ಪೆರ್ಲ: ತಲಪಾಡಿ ಗಡಿಯ ಮೂಲಕ ದ.ಕ.ಹಾಗೂ ಕಾಸರಗೋಡು ಜಿಲ್ಲಾಡಳಿತಗಳು ಉದ್ಯೋಗಕ್ಕೆ ತೆರಳುವವರಿಗೆ ಅನುಮತಿ ನೀಡಿದ್ದರೂ ಸಾರಡ್ಕ ಗಡಿ ತೆರೆಯದಿರುವುದು ಪೆರ್ಲ ಬದಿಯಡ್ಕ,ಕುಂಬಳೆ ಭಾಗದವರಿಗೊಂದು ಸಮಸ್ಯೆಯಾಗಿ ಪರಿಣಮಿಸಿದೆ.
ಲಾಕ್ ಡೌನ್ ಬಳಿಕ ಹೇರಲ್ಪಟ್ಟ ಗಡಿ ನಿಯಂತ್ರಣವೆಂಬ ಅಪಕ್ವ ವ್ಯವಸ್ಥೆಯಿಂದ ಜನಸಾಮಾನ್ಯರ, ಕೃಷಿ-ಹೈನುಗಾರರ ಬದುಕು ಗಡಿ ಪ್ರದೇಶಗಳಲ್ಲಿ ಮೂರಾಬಿಟ್ಟಿಯಾಗಿ ಮುಂದಿನ ಎರಡು ವರ್ಷಗಳ ವರೆಗೂ ತುಂಬಲಾರದ ಕಷ್ಟ-ನಷ್ಟಗಳಿಗೆ ಕಾರಣವಾಗುತ್ತಿರುವುದು ಕಳವಳಕಾರಿ ಸತ್ಯವಾಗಿದೆ. ಇದರಿಂದಾಗಿ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ಕೇರಳ -ಕರ್ನಾಟಕ ಸರ್ಕಾರದ ದ್ವಿಮುಖ ನೀತಿ ಬಹಿರಂಗಗೊಂಡಿದೆ.
ಸಾರಡ್ಕ ಗಡಿ ಚೆಕ್ ಪೆÇೀಸ್ಟ್ ಮೂಲಕ ವಿಟ್ಲ,ಅಡ್ಯನಡ್ಕ, ಪೆರುವಾಯಿ,ಪುತ್ತೂರು ಭಾಗಕ್ಕೆ ದಿನಂಪ್ರತಿ ಕೆಲಸಕ್ಕೆ ಹೋಗುವವರು ಹಾಗೂ ಕಾಸರಗೋಡಿನ ಭಾಗಕ್ಕೆ ಬರುವವರು ಅತೀವ ಸಂದಿಗ್ದಾವಸ್ಥೆಯಲ್ಲಿ ಸಿಲುಕಿಕೊಂಡಿದ್ದಾರೆ. ಇದೀಗ ತಲಪಾಡಿ ಭಾಗದಲ್ಲಿ ಮಾತ್ರ ಸ್ಪೇಶಲ್ ಪಾಸ್ ಗೆ ಅನುಮತಿ ನೀಡಿದ್ದು ಸಾರಡ್ಕ ಗಡಿ ಭಾಗದವರಿಗೆ ಪಾಸ್ ವ್ಯವಸ್ಥೆ ಇಲ್ಲದಿರುವುದರಿಂದ ಈ ಪ್ರದೇಶದ ಜನತೆ ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಇಳಿಯಲಿದ್ದಾರೆಂದು ತಿಳಿದು ಬಂದಿದೆ.


