HEALTH TIPS

ನಿಗಾ ನಡೆಸಲು ಪೆÇಲೀಸರ ಜೊತೆ ರಂಗದಲ್ಲಿದ್ದಾರೆ ಪೆÇಲೀಸ್ ಸ್ವಯಂಸೇವಕರು


             ಕಾಸರಗೋಡು: ಅತ್ಯಧಿಕ ಪ್ರಮಾಣದಲ್ಲಿ ಕೋವಿಡ್ ಪ್ರಕರಣ ವರದಿಯಾಗಿರುವ ಹಿನ್ನೆಲೆಯಲ್ಲಿ ನಿಗಾ ಪ್ರಬಲಗೊಳಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಏರ್ಪಡಿಸಲಾದ ಪೆÇಲೀಸ್ ಸ್ವಯಂಸೇವಕರು ಸೌಲಭ್ಯ ಕಾಸರಗೋಡು ಜಿಲ್ಲೆಯಲ್ಲೂ ಆರಂಭಗೊಂಡಿದೆ.
          ರಾಜ್ಯ ಸರಕಾರದ ಸಾಮಾಜಿಕ ಬದ್ಧತೆ ಸೇನಾ ಪೆÇೀರ್ಟಲ್ ನಲ್ಲಿ ನೋಂದಣಿ ನಡೆಸಿದವರಿಂದ ಆಯ್ಕೆ ನಡೆಸಿ ನೇಮಕ ಮಾಡಲಾದ ಇಬ್ಬರು ಮಹಿಳಾ ಸ್ವಯಂಸೇವಕಿಯರ ಸಹಿತ 277 ಕಾರ್ಯಕರ್ತರನ್ನು ಜಿಲ್ಲೆಯ ಪೆÇಲೀಸ್ ಠಾಣೆಗಳ ವ್ಯಾಪ್ತಿ ಪ್ರದೇಶಗಳಲ್ಲಿ ಪೆÇಲೀಸ್ ಸ್ವಯಂಸೇಕರಾಗಿ ನೇಮಿಸಲಾಗಿದೆ. ಹೊಸದುರ್ಗ ಪೆÇಲೀಸ್ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಮಹಿಳಾ ಸ್ವಯಂಸೇವಕಿಯರಿದ್ದಾರೆ. ಇವರ ನೇಮಕಕ್ಕೆ ಮುನ್ನ ಇವರಿಗೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಎಸ್.ಸಾಬು ಅವರು ಆರ್ಮ್ ಬ್ಯಾಂಡ್ ನೀಡಿದರು. ಪೆÇಲೀಸ್ ವಾಲಿಂಟಿಯರ್ಸ್ ಎಂಬ ಹಳದಿ ಬಣ್ಣದಲ್ಲಿ ಬರೆಯಲಾದ ಮೂರು ಇಂಚು ಅಗಲದ ಬಟ್ಟೆಯಲ್ಲಿ ನಿರ್ಮಿಸಲಾದ ಆರ್ಮ್ ಬ್ಯಾಂಡ್ ಧರಿಸಿ ಇವರು ಪೆÇಲೀಸರ ಜತೆಗೆ ಸೇವೆ ಸಲ್ಲಿಸಲಿದ್ದಾರೆ.
              ಹೋಂ ಕ್ವಾರಂಟೈನ್ ನಿಂದ ತಪ್ಪಿಸುವವರೇ ಜೋಪಾನ-ಪೆÇಲೀಸ್ ಸ್ವಯಂಸೇವಕರೂ ನಿಗಾ ನಿಮ್ಮ ಮೇಲಿದೆ:
       ಮನೆಗಳಲ್ಲಿ ರೂಂ ಕ್ವಾರೆಂಟೈನ್ ಆಗಿರಲು ಆದೇಶ ಪಡೆದಿರುವ ಮಂದಿ ಆದೇಶ ಉಲ್ಲಂಘಿಸಿಲ್ಲ ಎಂಬ ಬಗ್ಗೆ ಖಚಿತತೆ ನಡೆಸುವ ನಿಟ್ಟಿನಲ್ಲಿ ಜನಮೈತ್ರಿ ಪೆÇಲೀಸರ ಜೊತೆಗೆ ಪೆÇಲೀಸ್ ಸ್ವಯಂಸೇವಕರೂ ಇನ್ನು ಮುಂದೆ ರಂಗದಲ್ಲಿರುವರು. ಲಾಕ್ ಡೌನ್ ಅವಧಿಯಲ್ಲಿ ಜಿಲ್ಲೆಯ ವಯೋವೃಧ್ಧರನ್ನು ಭೇಟಿ ಮಾಡಿ ಅವರ ಕ್ಷೇಮಸಮಾಚಾರ ನಡೆಸುವಲ್ಲಿ ಮುತುವರ್ಜಿ ನಡೆಸುವರು. ಇದಲ್ಲದೆ ಪ್ರಕೃತಿ ವಿಕೋಪ ನಡೆದ ಸಂದರ್ಭಗಳಲ್ಲಿ ಪೆÇಲೀಸರ ಜೊತೆಗೆ ಸೇವೆ ಸಲ್ಲಿಸುವರು.
             ಚಿತ್ರ ಮಾಹಿತಿ: ಕಾಸರಗೋಡು ಜಿಲ್ಲೆಯಲ್ಲಿ ಪೆÇಲೀಸ್ ಸ್ವಯಂಸೇವಕರಾಗಿ ಆಯ್ಕೆಗೊಂಡಿರುವ ಮಂದಿಗೆ ಜಿಲ್ಲಾ ಪೆÇಲೀಸ್ವರಿಷ್ಠಾಧಿಕಾರಿ ಪಿ.ಎಸ್.ಸಾಬು ಅವರು ಆರ್ಮ್ ಬ್ಯಾಂಡ್ ವಿತರಣೆ ನಡೆಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries