HEALTH TIPS

ರೈಲಿನಿಂದ ಜಿಗಿದು ಓಡಿದವರು ಪೆÇಲೀಸ್ ವಶಕ್ಕೆ


    ಕುಂಬಳೆ: ಸಿಗ್ನಲ್ ಲಭಿಸದೇ ನಿಲುಗಡೆ ಮಾಡಿದ ವಿಶೇಷ ರೈಲಿನಿಂದ ಹೊರಕ್ಕೆ ಜಿಗಿದು ಓಡಿದ 4 ಮಂದಿಯನ್ನು ಪೆÇಲೀಸರು ವಶಕ್ಕೆ ಪಡೆದು ಕ್ವಾರೆಂಟೈನ್‍ಗೆ ದಾಖಲಿಸಿದ ಪ್ರಕರಣ ಉಪ್ಪಳದಲ್ಲಿ ನಡೆದಿದೆ.
          ಮಹಾರಾಷ್ಟ್ರದಿಂದ ಆಗಮಿಸಿದ ವಿಶೇಷ ರೈಲು ಉಪ್ಪಳದಲ್ಲಿ ಸಿಗ್ನಲ್ ಲಭಿಸದೇ ನಿಲುಗಡೆಯಾಗಿತ್ತು. ಈ ವೇಳೆ ರೈಲಿನಿಂದ 4 ಮಂದಿ ಹೊರಕ್ಕೆ ಜಿಗಿದು ಓಡತೊಡಗಿದ್ದರು. ಈ ಘಟನೆಯನ್ನು ಕಂಡ ವ್ಯಕ್ತಿಯೊಬ್ಬರು ಪೆÇಲೀಸರಿಗೆ ಮಾಹಿತಿ ನೀಡಿದ್ದರು. ತತ್‍ಕ್ಷಣ ಕಾಸರಗೋಡು ಡಿ.ವೈ.ಎಸ್.ಪಿ. ಪಿ.ಬಾಲಕೃಷ್ಣನ್ ನಾಯರ್ ಅವರ ನೇತೃತ್ವದ ಪೆÇಲೀಸರ ತಂಡ ಕಾರ್ಯಾಚರಣೆಗಿಳಿದಿತ್ತು. ಓಡಿದ ವ್ಯಕ್ತಿಗಳು ಕುಂಬಳೆಯಲ್ಲಿ ಪತ್ತೆಯಾಗಿದ್ದರು. ಅವರನ್ನು ವಶಕ್ಕೆ ತೆಗೆದುಕೊಂಡು ಸರ್ಕಾರಿ ಕ್ವಾರೆಂಟೈನ್‍ಗೆ ದಾಖಲಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಇದೇ ರೈಲಿನಿಂದ ರಾಜ್ಯ ಸರಕಾರದ ಆದೇಶ ಉಲ್ಲಂಘಿಸಿ ಇಳಿದ ಕೊಯಿಪ್ಪಾಡಿ ನಿವಾಸಿ ಷಾಜಿ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಪೆÇಲೀಸರು ಕೇಸು ದಾಖಲಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries