ಕಾಸರಗೋಡು: ಜಿಲ್ಲೆಯಲ್ಲಿ ಸತತ ಒಂಭತ್ತನೇ ದಿನವಾದ ಶನಿವಾರ ಕೂಡ ಹೊಸದಾಗಿ ಕೊರೊನಾ ವೈರಸ್ ಸೋಂಕು ದಾಖಲಾಗಿಲ್ಲ. ಜಿಲ್ಲೆಯಲ್ಲಿ ಒಬ್ಬರು ಗುಣಮುಖರಾಗಲು ಬಾಕಿ ಇದ್ದಾರೆ.
ಜಿಲ್ಲೆಯಲ್ಲಿ ಈ ವರೆಗೆ 177 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ. ಮನೆಗಳಲ್ಲಿ 896 ಮಂದಿ, 93 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ಶನಿವಾರ ನೂತನವಾಗಿ 28 ಮಂದಿಯನ್ನು ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ. 18 ಮಂದಿ ತಮ್ಮ ನಿಗಾ ಅವ„ ಪೂರ್ಣಗೊಳಿಸಿದ್ದಾರೆ.
5064 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 4442 ಮಂದಿಯ ಸ್ಯಾಂಪಲ್ ನೆಗೆಟಿವ್ ಆಗಿದೆ.
ಕೇರಳದಲ್ಲಿ ಶನಿವಾರ ಇಬ್ಬರಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. ದಿನಗಳ ಹಿಂದೆ ವಿದೇಶದಿಂದ ಬಂದವರಿಗೆ ಕೊರೊನಾ ವೈರಸ್ ಸೋಂಕು ಬಾಧಿಸಿದೆ. ಇವರು ಮೇ 7 ರಂದು ದುಬೈಯಿಂದ ಕಲ್ಲಿಕೋಟೆ ಹಾಗು ಅಬುದಾಬಿಯಿಂದ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಬಂದಿಳಿದವರಾಗಿದ್ದಾರೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಇಡುಕ್ಕಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಒಬ್ಬರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಈ ವರೆಗೆ ಒಟ್ಟು 505 ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿದ್ದು, ಇದೀಗ 17 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟು 23930 ಮಂದಿ ನಿಗಾವಣೆಯಲ್ಲಿದ್ದಾರೆ. ಈ ಪೈಕಿ 23596 ಮಂದಿ ಮನೆಗಳಲ್ಲೂ, 334 ಮಂದಿ ಆಸ್ಪತ್ರೆಗಳಲ್ಲೂ ನಿಗಾವಣೆಯಲ್ಲಿದ್ದಾರೆ. ಶನಿವಾರ ಒಟ್ಟು 123 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ತನಕ 36648 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದ್ದು, ಲಭ್ಯ 36002 ನೆಗೆಟಿವ್ ಆಗಿದೆ.
ಕೇಸು ದಾಖಲು : ಲಾಕ್‍ಡೌನ್ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 13 ಕೇಸುಗಳನ್ನು ದಾಖಲಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 1, ಕುಂಬಳೆ-3, ವಿದ್ಯಾನಗರ-3, ಮೇಲ್ಪರಂಬ-1, ಅಂಬಲತ್ತರ-1, ಚಂದೇರ-3, ಚಿಟ್ಟಾರಿಕ್ಕಲ್-1 ಎಂಬಂತೆ ಕೇಸು ದಾಖಲಿಸಲಾಗಿದ್ದು, ವಿವಿಧ ಕೇಸುಗಳಿಗೆ ಸಂಬಂ„ಸಿ 24 ಮಂದಿಯನ್ನು ಬಂ„ಸಲಾಗಿದೆ. 6 ವಾಹನಗಳನ್ನು ವಶಪಡಿಸಲಾಗಿದೆ. ಜಿಲ್ಲೆಯಲ್ಲಿ ಈ ತನಕ 2097 ಕೇಸುಗಳನ್ನು ದಾಖಲಿಸಲಾಗಿದೆ. 2718 ಮಂದಿಯನ್ನು ಬಂಧಿಸಲಾಗಿದ್ದು, 875 ವಾಹನಗಳನ್ನು ವಶಪಡಿಸಲಾಗಿದೆ.


