HEALTH TIPS

ಜಿಲ್ಲಾ ರೂಪೀಕರಣ ದಿನಾಚರಣೆ-ಬಿಜೆಪಿಯಿಂದ ಲಾಂಛನ ಬಿಡುಗಡೆ


           ಬದಿಯಡ್ಕ: ಕಾಸರಗೋಡು ಜಿಲ್ಲೆ ರೂಪೀಕರಣ ದಿನಾಚರಣಾ ಕಾರ್ಯಕ್ರಮದ ಲಾಂಛನವನ್ನು ಗುರುವಾರ ಬಿಜೆಪಿ ಕೇರಳ ರಾಜ್ಯ ಸಮಿತಿ ಸದಸ್ಯ ಎಂ.ಸಂಜೀವ ಶೆಟ್ಟಿ ಅವರು ಸ್ವಗೃಹದಲ್ಲಿ ಬಿಡುಗಡೆಗೊಳಿಸಿದರು. ಮಂಡಲಾಧ್ಯಕ್ಷ ಸುಧಾಮ ಗೋಸಾಡ ಉಪಸ್ಥಿತರಿದ್ದರು.
        ಕಾಸರಗೋಡು ಜಿಲ್ಲಾ ರೂಪೀಕರಣ ದಿನಾಚರಣೆ :  ಎರಡು ಲಕ್ಷ  ಮಾಸ್ಕ್ ಗಳನ್ನು ವಿತರಿಸಲಿರುವ ಬಿಜೆಪಿ: 
        ಮೇ 24 ರಂದು  ಕಾಸರಗೋಡು ಜಿಲ್ಲಾ ರೂಪೀಕರಣ  ದಿನಾಚರಣೆಯ ಅಂಗವಾಗಿ ಜಿಲ್ಲೆಯಲ್ಲಿ ಎರಡು ಲಕ್ಷ  ಮಾಸ್ಕ್ ಗಳನ್ನು  ಬಿಜೆಪಿ  ವಿತರಿಸಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.  ಶ್ರೀಕಾಂತ್ ತಿಳಿಸಿದ್ದಾರೆ, ಜಿಲ್ಲಾ ರೊಪಿಕಾರಣದ ಭಾಗವಾಗಿ ಬಿಜೆಪಿ ನಡೆಸುವ ಅಭಿಯಾನದ ಪ್ರಯುಕ್ತ  ಮಾಸ್ಕ್ ವಿತರಣೆಗೆ ಬಿಜೆಪಿ ಘಟಕ ತೀರ್ಮಾನಿಸಿದೆ. ಕೋವಿಡ್ 19 ವೈರಸ್ ಹರಡದಿರಲು  ಜಿಲ್ಲೆಯ ಜನರ ಸುರಕ್ಷತೆಗಾಗಿ ಮಾಸ್ಕ್ ವಿತರಣೆ ನಡೆಸಲು ತೀರ್ಮಾನಿಸಿದ್ದಾರೆ. ವಾರ್ಡ್ ಮಟ್ಟದಲ್ಲಿ ಬಿಜೆಪಿ ಕಾರ್ಯಕರ್ತರು ತಯಾರು ಮಾಡುವ ಮಾಸ್ಕ್ ಗಳನ್ನು ಜನರಿಗೆ  ತಲುಪಿಸಲಿದ್ದಾರೆ. ಕೋವಿಡ್ ವೈರಸ್ ನ ಪ್ರತಿರೋಧದ ಅಂಗವಾಗಿ ಜನರೊಂದಿಗೆ ಸೇರಿ ನಡೆಸುವ ಕಾರ್ಯಕ್ರಮದಲ್ಲಿ ಎಲ್ಲರ ಸಹಕಾರಕರವಿರಬೇಕು ಎಂದು ಬಿಜೆಪಿ ಜಿಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಅವರು ವಿನಂತಿಸಿಕೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries