HEALTH TIPS

ಬಾಯಾರು ದೇವಳದ ವಿರುದ್ದ ಅಶ್ಲೀಲ ಸಂದೇಶ ರವಾನೆ-ದೂರು ದಾಖಲು


           ಉಪ್ಪಳ: ದೇವಸ್ಥಾನದ ವಾಟ್ಸಪ್ ಗ್ರೂಪ್ ರಚಿಸಿ ಅದರಲ್ಲಿ ಅಶ್ಲೀಲ ವೀಡಿಯೋಗಳನ್ನು ಹಾಕಿದ ಹಿನ್ನೆಲೆಯಲ್ಲಿ ಗ್ರೂಪ್ ಆರಂಭ ಮಾಡಿದ ಬಾಯಾರು ಬದಿಯಾರು ಪರಿಸರದ ನಿವಾಸಿ ಚಂದ್ರಶೇಖರ ಪ್ರಭು ಹಾಗೂ ಇತರರ  ವಿರುದ್ಧ ದೇವಸ್ಥಾನದ ಪಾವಿತ್ರ್ಯತೆ, ಭಕ್ತರ ನಂಬಿಕೆ ಹಾಗೂ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆನೀಡಿದ್ದಾರೆ ಎಂದು ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸೇವಾಸಮಿತಿಯ ಪರವಾಗಿ ಮಂಜೇಶ್ವರ ಪೆÇೀಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಲಾಗಿದೆ.
               ಘಟನೆಯ ಹಿನ್ನೆಲೆ:
     2018ರ ಜ. 20 ಂದು  ಶ್ರೀ ಕ್ಷೇತ್ರ ಬಾಯಾರು ಎಂಬ ಹೆಸರಿನಲ್ಲಿ ಗ್ರೂಪ್  ಆರಂಭಗೊಂಡಿತ್ತು ಎಂದು ತಿಳಿದು ಬಂದಿದ್ದು,  ಆರಂಭದಿಂದಲೇ ದುರುದ್ದೇಶಪೂರಿತ ವಿಷಯಗಳು ಮಾತ್ರ ಅದರಲ್ಲಿ ಹಂಚಲಾಗುತ್ತಿತ್ತು. ಅಲ್ಲದೆ ದೇವಸ್ಥಾನದ ಸಂಬಂಧಿಸಿದ ಯಾವುದೇ ವಿಷಯಗಳು ಇದರಲ್ಲಿ ಹಾಕುತ್ತಿರಲಿಲ್ಲ. 2020 ಮೇ.  22 ರಂದು ಅದರಲ್ಲಿ ಅಶ್ಲೀಲ ವೀಡಿಯೋ ಪೆÇೀಸ್ಟ್ ಹಾಕಲಾಗಿದ್ದು,ಇದರಿಂದ ದೇವಸ್ಥಾನದ ಭಕ್ತರ ಭಾವನೆಗೆ ಧಕ್ಕೆಯುಂಟಾಗಿದೆ. ಅದಲ್ಲದೆ ಈ ಗ್ರೂಪ್ ನ ಸದಸ್ಯರು ಹಲವರ ಬೇರೆ  ಬೇರೆ ಊರಿನರಾಗಿದ್ದು  ಬಾಯಾರು ದೇವಸ್ಥಾನಕ್ಕೆ ಅವರು ಸಂಬಂಧ ಪಡದವರಾಗಿದ್ದಾರೆ. ಈ ಘಟನೆಯ ಉದ್ದೇಶ ಹಿಂದುಗಳ ಧಾರ್ಮಿಕ ಭಾವನೆ ಕೆರಳಿಸುವುದು ಹಾಗೂ ಕೋಮು ಸಾಮರಸ್ಯವನ್ನು ಹಾಳು ಮಾಡುವುದು ಎಂಬುದಾಗಿ  ಸೇವಾಸಮಿತಿ ಆರೋಪಿಸಿದ್ದು ಅರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries