ಕಾಸರಗೋಡು: ಜಿಲ್ಲೆಯಲ್ಲಿ ಶನಿವಾರ 10 ಮಂದಿಗೆ ಕೋವಿಡ್ 19 ಸೋಂಕು ಪಾಸಿಟಿವ್ ಆಗಿದೆ. ಒಬ್ಬರು ರೋಗದಿಂದ ಗುಣಮುಖರಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕು ಬಾ„ತರ ಸಂಖ್ಯೆ 112 ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಪಾಸಿಟಿವ್ ಕೇಸುಗಳು-ವಿದೇಶದಿಂದ ಬಂದವರು : ಕುವೈತ್‍ನಿಂದ ಆಗಮಿಸಿದ್ದ ಕೋಡೋಂ-ಬೇಳೂರು ಗ್ರಾಮ ಪಂಚಾಯತ್ ನಿವಾಸಿ 37 ವರ್ಷದ ವ್ಯಕ್ತಿ, ಪುಲ್ಲೂರು-ಪೆರಿಯ ಗ್ರಾಮ ಪಂಚಾಯತ್ ನಿವಾಸಿ 40 ವರ್ಷದ ವ್ಯಕ್ತಿ, ಅಬುದಾಬಿಯಿಂದ
ಬಂದಿದ್ದ 32 ವರ್ಷದ ವ್ಯಕ್ತಿ, ಪುಲ್ಲೂರು-ಪೆರಿಯ ಗ್ರಾಮ ಪಂಚಾಯತ್ ನಿವಾಸಿ 31 ವರ್ಷದ ವ್ಯಕ್ತಿ, ದುಬಾಯಿಯಿಂದ ಆಗಮಿಸಿದ್ದ ಕುಂಬಳೆ ನಿವಾಸಿ 39 ವರ್ಷದ ವ್ಯಕ್ತಿ, ಇವರ 8 ವರ್ಷದ ಪುತ್ರನಿಗೆ ಸೋಂಕು ತಗುಲಿದೆ.
ಮಹಾರಾಷ್ಟ್ರ ದಿಂದ ಆಗಮಿಸಿದವರು : ಮಹಾರಾಷ್ಟ್ರದಿಂದ ಆಗಮಿಸಿದ್ದ ಪುತ್ತಿಗೆ ಗ್ರಾಮ ಪಂಚಾಯತ್ ನಿವಾಸಿ 47 ವರ್ಷದ ನಿವಾಸಿ, ಕುಂಬ್ಡಾಜೆ ನಿವಾಸಿ 34 ವರ್ಷದ ಮಹಿಳೆ(ಇವರ ಪತಿ ಸೋಂಕು ಖಚಿತಗೊಂಡು ಈಗಾಗಲೇ ಆಸ್ಪತ್ರೆಗೆ ದಾಖಲಾಗಿದ್ದಾರೆ.), ಬದಿಯಡ್ಕ ನಿವಾಸಿ 26 ವರ್ಷದ ವ್ಯಕ್ತಿ, ಮಂಗಲ್ಪಾಡಿ ನಿವಾಸಿ 43 ವರ್ಷದ ವ್ಯಕ್ತಿ ಸೋಂಕು ಖಚಿತಗೊಂಡವರು.
ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ, ಮೇ 29ರಂದು ಸೋಂಕು ಖಚಿತಗೊಂಡಿದ್ದ, ಮಂಗಲ್ಪಾಡಿ ನಿವಾಸಿ 31 ವರ್ಷದ ವ್ಯಕ್ತಿ ರೋಗದಿಂದ ಗುಣಮುಖರಾಗಿದ್ದಾರೆ.
ನಿಗಾದಲ್ಲಿ 3713 ಮಂದಿ :
ಕಾಸರಗೋಡು ಜಿಲ್ಲೆಯಲ್ಲಿ 3713 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 3021 ಮಂದಿ, ಆಸ್ಪತ್ರೆಗಳಲ್ಲಿ 692 ಮಂದಿ ನಿಗಾದಲ್ಲಿದ್ದಾರೆ. 7154 ಮಂದಿಯ ಸ್ಯಾಂಪಲ್ ತಪಾಸಣೆಯ ಫಲಿತಾಂಶ ನೆಗೆಟಿವ್ ಆಗಿದೆ. 615 ಮಂದಿಯ ಫಲಿತಾಂಶ ಲಭಿಸಿಲ್ಲ. ಶನಿವಾರ ನೂತನವಾಗಿ 423 ಮಂದಿಯನ್ನು ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ.
ಕೇರಳದಲ್ಲಿ 108 ಮಂದಿಗೆ ಸೋಂಕು :
ಕೇರಳ ರಾಜ್ಯದಲ್ಲಿ ಶನಿವಾರ 108 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. 50 ಮಂದಿ ಗುಣಮುಖರಾಗಿದ್ದಾರೆ.
ರೋಗ ಪೀಡಿತರಲ್ಲಿ 64 ಮಂದಿ ವಿದೇಶದಿಂದ ಬಂದವರು. (ಯುಎಇ-28, ಕುವೈಟ್-14, ತಜಿಕಿಸ್ತಾನ್-13, ಸೌದಿ ಅರೇಬಿಯಾ-4, ನೈಜೀರಿಯ-3, ಒಮಾನ್-1, ಅಯರ್ಲೇಂಡ್-1). 34 ಮಂದಿ ಇತರ ರಾಜ್ಯಗಳಿಂದ ಬಂದವರು. (ಮಹಾರಾಷ್ಟ್ರ-15, ದೆಹಲಿ-8, ತಮಿಳುನಾಡು-5, ಗುಜರಾತ್-4, ಮಧ್ಯಪ್ರದೇಶ-1, ಆಂಧ್ರ ಪ್ರದೇಶ-1.) ಸಂಪರ್ಕದಲ್ಲಿ 10 ಮಂದಿಗೆ ರೋಗ ಬಾ„ಸಿದೆ. ಪಾಲ್ಘಾಟ್ ಜಿಲ್ಲೆ-7, ಮಲಪ್ಪುರಂ-2, ಮತ್ತು ತೃಶ್ಶೂರು -1 ಎಂಬಂತೆ ಸಂಪರ್ಕದಿಂದ ರೋಗ ಹರಡಿದೆ.
ವಿವಿಧ ಜಿಲ್ಲೆಗಳಲ್ಲಿನ ರೋಗ ಬಾಧಿತರು : ಕೊಲ್ಲಂ-19, ತೃಶ್ಶೂರು-16, ಮಲಪ್ಪುರಂ-12, ಕಣ್ಣೂರು-12, ಪಾಲ್ಘಾಟ್-11, ಕಾಸರಗೋಡು-10, ಪತ್ತನಂತಿಟ್ಟ-9, ಆಲಪ್ಪುಳ-4, ಕಲ್ಲಿಕೋಟೆ-4, ತಿರುವನಂತಪುರ-3, ಇಡುಕ್ಕಿ-3, ಎರ್ನಾಕುಳಂ-3, ಕೋಟ್ಟಯಂ-2.
ರೋಗ ಖಾತ್ರಿಯಾಗಿದ್ದ ಮಲಪ್ಪುರಂ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪರಪ್ಪನಂಗಾಡಿ ನಿವಾಸಿ ಹಂಸ ಕೋಯ(61) ಅವರು ಶನಿವಾರ ಬೆಳಗ್ಗೆ ಸಾವಿಗೀಡಾಗುವುದರೊಂದಿಗೆ ರಾಜ್ಯದಲ್ಲಿ ಒಟ್ಟು ಸತ್ತವರ ಸಂಖ್ಯೆ 15 ಕ್ಕೇರಿದೆ.
ಚಿಕಿತ್ಸೆ ಪಡೆಯುತ್ತಿದ್ದ 50 ಮಂದಿ ಶನಿವಾರ ಗುಣಮುಖರಾಗಿದ್ದಾರೆ. ಪಾಲ್ಘಾಟ್-30, ಕಲ್ಲಿಕೋಟೆ-7(6 ಮಂದಿ ಏರ್ ಇಂಡಿಯಾ ಸಿಬ್ಬಂದಿಗಳು), ಎರ್ನಾಕುಳಂ-6 (ಇಬ್ಬರು ಕೊಲ್ಲಂ ನಿವಾಸಿಗಳು), ಕಣ್ಣೂರು-5, ಇಡುಕ್ಕಿ-1, ಕಾಸರಗೋಡು-1 ಎಂಬಂತೆ ಗುಣಮುಖರಾಗಿದ್ದಾರೆ. ಪ್ರಸ್ತುತ ವಿವಿಧ ಆಸ್ಪತ್ರೆಗಳಲ್ಲಾಗಿ 1029 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವರೆಗೆ 762 ಮಂದಿ ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಒಟ್ಟು 1,83,097 ಮಂದಿ ನಿಗಾವಣೆಯಲ್ಲಿದ್ದಾರೆ. ಇವರಲ್ಲಿ 1,81,482 ಮಂದಿ ಮನೆಗಳಲ್ಲೂ, ಇನ್‍ಸ್ಟಿಟ್ಯೂಷನಲ್ ಕ್ವಾರೆಂಟೈನ್‍ನಲ್ಲಿದ್ದಾರೆ. 1615 ಮಂದಿ ಆಸ್ಪತ್ರೆಗಳಲ್ಲಿದ್ದಾರೆ.
ಶನಿವಾರ ಶಂಕಿತ 284 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವರೆಗೆ 81,517 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದ್ದು, ಲಭ್ಯ 77,517 ಸ್ಯಾಂಪಲ್‍ಗಳು ನೆಗೆಟಿವ್ ಆಗಿದೆ. ಪ್ರಸ್ತುತ 138 ಹಾಟ್‍ಸ್ಪಾಟ್‍ಗಳಿವೆ.
ಕ್ವಾರೆಂಟೈನ್‍ನಲ್ಲಿದ್ದ ನಾಟಿ ವೈದ್ಯ ನಿಧನ : ಪ್ರಸಿದ್ಧ ನಾಟಿ ವೈದ್ಯ ತಳಂಗರೆ ಗಝಾಲಿ ನಗರದ ರಾಮಚಂದ್ರ ವೈದ್ಯರ್(75) ಅವರು ನಿಧನ ಹೊಂದಿದರು.
ಇತ್ತೀಚೆಗೆ ತಮಿಳುನಾಡಿಗೆ ಹೋಗಿ ಮರಳಿ ಬಂದ ಅವರು ಮನೆಯಲ್ಲಿ ಕ್ವಾರೆಂಟೈನ್‍ನಲ್ಲಿದ್ದರು. ಕ್ವಾರೆಂಟೈನ್ ಶನಿವಾರ ಕೊನೆಗೊಳ್ಳಲಿರುವಂತೆ ಸಾವಿಗೀಡಾದರು. ಸಾವಿಗೆ ಹೃದಯಾಘಾತವೆಂದು ಶಂಕಿಸಲಾಗಿದೆ. ಮೃತ ವ್ಯಕ್ತಿಯ ಗಂಟಲ ದ್ರವವನ್ನು ತಪಾಸಣೆಗೆ ಕಳುಹಿಸಲಾಗಿದೆ. ಮೃತ ದೇಹವನ್ನು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.
ಬಸ್ ಓಡಾಟ ನಿಲುಗಡೆ :
ಲಾಕ್‍ಡೌನ್‍ನಲ್ಲಿ ರಿಯಾಯಿತಿ ನೀಡಿದ ಹಿನ್ನೆಲೆಯಲ್ಲಿ ಕೆಲವೊಂದು ಖಾಸಗಿ ಬಸ್‍ಗಳು ಕೆಲವು ದಿನಗಳಿಂದ ಸೇವೆ ನಡೆಸಿದ್ದರೂ, ಶನಿವಾರದಿಂದ ಬಸ್ ಸೇವೆಯನ್ನು ನಿಲ್ಲಿಸಿದ್ದಾರೆ. ಪ್ರಯಾಣಿಕರ ಸಂಖ್ಯೆ ಬಹಳಷ್ಟು ಕಡಿಮೆ ಇರುವುದರಿಂದ ಬಸ್ ನಡೆಸಲು ಸಾಧ್ಯವಾಗದಿರುವುದರಿಂದ ಬಸ್ ಓಡಾಟ ನಿಲುಗಡೆಗೊಳಿಸಲಾಗಿದೆ ಎಂದು ಬಸ್ ಮಾಲಕರು ತಿಳಿಸಿದ್ದಾರೆ.
ವ್ಯಕ್ತಿಗೆ ಕ್ವಾರೆಂಟೈನ್ : ಕ್ವಾರೆಂಟೈನ್‍ನಲ್ಲಿದ್ದ ವ್ಯಕ್ತಿಯನ್ನು ನೋಡಲು ಬಂದ ವ್ಯಕ್ತಿಯನ್ನೂ ಕ್ವಾರೆಂಟೈನ್‍ಗೆ ಹಾಕಲಾಗಿದೆ. ಮನೆಯಲ್ಲಿ ಕ್ವಾರೆಂಟೈನ್ ನಲ್ಲಿದ್ದ ವ್ಯಕ್ತಿಯನ್ನು ನೋಡಲು ಬಂದಿದ್ದ ಸೂರ್ಲಿನ ನಿವಾಸಿಯನ್ನು ಕ್ವಾರೆಂಟೈನ್ ಮಾಡಲಾಗಿದೆ.
ಮಾಸ್ಕ್ ಧರಿಸದ 243 ಮಂದಿ ವಿರುದ್ಧ ಕೇಸು ದಾಖಲು :
ಕಾಸರಗೋಡು ಗೋಡು ಜಿಲ್ಲೆಯಲ್ಲಿ ಮಾಸ್ಕ್ ಧರಿಸದ 243 ಮಂದಿಯ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಮೂಲಕ ಈ ವರೆಗೆ ಒಟ್ಟು 4888 ಮಂದಿ ವಿರುದ್ಧ ಕೇಸು ದಾಖಲಿಸಿ, ದಂಡ ವಸೂಲಿ ಮಾಡಲಾಗಿದೆ.
ನಿಷೇಧಾಜ್ಞೆ ಉಲ್ಲಂಘನೆ : 7 ಕೇಸು ದಾಖಲು:
ನಿಷೇಧಾಜ್ಞೆ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 7 ಕೇಸುಗಳನ್ನು ದಾಖಲಿಸಲಾಗಿದೆ. ಇಬ್ಬರನ್ನು ಬಂ„ಸಲಾಗಿದ್ದು, ಒಂದು ವಾಹನವನ್ನು ವಶಪಡಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 2583 ಕೇಸುಗಳನ್ನು ದಾಖಲಿಸಲಾಗಿದೆ. 3246 ಮಂದಿಯನ್ನು ಬಂಧಿಸಲಾಗಿದ್ದು, 1106 ವಾಹನಗಳನ್ನು ವಶಪಡಿಸಲಾಗಿದೆ.



