HEALTH TIPS

ಕರೊನಾ ಲಸಿಕೆ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದ್ದ ಕಂಪನಿಗೆ ಹಿನ್ನಡೆ? ಷೇರು ಮೌಲ್ಯ ಕುಸಿತ

        ನವದೆಹಲಿ: ಕರೊನಾ ಲಸಿಕೆ ಸಂಶೋಧನೆಯಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವ ಅಮೆರಿಕದ ಕಂಪನಿಗೆ ಹಿನ್ನಡೆ ಉಂಟಾಗಿದೆ. ಕಂಪನಿಯ ಷೇರು ಮೌಲ್ಯ ಕುಸಿತ ಕಂಡಿದೆ.
ಅಮೆರಿಕದ ಮಾಡೆರ್ನಾ ಕಂಪನಿ ಮಾನವರ ಮೇಲೆ ಕರೊನಾ ವೈರಸ್​ ನಿಗ್ರಹಿಸುವ ಲಸಿಕೆಯನ್ನು ಪ್ರಯೋಗಿಸಿತ್ತು. ಆರಂಭಿಕ ಹಂತದಲ್ಲಿ ಇದು ಮನುಷ್ಯರ ಮೇಲೆ ಯಶಸ್ವಿಯಾಗಿದೆ ಹಾಗೂ ಮಾನವ ಬಳಕೆಗೆ ಸುರಕ್ಷಿತವಾಗಿದೆ ಎಂದು ಕಂಪನಿ ಘೋಷಿಸಿತ್ತು.
     ಇದಾಗುತ್ತಿದ್ದಂತೆ ಕಂಪನಿ ಷೇರು 80 ಡಾಲರ್​ಗೆ ಏರಿತ್ತು. ಜತೆಗೆ, ಸಂಶೋಧನೆ ಹಾಗೂ ಲಸಿಕೆ ಉತ್ಪಾದನೆಗೆ ಬಂಡವಾಳವಾಗಿ 1.34 ಬಿಲಿಯನ್​ ಡಾಲರ್​ (10 ಸಾವಿರ ಕೋಟಿ ರೂ.ಗೂ ಹೆಚ್ಚು) ಸಂಗ್ರಹಕ್ಕೆ ಸಾರ್ವಜನಿಕ ಷೇರು ಬಿಡುಗಡೆಗೆ ಮುಂದಾಗಿತ್ತು. ಸದ್ಯ ಇದರ ಷೇರು ಮೌಲ್ಯ ಕಡಿಮೆಯಾಗಿದೆ. ಎರಡನೇ ಹಂತದಲ್ಲಿ ಸಾವಿರಕ್ಕೂ ಅಧಿಕ ಜನರ ಮೇಲೆ ಕಂಪನಿ ಲಸಿಕೆ ಪ್ರಯೋಗಿಸಿದೆ. ಈ ಪೈಕಿ ಪ್ರಯೋಗಾರ್ಥಿಯೊಬ್ಬನಲ್ಲಿ ಲಸಿಕೆ ಭಾರಿ ಅಡ್ಡ ಪರಿಣಾಮಗಳನ್ನು ಉಂಟು ಮಾಡಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಕಂಪನಿಯ ಷೇರು ಮೌಲ್ಯ 52 ಡಾಲರ್​ಗೆ ಇಳಿದಿದೆ.
ಈ ನಡುವೆ ಅಮೆರಿಕದ ಇನ್ನೊಂದು ಔಷಧ ತಯಾರಿಕಾ ಕಂಪನಿ ನೋವಾವಾಕ್ಸ್​ ಕರೊನಾ ಲಸಿಕೆಯ ಕ್ಲಿನಿಕಲ್​ ಟ್ರಯಲ್​ ಆರಂಭಿಸಿದೆ. ಆಸ್ಟ್ರೇಲಿಯಾ ಹಾಗೂ ಬ್ರಿಸ್ಬೇನ್​ನಲ್ಲಿ ಕರೊನಾ ರೋಗಿಗಳಿಗೆ ಪ್ರಯೋಗಿಸಿದೆ.
     ಮಾತ್ರವಲ್ಲದೇ, ಮುಂದಿನ ಒಂದು ವರ್ಷದಲ್ಲಿ 100 ಕೋಟಿ ಡೋಸ್​ ಲಸಿಕೆ ತಯಾರಿಕೆಗೆ ಸಿದ್ಧತೆ ನಡೆಸಿದೆ. ಇದರ ಭಾಗವಾಗಿ ಭಾರತೀಯ ಕಂಪನಿ, ಸೆರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾದ ಜೆಕ್​ ಗಣರಾಜ್ಯದಲ್ಲಿರುವ ಲಸಿಕೆ ಉತ್ಪಾದನಾ ಪ್ರಹಾ ವ್ಯಾಕ್ಸಿನ್​ ಘಟಕವನ್ನು 167 ಮಿಲಿಯನ್​ ಡಾಲರ್​ಗೆ ಖರೀದಿಸಿದೆ. ಇದು ಹೊಸ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಪ್ರಸ್ತುತ 10 ಕಂಪನಿಗಳು ಕರೊನಾ ಲಸಿಕೆಯ ಕ್ಲಿನಿಕಲ್​ ಟ್ರಯಲ್​ ಹಂತದಲ್ಲಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries