HEALTH TIPS

ಉದ್ಘಾಟನೆಗೆ ಸಿದ್ಧವಾದ ಉದ್ಯೋಗಿ ಮಹಿಳೆಯರ ಹಾಸ್ಟೆಲ್


          ಕಾಸರಗೋಡು  : ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ ವಿದ್ಯಾನಗರ ಬಳಿಯ ಉದಯಗಿರಿಯಲ್ಲಿ ನಿರ್ಮಿಸಲಾದ ಉದ್ಯೋಗಿ ಮಹಿಳೆಯರ  ಹಾಸ್ಟೆಲ್ ಉದ್ಘಾಟನೆಗೆ ಸಿದ್ಧವಾಗಿದೆ. 5 ಕೊಟಿ ರೂ. ವೆಚ್ಚದಲ್ಲಿ ನಿರ್ಮಿಸಿಲಾದ ಈ ಕೆ.ಡಿ.ಪಿ. ವಕಿರ್ಂಗ್ ವುಮನ್ ಹಾಸ್ಟೆಲ್ ಜೂ.15ರಂದು ಉದ್ಘಾಟನೆಗೊಳ್ಳಲಿದೆ. 24 ತಾಸುಗಳೂ ಕಾವಲು, ಸಿ.ಸಿ.ಟಿ.ವಿ., ವಿಶಾಲ ಗ್ರಂಥಾಲಯ, ಕಲಿಕಾ ಕೊಠಡಿ, ಯೋಗ ತರಬೇತಿ, ಎಲ್.ಇ.ಡಿ.ಪ್ರಾಜೆಕ್ಟರ್ ಸಹಿತದ ಸಭಾಂಗಣ, ಡೈನಿಂಗ್ ಹಾಲ್ ಸಹಿತದ ಸೌಲಭ್ಯ ಇಲ್ಲಿದೆ. ಇಬ್ಬರು ಮತ್ತು ಮೂವರು ವಸತಿ ಹೂಡಬಹುದಾದ ಕೊಠಡಿಗಳು ಸಹಿತ 120 ಮಂದಿ ಏಕಕಾಲಕ್ಕೆ ವಸತಿ ಹೂಡಬಹುದಾದ ರೀತಿಯಲ್ಲಿ ಹಾಸ್ಟೆಲ್ ಸಿದ್ಧವಾಗಿದೆ.
            ಹಾಸ್ಟೆಲ್ ಉದ್ಘಾಟನೆ ಸಂಬಂಧ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಜರುಗಿತು. ಜಿಲ್ಲಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಮಹಿಳಾ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಡೀನಾ ಭರತನ್, ಜಿಲ್ಲಾ ಮಹಿಳಾ ಸಂರಕ್ಷಣೆ ಅಧಿಕಾರಿ ಎಂ.ವಿ.ಸುನಿತಾ, ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಅಧಿಕಾರಿ ಮೀನಾರಾಣಿ, ಮಹಿಳಾ ಘಟಕ ಸಿ.ಐ. ಭಾನುಮತಿ, ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಚಾಲಕಿ ಟಿ.ಟಿ.ಸುರೇಂದ್ರನ್, ಲೋಕೋಪಯೋಗಿ ಕಟ್ಟಡ ವಿಭಾಗ ಕಾರ್ಯಕಾರಿ ಇಂಜಿನಿಯರ್ ಮುಹಮ್ಮದ್ ಮುನೀರ್ ಮೊದಲಾದವರು ಉಪಸ್ಥಿತರಿದ್ದರು.  ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್ ವರದಿ ವಾಚಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries