HEALTH TIPS

ಅನುಮತಿ ಹೊಂದಿರುವ ಸಂಸ್ಥೆಗಳು ಮಂಜೂರು ಮಾಡಲಾದ ದಿನಗಳಲ್ಲಿ ಮತ್ತು ಅವಧಿಯಲ್ಲಿ ಮಾತ್ರ ತೆರೆಯಬೇಕು : ಜಿಲ್ಲಾಧಿಕಾರಿ


        ಕಾಸರಗೋಡುಃ ಜಿಲ್ಲೆಯ ಇಂದಿನ ಪರಿಸ್ಥಿತಿಯಲ್ಲಿ ಕೋರ್ ಸಮಿತಿ ತೀರ್ಮಾನ ಪ್ರಕಾರ ಕಾರ್ಯಾಚರಿಸಲು ಅನುಮತಿ ಹೊಂದಿರುವ ಸಂಸ್ಥೆಗಳು ಮಂಜೂರು ಮಾಡಲಾದ ದಿನಗಳಲ್ಲಿ ಮತ್ತು ಅವಧಿಯಲ್ಲಿ ಮಾತ್ರ ತೆರೆಯಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು. 
      ಅನುಮತಿ ಹೊಂದಿರುವ ಅಂಗಡಿಗಳು ಬೆಳಗ್ಗೆ 7 ರಿಂದ ಸಂಜೆ 7 ಗಂಟೆ ವರೆಗೆ ಮಾತ್ರ ಕಾರ್ಯಾಚರಿಸಬೇಕು. ಹೋಟೆಲ್, ರೆಸ್ಟಾರೆಂಟ್ ಇತ್ಯಾದಿಗಳು ತೆರೆದು ಕಾರ್ಯಾಚರಿಸುವಂತಿಲ್ಲ. ಬದಲು ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆ ವರೆಗೆ ಸಂಬಂಧಪಟ್ಟ ಸ್ಥಳೀಯಾಡಳಿತೆ ಸಂಸ್ಥೆಗಳ ಅನುಮತಿಯೊಂದಿಗೆ ಪಾರ್ಸೆಲ್ ವಿತರಣೆ , ಹೋಂ ಡೆಲಿವರಿ ಇತ್ಯಾದಿ ನಡೆಸಬಹುದು. ಈ ವೇಳೆ ಎಲ್ಲ ರೀತಿಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು ಎಂದವರು ತಿಳಿಸಿದರು.
    ಸಿ.ಆರ್.ಪಿ.ಸಿ. 144 ಪ್ರಕಾರದ ನಿಷೇದಾಜ್ಞೆ, ಕೇಂದ್ರ ಸರ್ಕಾರದ ಲಾಕ್ ಡೌನ್ ಆದೇಶ ಜಾರಿಯಲ್ಲಿರುವುದರಿಂದ ರಾತ್ರಿ 8 ಗಂಟೆಯಿಂದ ಬೆಳಗ್ಗೆ 7 ಗಂಟೆ ವರೆಗೆ ಜನಸಂಚಾರ, ವಾಹನಸಂಚಾರ ಸಲ್ಲದು. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಪೆÇಲೀಸರು ಕಾನೂನು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆದೇಶ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries