ಕಾಸರಗೋಡು: ಇತರ ರಾಜ್ಯಗಳಿಂದ ಕೇರಳಕ್ಕೆ ಆಗಮಿಸುವ ಮಂದಿಗೆ ಪಾಸ್ ಕಡ್ಡಾಯವಾಗಿದೆ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ತಿಳಿಸಿರುವರು.
ಹೊರಡುವ ಪ್ರದೇಶದಿಂದ ಪಡೆಯುವ ಪಾಸ್ ಮತ್ತು ರಾಜ್ಯದ ಯಾವ ಜಿಲ್ಲೆಗೆ ತೆರಳಬೇಕಿದೆಯೋ ಆ ಪ್ರದೇಶ ಪಾಸ್ ಕಡ್ಡಾಯ ಎಂದು ಅವರು ತಿಳಿಸಿದರು. ಈ ವಿಚಾರಕ್ಕೆ ವಿರುದ್ಧವಾಗಿ ಕೆಲವು ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಕಟಗೊಳ್ಳುತ್ತಿದ್ದು, ಇದು ಸತ್ಯಕ್ಕೆ ದೂರವಾಗಿದೆ. ಕಾಸರಗೋಡು ಜಿಲ್ಲೆಯ ಮಂದಿಯ ಬಗ್ಗೆ ತೀರ್ಮಾನ ಕೈಗೊಳ್ಳುವ ಹೊಣೆ ಜಿಲ್ಲಾಧಿಕಾರಿಗೆ ನೀಡಲಾಗಿದೆ ಎಂದವರು ತಿಳಿಸಿರುವರು.

