದಾಣಗಳಿಂದ ಆನಿವಾಸಿ ಗಳನ್ನು ಜಿಲ್ಲೆಯ ಕ್ವಾರೆಂಟೈನ್ ಕೇಂದ್ರಗಳಿಗೆ ತಲಪಿಸುವ ನಿಟ್ಟಿನಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಗಳ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಸಾರಿಗೆ ಅಧಿಕಾರಿ, ಆರ್.ಟಿ.ಒ. ಅವರಿಗೆ ಹೊಣೆ ನೀಡಲಾಗಿದೆ ಎಂದು ಜಿಲ್ಲಧಿಕಾರಿ ತಿಳಿಸಿದರು. ಈ ಬಸ್ ಗಳಲ್ಲಿ ಗರಿಷ್ಠ 24 ಮಂದಿಗೆ ಪ್ರವೇಶಾತಿ ಇರುವುದು.
       ಇತರ ಜಿಲ್ಲೆಗಳಿಂದ ಊರಿಗೆ ಮರಳುವ ಮಂದಿಗಾಗಿ ಜಿಲ್ಲೆಯ ಉತ್ತರ ಭಾಗದ ಕ್ವಾರೆಂಟೈನ್ ಗಳನ್ನು ಸಜ್ಜುಗೊಳಿಸಲಾಗಿದೆ. ಈ ಚಟುವಟಿಕೆಗಳ ಏಕೀಕರಣದ ಹೊಣೆಯನ್ನು ಕಾಸರಗೋಡು ವಲಯ ಕಂದಾಯಾಧಿಕಾರಿಗೆ ನೀಡಲಾಗಿದೆ. ಇತರ ರಾಜ್ಯಗಳಿಂದ ಆಗಮಿಸುವವರ ತಪಾಸಣೆ, ಮಾಹಿತಿ ಸಂಗ್ರಹಿಸಿ ಸಂಬಂಧಪಟ್ಟವರಿಗೆ ಆಯಾ ವೇಳೆಗಳಲ್ಲಿ ಹಸ್ತಾಂತರಿಸುವ ಹೊಣೆಯನ್ನು ಸಹಾಯಕ ಜಿಲ್ಲಾಧಿಕಾರಿಗಳು, ನ್ಯಾಷನಲ್ ಇನ್ ಫಾರ್ ಮೆಟಿಕ್ ಆಫೀಸರ್ ಅವರಿಗೆ ನೀಡಲಾಗಿದೆ.  ಜಿಲ್ಲೆಗೆ ತಲಪುವವರ ಮಾಹಿತಿಗಳನ್ನು ಸಂಬಂಧಪಟ್ಟ ಸ್ಥಳೀಯಾಡಳಿತ ಸಂಸ್ಥೆಗಳ ಮುಖ್ಯಸ್ಥರಿಗೆ ಮತ್ತು ಜಿಲ್ಲಾ ವೈದ್ಯಾಧಿಕಾರಿಗೆ ಹಸ್ತಾಂತರಿಸಲಾಗುವುದು. ಇತರ ಜಿಲ್ಲೆಗಳ ಮಂದಿಯ ಮಾಹಿತಿಗಳನ್ನು ಬೆಳಗ್ಗೆ 10 ಮತ್ತು ಸಂಜೆ 5 ಗಮಟೆಗೆ ಆಯಾ ಜಿಲ್ಲೆಗಳ ರಾಜ್ಯ ಕೋವಿಡ್ 19 ವಾರ್ ರೂಂ ಗೆ ಹಸ್ತಾಂತರಿಸಲಾಗುವುದು ಎಂದರು.
     ಜಿಲ್ಲೆಗೆ ಆಗಮಿಸಿದವರಲ್ಲಿ ರೋಗ ಲಕ್ಷಣ ಹೊಂದಿರುವವರನ್ನು ಸ್ಯಾಂಪಲ್ ಪಡೆದು ತಪಾಸಣೆ ಕಳುಹಿಸಿ, ಜಿಲ್ಲೆಯ ನಿವಾಸಿಗಳಾದವರನ್ನು ಪ್ರತ್ಯೇಕ ???ಂಬುಲೆನ್ಸ್ ಗಳಲ್ಲಿ ಆಸ್ಪತ್ರೆಗಳಿಗೆ ತಲಪಿಸಲಾಗುವುದು. ರೋಗ ಲಕ್ಷಣ ಹೊಂದಿರುವ ಇತರ ಜಿಲ್ಲೆಗಳ ಮಂದಿಯನ್ನು ಅವರವರ ವೆಚ್ಚದಲ್ಲಿ ಆಂಬುಲೆನ್ಸ್ ಮೂಲಕ ಅವರ ಜಿಲ್ಲೆಗಳಿಗೆ ತಲಪಿಸುವ ಕ್ರಮ ಕೈಗೊಳ್ಳಲಾಗುವುದು. ಇತರ ಪ್ರಯಾಣಿಕರಿಂದ ಕಾಸರಗೋಡು ಜಿಲ್ಲೆಯಲ್ಲಿ ತಲಪ್ಪಾಡಿಯಿಂದ ಕಾಲಿಕ್ಕಡವು ವರೆಗೆ ವಾಹನಗಳಿಂದ ಕೆಳಗಿಳಿಯುವುದಿಲ್ಲ ಎಂಬ ಸತ್ಯವಾuಟಿಜeಜಿiಟಿeಜ್ಮಲ ಬರೆಸಿ, ಪಡೆದು ಮುಂದಿನ ಪ್ರಯಾಣಕ್ಕೆ ಅನುಮತಿ ನೀಡಲಾಗುವುದು.
       ಇತರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವವರಲ್ಲಿ ರೋಗ ಲಕ್ಷಣ ಇಲ್ಲದೇ ಇರುವ ಮಂದಿಗೆ ಸ್ವಂತ ಮನೆಯಲ್ಲಿ ಕ್ವಾರೆಂಟೈನ್ ನಲ್ಲಿ ಇರುವಂತೆ ಮಾಡುವ ವ್ಯವಸ್ಥೆ ಬಗ್ಗೆ ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್ ಮಟ್ಟದ ಸಮಿತಿ ಖಚಿತಪಡಿಸಿದ ನಂತರ ಆಗಮಿಸಿದವರನ್ನು ಕಳುಹಿಸಲಾಗುವುದು. ವಾರ್ಡ್ ಮಟ್ಟದ ಜನಜಾಗೃತಿಸಮಿತಿ ಯ ಮೇಲ್ನೋಟದಲ್ಲಿ ಇವರ ಕ್ವಾರಂಡೈನ್ ನಿಗಾದಲ್ಲಿರುವುದು ಎಂದು ತಿಳಿಸಿದರು.
     ಜಿಲ್ಲಾ ಆಡಳಿತೆ ಸಜ್ಜುಗೊಳಿಸುವ ಕ್ವಾರಂಟೈನ್ ಕೇಂದ್ರಗಳಲ್ಲಿ ಸ್ನಾನಗೃಹ-ಶೌಚಾಲಯ ಗಳನ್ನು ಯಥಾ ಸಮಯಗಳಲ್ಲಿ ಶುಚಿಗೊಳಿಸಲು ಪವರ್ ಪಂಪ್ (ಒಂದು ಕ್ವಾರೆಂಟೈನ್ ಗೆ ತಲಾ ಒಂದರಂತೆ) ಖರೀದಿಸಲು ಸ್ಥಳೀಯಾಡಳಿತ ಸಂಸ್ಥೇಗಳಿಗೆ ಅನುಮತಿ ನೀಡಲಾಗುವುದು. ಕ್ವಾರೆಂಟೈನ್ ನಲ್ಲಿ ಇರುವವರಿಗೆ ಸಹಾಯ ಒದಗಿಸಲು ಪಂಚಾಯತ್ ಮಟ್ಟದಲ್ಲಿ 20 ಮಂದಿ ಸ್ವಯಂ ಸೇವಕರನ್ನು ನೇಮಕಗೊಳಿಸಲು ಸ್ಥಳೀಯಾಡಳಿತ ಸಂಸ್ಥೇಗಳಿಗೆ ಹೊಣೆ ನೀಡಲಾಗಿದೆ. ಜಿಲ್ಲಾ ವೈದ್ಯಾಧಿಕಾರಿ ನೀಡುವ ಫಿಟ್ ನೆಸ್ ಸರ್ಟಿಫಿಕೆಟ್ ನ ಹಿನ್ನೆಲೆಯಲ್ಲಿ ಸ್ವಯಂ ಸೇವಕರ ನೇಮಕಾತಿ ನಡೆಯಲಿದೆ. ಕ್ವಾರೆಂಟೈನ್ ನಲ್ಲಿರುವವರು, ರೂಂ ಗಳಲ್ಲಿ ಕ್ವಾರೆಂಟೈನ್ ನಲ್ಲಿ ಇರುವಂತೆ ಸಲಹೆ ಪಡೆದವರು ದಾಖಲಾದ ಪ್ರದೇಶಗಳಲ್ಲಿ ಬಿಗಿ ಪೆÇಲೀಸ್ ಭದ್ರತೆ ಇರುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries