ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ ಒಬ್ಬರಿಗೆ ಕೋವಿಡ್ 19 ಸೋಂಕು ಪಾಸಿಟಿವ್ ಆಗಿದೆ. 7 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ.
ಮಹಾರಾಷ್ಟ್ರದಿಂದ ಆಗಮಿಸಿದ್ದ ಪಡನ್ನ ಗ್ರಾಮ ಪಂಚಾಯತ್ ನಿವಾಸಿ 39 ವರ್ಷದ ವ್ಯಕ್ತಿಗೆ ರೋಗ ಖಚಿತವಾಗಿದೆ ಎಂದು ಜಿಲ್ಲಾ ವೈದ್ಯಾ„ಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ಜಿಲ್ಲೆಯಲ್ಲಿ ಈಗ ಒಟ್ಟು 103 ಮಂದಿ ಕೋವಿಡ್ ಸೋಂಕು ಖಚಿತಗೊಂಡವರಿದ್ದಾರೆ.
ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ 6 ಮಂದಿ, ಕಾಂಞಂಗಾಡ್ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಒಬ್ಬರು ರೋಗದಿಂದ ಗುಣಮುಖರಾಗಿದ್ದಾರೆ. ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ ಮಧೂರು ಗ್ರಾಮ ಪಂಚಾಯತ್ ನಿವಾಸಿ 38 ವರ್ಷದ ವ್ಯಕ್ತಿ, 23 ವರ್ಷದ ಕೋಡೋಂ-ಬೇಳೂರು ನಿವಾಸಿ, ಮಂಗಲ್ಪಾಡಿ ಗ್ರಾಮ ಪಂಚಾಯತ್ ನಿವಾಸಿಗಳಾದ 28 ಮತ್ತು 40 ವರ್ಷದ ವ್ಯಕ್ತಿಗಳು, ಪೈವಳಿಕೆ ನಿವಾಸಿ 37 ವರ್ಷದ ವ್ಯಕ್ತಿ, ಕುಂಬಳೆ ನಿವಾಸಿ 54 ವರ್ಷದ ವ್ಯಕ್ತಿ ಮತ್ತು 38 ವರ್ಷದ ಮಹಿಳೆ ರೋಗದಿಂದ ಗುಣಮುಖರಾದವರು.
ಜಿಲ್ಲೆಯಲ್ಲಿ ಒಟ್ಟು 3727 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 3040 ಮಂದಿ, ಆಸ್ಪತ್ರೆಗಳಲ್ಲಿ 687 ಮಂದಿ ನಿಗಾದಲ್ಲಿದ್ದಾರೆ. 710 ಮಂದಿಯ ಗಂಟಲರಸ ತಪಾಸಣೆಗೆ ಕಳುಹಿಸಲಾಗಿದೆ. 441 ಮಂದಿ ಶುಕ್ರವಾರ ತಮ್ಮ ನಿಗಾ ಅವ„ ಪೂರ್ಣಗೊಳಿಸಿದ್ದಾರೆ. 228 ಮಂದಿಯನ್ನು ನೂತನವಾಗಿ ಐಸೊಲೇಷನ್ ವಾರ್ಡಿಗೆ
ದಾಖಲಿಸಲಾಗಿದೆ.
ಕೇರಳದಲ್ಲಿ 111 ಮಂದಿಗೆ ಸೋಂಕು :
ಕೇರಳದಲ್ಲಿ ಶುಕ್ರವಾರ 111 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಕೇರಳದಲ್ಲಿ ಪ್ರಥಮ ಬಾರಿ 100 ಕ್ಕೂ ಅ„ಕ ಮಂದಿಗೆ ರೋಗ ಬಾ„ಸಿದ ದಿನವಾಗಿದೆ ಶುಕ್ರವಾರ.
ರೋಗಬಾಧಿತರಲ್ಲಿ 50 ಮಂದಿ ವಿದೇಶದಿಂದ ಬಂದವರು. 48 ಮಂದಿ ಇತರ ರಾಜ್ಯಗಳಿಂದ ಬಂದವರು. ಸಂಪರ್ಕದಲ್ಲಿ 10 ಮಂದಿಗೆ ಹಾಗು ಮೂವರು ಆರೋಗ್ಯ ಕಾರ್ಯಕರ್ತರಿಗೆ ರೋಗ ಬಾಧಿಸಿದೆ.
ತಿರುವನಂತಪುರ-5, ಕೊಲ್ಲಂ-2, ಪತ್ತನಂತಿಟ್ಟ-11, ಆಲಪ್ಪುಳ-5, ಕೋಟ್ಟಯಂ-1, ಇಡುಕ್ಕಿ-3, ಎರ್ನಾಕುಳಂ-10, ತೃಶ್ಶೂರು-8, ಪಾಲ್ಘಾಟ್-40, ಮಲಪ್ಪುರಂ-18, ವಯನಾಡು-3, ಕಲ್ಲಿಕೋಟೆ-4, ಕಾಸರಗೋಡು-1 ಎಂಬಂತೆ ರೋಗ ಬಾಧಿಸಿದೆ.
ಅನ್ಯ ರಾಜ್ಯದಿಂದ ಬಂದವರು: ಮಹಾರಾಷ್ಟ್ರ-25, ತಮಿಳುನಾಡು-10, ಕರ್ನಾಟಕ-3, ಉತ್ತರ ಪ್ರದೇಶ-1, ಹರಿಯಾಣ-1, ಲಕ್ಷದ್ವೀಪ-1, ದೆಹಲಿ-4, ಆಂಧ್ರ ಪ್ರದೇಶ-3. ರಾಜ್ಯದಲ್ಲಿ ಶುಕ್ರವಾರ 22 ಮಂದಿ ಗುಣಮುಖರಾಗಿದ್ದಾರೆ. ಕಾಸರಗೋಡು-7, ತಿರುವನಂತಪುರ-1, ಆಲಪ್ಪುಳ-4, ಎರ್ನಾಕುಳಂ-4, ತೃಶ್ಶೂರು-5, ಕಲ್ಲಿಕೋಟೆ-1.
ರಾಜ್ಯದಲ್ಲಿ ಈ ವರೆಗೆ 1697 ಮಂದಿಗೆ ರೋಗ ಬಾ„ಸಿದೆ. ಪ್ರಸ್ತುತ 973 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ಶಂಕಿತ 247 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜ್ಯದಲ್ಲಿ ಒಟ್ಟು 128 ಹಾಟ್‍ಸ್ಪಾಟ್‍ಗಳಿವೆ. 177106 ಮಂದಿ ನಿಗಾವಣೆಯಲ್ಲಿದ್ದಾರೆ. ಇವರಲ್ಲಿ 1545 ಮಂದಿ ಆಸ್ಪತ್ರೆಗಳಲ್ಲೂ, 175561 ಮಂದಿ ಮನೆಗಳಲ್ಲೂ ನಿಗಾವಣೆಯಲ್ಲಿದ್ದಾರೆ. ಇದು ವರೆಗೆ 79074 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದ್ದು, ಲಭ್ಯ 74769 ನೆಗೆಟಿವ್ ಆಗಿದೆ.
ಮಾಸ್ಕ್ ಧರಿಸದ 113 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 113 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 4645 ಮಂದಿ ವಿರುದ್ಧ ಕೇಸು ದಾಖಲಿಸಿ, ದಂಡ ಹೇರಲಾಗಿದೆ.
ಲಾಕ್‍ಡೌನ್ ಉಲ್ಲಂಘನೆ : 8 ಮಂದಿ ವಿರುದ್ಧ ಕೇಸು ದಾಖಲು :
ಲಾಕ್‍ಡೌನ್ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 8 ಕೇಸುಗಳನ್ನು ದಾಖಲಿಸಲಾಗಿದೆ. 8 ಮಂದಿಯನ್ನು ಬಂ„ಸಲಾಗಿದ್ದು, 3 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಠಾಣೆಯಲ್ಲಿ 1 ಕೇಸು, ಕುಂಬಳೆ 1, ಕಾಸರಗೋಡು 2, ಮೇಲ್ಪರಂಬ 1, ಚಂದೇರ 1, ವೆಳ್ಳರಿಕುಂಡು 1, ರಾಜಪುರಂ 1 ಕೇಸುಗಳನ್ನು ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 2576 ಕೇಸುಗಳನ್ನು ದಾಖಲಿಸಲಾಗಿದೆ. 3244 ಮಂದಿಯನ್ನು ಬಂಧಿಸಲಾಗಿದ್ದು, 1105 ವಾಹನಗಳನ್ನು ವಶಪಡಿಸಲಾಗಿದೆ.







