ಕಾಸರಗೋಡು: ಕೇರಳ ರಾಜ್ಯ ಭಾರತ್ ಸ್ಕೌಟ್ ಆಂಡ್ ಗೈಡ್ಸ್ ಕಾಸರಗೋಡು ಜಿಲ್ಲಾ ಅಸೋಸಿಯೇಶನ್ ನೇತೃತ್ವದಲ್ಲಿ ಮುಖ್ಯಮಂತ್ರಿ ದುರಂತ ನಿವಾರಣೆ ನಿಧಿಗೆ 10010 ರೂ. ಮತ್ತು ಜಿಲ್ಲೆಯ ಆರೋಗ್ಯ ಕಾರ್ಯಕರ್ತರಿಗೆ 50 ಪಿ.ಪಿ.ಕಿಟ್ ವಿತರಣೆ ನಡೆಸಲಾಯಿತು.
ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ನಿಧಿ ಮತ್ತು ಕಿಟ್ ಹಸ್ತಾಂತರಿಸಲಾಯಿತು. ಶಿಕ್ಷಣ ಉಪನಿರ್ದೇಶಕಿ ಕೆ.ವಿ.ಪುಷ್ಪಾ, ಡಿ.ಡಿ.ಇ. ಮತ್ತು ಅಸೋಸಿಯೇಶನ್ ಜಿಲ್ಲಾ ಪ್ರಧಾನ ಕಮೀಷನರ್ ಆಗಿರುವ ನಂದಿಕೇಶ ಹಸ್ತಾಂತರ ನಡೆಸಿದರು.
ನೀಲೇಶ್ವರ ನಗರಸಭೆ ಅಧ್ಯಕ್ಷ ಪೆÇ್ರ.ಕೆ.ಪಿ.ಜಯರಾಜನ್, ಜಿಲ್ಲಾ ಪೆÇಲೀಸ್ ವರಿಷ್ಠಧಿಕಾರಿ ಡಿ.ಶಿಲ್ಪಾ, ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್, ಗೈಡ್ಸ್ ಜಿಲ್ಲಾ ಕಮೀಷನರ್ ಭಾರ್ಗವಿ ಕುಟ್ಟಿ, ಸ್ಕೌಟ್ ಜಿಲ್ಲಾ ಕಾರ್ಯದರ್ಶಿ ಕಿರಣ್ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.


