ಕುಂಬಳೆ : ಕಾಸರಗೋಡು ಜಿಲ್ಲೆಯ ರೂಪೀಕರಣ ದಿನದಂಗವಾಗಿ ಬಿಜೆಪಿ ಜಿಲ್ಲಾ ಸಮಿತಿಯ ತೀರ್ಮಾನದಂತೆ ಸಾರ್ವಜನಿಕರಿಗೆ ಮಾಸ್ಕ್ ವಿತರಣೆಯ ಕಾರ್ಯಕ್ರಮ ಭಾನುವಾರ ವಿವಿಧೆಡೆ ನಡೆಯಿತು.
ಕುಂಬಳೆ ಗ್ರಾ.ಪಂ. ಶಾಂತಿಪಳ್ಳ ವಾರ್ಡಿನ ನಾಯ್ಕಾಪು ಸೋಮಪ್ಪ ಗಟ್ಟಿಯವರ ಮನೆಯಲ್ಲಿ ವಾರ್ಡ್ ಸದಸ್ಯೆ ಪುಷ್ಪಲತ.ಎನ್ ಉದ್ಘಾಟಿಸಿದರು. ಬಿಜೆಪಿ ಮಂಡಲ ಪ್ರ.ಕಾರ್ಯದರ್ಶಿ ಮುರಳೀಧರ ಯಾದವ್,ಕುಂಬಳೆ ಪಂಚಾಯತಿ ಸಮಿತಿ ಪ್ರ.ಕಾರ್ಯದರ್ಶಿ ಜಿತೇಶ್ ನಾಯ್ಕಾಪು,ವಾರ್ಡ್ ಸಮಿತಿ ಸದಸ್ಯ ನಮಿತ್ ಕುಮಾರ್, ಸದಾಶಿವ ಗಟ್ಟಿ, ಸುಜನಾ ಶಾಂತಿಪಳ್ಳ ಮತ್ತು ಅಜಿತ್ ಕುಮಾರ್ ಕುಂಬ್ಳೆ ಉಪಸ್ಥಿತರಿದ್ದರು.


