HEALTH TIPS

ಲಾಕ್ ಡೌನ್ ಹಿನ್ನೆಲೆಯಲ್ಲಿ ಕೊಲ್ಲಂಗಾನ ಮೇಳದ ವಾರ್ಷಿಕ ತಿರುಗಾಟಕ್ಕೆ ಸಾಂಪ್ರದಾಯಿಕ ತೆರೆ-ಸರಳವಾಗಿ ನೆರವೇರಿದ ಗೆಜ್ಜೆಬಿಚ್ಚುವ ಸೇವೆ

   
      ಬದಿಯಡ್ಕ: ಕೊಲ್ಲಂಗಾನ ಶ್ರೀದುರ್ಗಾಪರಮೇಶ್ವರಿ ಕೃಪಾ ಪೋಶಿತ ಯಕ್ಷಗಾನ ಮಂಡಳಿಯ ವಾರ್ಷಿಕ ತಿರುಗಾಟ ಶುಕ್ರವಾರ ಶ್ರೀಕ್ಷೇತ್ರ ಕೊಲ್ಲಂಗಾನದಲ್ಲಿ ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಶೈಲಿಯೊಂದಿಗೆ ಸರಳವಾಗಿ ನೆರವೇರಿತು.
       ಶುಕ್ರವಾರ ರಾತ್ರಿ ಶ್ರೀಕ್ಷೇತ್ರದಲ್ಲಿ ನಡೆದ ಗೆಜ್ಜೆಬಿಚ್ಚುವ ಸೇವೆಯಾಟಕ್ಕೆ ಮೇಳದ ವ್ಯವಸ್ಥಾಪಕ ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯ ಶ್ರೀನಿಲಯ ಕೊಲ್ಲಂಗಾನ ಅವರು ಪ್ರಾರ್ಥನೆ ಸಲ್ಲಿಸಿ ಚಾಲನೆ ನೀಡಿದರು. ಬಳಿಕ ಎರಡು ವೇಷಗಳೊಂದಿಗೆ ದೇವರ ಮುಂದೆ ಕುಣಿದು ಗೆಜ್ಜೆ ಬಿಚ್ಚಲಾಯಿತು. ಹಿಮ್ಮೇಳದಲ್ಲಿ ಡಾ.ಸತೀಶ ಪುಣಿಚಿತ್ತಾಯ ಪೆರ್ಲ, ಮನೋಹರ ಬಲ್ಲಾಳ್, ರವಿ ಶೆಟ್ಟಿ ಕೊಲ್ಲಂಗಾನ(ಭಾಗವತಿಕೆ), ಉದಯ ಕಂಬಾರ್, ಈಶ್ವರ ಮಲ್ಲ, ಅನೂಪ್ ಸ್ವರ್ಗ(ಚೆಂಡೆ-ಮದ್ದಳೆ) ಸಹಕರಿಸಿದರು. ಮಹೇಶ್ ಮುಳಿಯಾರ್ ಹಾಗೂ ಸುಮನ್ ರಾಜ್ ವೇಷಧಾರಿಗಳಾಗಿ ಭಾಗವಹಿಸಿದ್ದರು.
     ಕೋವಿಡ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಹೇರಲ್ಪಟ್ಟ ಬಳಿಕ ಮೇಳ ತಿರುಗಾಟವನ್ನು ಅನಿವಾರ್ಯವಾಗಿ ಮೊಟಕುಗೊಳಿಸಿತ್ತು. ಆದರೆ ಯಕ್ಷಗಾನದ ಪರಂಪರೆಯ ಅನುಸಾರ ಹತ್ತಾವದಿ(ಪತ್ತನಾಜೆ)ಯಂದು ವಾರ್ಷಿಕ ತಿರುಗಾಟ ಕೊನೆಗೊಳ್ಳುವ ಹಿನ್ನೆಲೆಯಲ್ಲಿ ಕೋವಿಡ್ ನಿಯಂತ್ರಣಗಳನ್ನು ಗಮನದಲ್ಲಿಸಿ ಮಿತಿಗೊಳಪಟ್ಟ ಜನರಿದ್ದು ಮೇಳದ ಸೇವೆಯಾಟ ನೆರವೇರಿತು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries