ಕಾಸರಗೋಡು: ಇತರ ರಾಜ್ಯಗಳಿಂದ ಜಿಲ್ಲೆಗೆ ಗಡಿಪ್ರದೇಶದ ಮೂಲಕ ಆಗಮಿಸುವ ಮಂದಿಗೆ ಪಾಸ್ ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ರಾಜ್ಯ ಸರಕಾರದ ಮುಂಗಡ ಅನುಮತಿಯೊಂದಿಗೆ ನೀಡುವ ಪಾಸ್ ಮೂಲಕವೇ ಅಂತರ್ ರಾಜ್ಯ ಯಾತ್ರೆ ನಡೆಸಬಹುದಾಗಿದೆ ಎಂದು ಅವರು ಹೇಳಿದರು. ಆಯಾ ಗಡಿಪ್ರದೇಶಗಳ ಚೆಕ್ ಪೆÇೀಸ್ಟ್ ಗಳ ಸಾಮಥ್ರ್ಯ ಕ್ಕನುಗುಣವಾಗಿ ರಾಜ್ಯದ 6 ಪ್ರವೇಶದ್ವಾರಗಳಲ್ಲಿ ಯಾತ್ರೆಗೆ ಪಾಸ್ ನೀಡಲಾಗುತ್ತಿದೆ. ಆದರೆ ಕಳೆದ ಮೂರು ದಿನಗಳಿಂದ ಪಾಸ್ ಇಲ್ಲದೆ ಕೆಲವರು ಗಡಿ ಚೆಕ್ ಪೆÇೀಸ್ಟ್ ಗಳಿಗೆ ತಲಪಿರುವುದು ಗಮನಕ್ಕೆ ಬಂದಿದೆ. ಕೆಲವೆಡೆ ಗುಂಪಾಗಿ ಬಂದ ಜನರಲ್ಲಿ ಕೆಲವರಲ್ಲಿ ಮಾತ್ರ ಪಾಸ್ ಇದ್ದು, ಉಳಿದವರಿಗೆ ಪಾಸ್ ಇರದೇ ಇರುವುದು ವರದಿಯಾಗಿದೆ. ಕೆಲವೊಮ್ಮೆ ಯಾವ ದಿನಕ್ಕೆ ಪಾಸ್ ಮಂಜೂರು ಮಾಡಲಾಗಿದೆಯೋ, ಆ ದಿನಗಳನ್ನು ಬಿಟ್ಟು ಬೇರೆ ದಿನಗಳಲ್ಲಿ ಆ ಪಾಸ್ ಬಳಸಿ ಯಾತ್ರೆಗೆ ಯತ್ನಿಸುತ್ತಿರುವುದೂ ಗಮನಕ್ಕೆ ಬಂದಿದೆ. ಇಂಥಾ ಪ್ರಕರಣಗಳಿಂದ ರೋಗ ಹರಡುವ ಸಾಧ್ಯತೆಯ ಜೊತೆಗೆ ಕರ್ತವ್ಯದಲ್ಲಿರುವ ಸಿಬ್ಬಂದಿಯ ಸಮಯ ನಷ್ಟವಾಗುತ್ತಿದೆ. ಈ ಬಗ್ಗೆ ಎಲ್ಲರೂ ಜಾಗರೂಕರಾಗಿರಬೇಕು ಎಂದವರು ನುಡಿದರು.

