HEALTH TIPS

ಲಡಾಕ್ ಬಿಕ್ಕಟ್ಟು: ಚೀನಾ ಗಡಿಯಲ್ಲಿ ಚಿನೂಕ್ ಹೆವಿ ಲಿಫ್ಟ್ ಕಾಪ್ಟರ್‍ಗಳನ್ನು ನಿಯೋಜಿಸಿದ ಭಾರತೀಯ ವಾಯುಪಡೆ

   
     ಅರುಣಾಚಲ ಪ್ರದೇಶ: ಭಾರತ-ಚೀನಾ ನಡುವೆ ಲಡಾಕ್ ಬಿಕ್ಕಟ್ಟು ಉಂಟಾಗಿರುವ ಬೆನ್ನಲ್ಲೆ ಭಾರತದ ವಾಯು ಪಡೆ ಚೀನಾದೊಂದಿಗಿನ ಗಡಿ ಪ್ರದೇಶದಲ್ಲಿ ಅತ್ಯಾಧುನಿಕ ಸಿಹೆಚ್-47 ಚಿನೂಕ್ ಹೆವಿ ಲಿಫ್ಟ್ ಚಾಪರ್ ಗಳನ್ನು ನಿಯೋಜಿಸಿದೆ.
      ಶಿಲ್ಲಾಂಗ್ ಬೇಸ್ ನ ರಕ್ಷಣಾ ವಕ್ತಾರ ವಿಂಗ್ ಕಮಾಂಡರ್ ರತ್ನಾಕರ್ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದು, ಸಿಹೆಚ್-47 ಚಿನೂಕ್ ಮಲ್ಟಿ ಮಿಷನ್ ಹೆಲಿಕಾಫ್ಟರ್ ಗಳು ಈಸ್ಟರ್ನ್ ಏರ್ ಕಮಾಂಡ್ ನಲ್ಲಿ ಕಾರ್ಯಾಚರಣೆಯಲ್ಲಿದ್ದು, ದೇಶದ ಸೇವೆಯಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಹೆಲಿಕಾಫ್ಟರ್ ಗಳು ಐಎಎಫ್ ಗೆ ಯುದ್ಧ ಮತ್ತು ಮಾನವೀಯ ಕಾರ್ಯಾಚರಣೆಗಳಲ್ಲಿ ಸಾಟಿಯಿಲ್ಲದ ಏರ್ಲಿಫ್ಟ್ ಸಾಮಥ್ರ್ಯವನ್ನು ಒದಗಿಸಲಿದೆ ಎಂದು ಹೇಳಿದ್ದಾರೆ.
   ಈಗಿರುವ ಎಂಐ-17 ಗೆ ಹೋಲಿಕೆ ಮಾಡಿದರೆ ಈ ಚಿನೂಕ್ ಹೆಲಿಕಾಫ್ಟರ್ ಗಳು ಅತಿ ಎತ್ತರದ ಪ್ರದೇಶಗಳಲ್ಲಿ ಹಾರಾಟ ಮಾಡುವ ಸಾಮಥ್ರ್ಯಗಳನ್ನು ಹೊಂದಿದ್ದು ಎಂಐ-17 ಗಿಂತಲೂ ಹೆಚ್ಚಿನ ತೂಕ ಹೊತ್ತು ಸಾಗುವ ಸಾಮಥ್ರ್ಯವಿದೆ. ಎಂಐ-17 24 ಪ್ರಯಾಣಿಕರು ಹಾಗೂ ಸಣ್ಣ ವಾಹನಗಳನ್ನು ಸೇರಿದಂತೆ 4,000 ಕೆಜಿ ಆಂತರಿಕ ಪೇಲೋಡ್ ಸಾಮಥ್ರ್ಯ ಹೊಂದಿದ್ದರೆ ಚಿನೂಕ್ ಹೆಲಿಕಾಫ್ಟರ್ ಗಳು 22,000ಟb (10,000 ಕೆ.ಜಿ)ಯಷ್ಟು ಸರಕು ಅಥವಾ ಸಂಪೂರ್ಣವಾಗಿ ಶಸ್ತ್ರಸಜ್ಜಿತಗೊಂಡಿರುವ 55 ಸೇನಾ ತುಕಡಿಗಳನ್ನು ಹೊತ್ತೊಯ್ಯುವ ಸಾಮಥ್ರ್ಯ ಹೊಂದಿದೆ.
     ಅರುಣಾಚಲ ಪ್ರದೇಶದ ಭಾಗದಲ್ಲಿ ಈ ಚಿನೂಕ್ ಹೆಲಿಕಾಫ್ಟರ್ ಗಳನ್ನು ನಿಯೋಜಿಸುತ್ತಿರುವುದು ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಎಂದು ವಿಶ್ಲೇಷಿಸಲಾಗುತ್ತಿದೆ. ಇದೇ ಮಾದರಿಯ ಒಂದು ಹೆಲಿಕಾಫ್ಟರ್ ನ್ನು ಗುರುವಾರ ಅಗತ್ಯ ಸರಕುಗಳೊಂದಿಗೆ ಅರುಣಾಚಲ ಪ್ರದೇಶದ ಚಂಗ್ಲಾಂಗ್ ನ ವಿಜೋಯ್ ನಗರ್ ಸರ್ಕಲ್ ಗೆ ಕಳುಹಿಸಲಾಗಿತ್ತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries