HEALTH TIPS

ಲಾಕ್ ಡೌನ್ ಹಂತ ಹಂತದ ಸಡಿಲಿಕೆ-ತಲಪ್ಪಾಡಿ ಸಹಿತ ಇತರ ಗಡಿ ದಾಟಲು ಸಾಧ್ಯವೇ?


           ಮಂಜೇಶ್ವರ: ಕೋವಿಡ್ ಹಿನ್ನೆಲೆಯಲ್ಲಿ ಮಾ.25 ರಿಂದ ರಾಷ್ಟ್ರ ವ್ಯಾಪಿಹೇರಲ್ಪಟ್ಟ ಲಾಕ್ ಡೌನ್ ನಾಲ್ಕು ಹಂತಗಳಲ್ಲಿ ನಿನ್ನೆ ಕೊನೆಗೊಂಡಿದೆ. ಇಂದಿನಿಂದ ಐದನೇ ಲಾಕ್ ಡೌನ್ ಜೂ.30ರ ವರೆಗೆ ಮುಂದುವರಿಯಲಿದೆ. ಆದರೆ ಹೇರಲ್ಪಟ್ಟ ಲಾಕ್ ಡೌನ್ ಹಂತಹಂತವಾಗಿ ಹಿಂತೆಗೆಲಾಗುವುದೆಂಬ ಆದೇಶದ ಬೆನ್ನಿಗೆ ಮುಚ್ಚಲ್ಪಟ್ಟ ಅಂತರ್ ರಾಜ್ಯ ಗಡಿಗಳ ಪೈಕಿ ತಲಪ್ಪಾಡಿಯಾದರೂ ತೆರೆದುಕೊಳ್ಳುವುದೇ ಎಂಬ ಮಾತುಗಳು ಜನ ಸಾಮಾನ್ಯರೆಡೆಯಲ್ಲಿ ಕೇಳಿಬರುತ್ತಿದೆ.
        ಐದನೇ ಹಂತದ ಲಾಕ್ ಡೌನ್ ನಿರ್ವಹಣೆಯ ಬಗ್ಗೆ ಇಂದು ಬೆಳಿಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಎಲ್ಲಾ ಜಿಲ್ಲಾಧಿಕಾರಿಗಳ ಸಹಿತ ಉನ್ನತ ಮಟ್ಟದ ಅಧಿಕೃತರೊಂದಿಗೆ ವಿಸ್ಕøತ ಚರ್ಚೆ ನಡೆಸುವರು. ಬಳಿಕ ಸಂಜೆಯ ದೈನಂದಿನ ವೇಳೆಗೆ ಸರ್ಕಾರದ ಆದೇಶ ಪ್ರಕಟಿಸುವರು.
         ಜೊತೆಗೆ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಅವರು ಈಗಾಗಲೇ ಕರ್ನಾಟಕದ ಮುಖ್ಯಮಂತ್ರಿಗೆ ರವಾನಿಸಿರುವ ಸಂದೇಶದಲ್ಲಿ ತಲಪ್ಪಾಡಿ ಗಡಿಯನ್ನು ಯಾವ ನಿಬಂಧನೆಗಳ ಅನುಸಾರ ತೆರೆಯಬೇಕೆಂಬ ಬಗ್ಗೆ ನಿರ್ದೇಶನ ಕೇಳಿರುವರೆಂದು ತಿಳಿದುಬಂದಿದೆ. ಕರ್ನಾಟಕದಲ್ಲಿ ಜೂ.8ರ ವರೆಗೂ ಲಾಕ್ ಡೌನ್ ನಿಯಂತ್ರಿತವಾಗಿ ಮುಂದುವರಿಯಲಿದೆ.
         ಈ ಮಧ್ಯೆ ಕೇರಳ ಹಾಗೂ ಕರ್ನಾಟಕದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೋವಿಡ್ ರೋಗಬಾಧಿತರ ಕಾರಣದಿಂದ ಗ್ರಹಿಸಿದಷ್ಟು ಸುಲಭವಾಗಿಗಡಿಗಳನ್ನು ತೆರೆಯುವಂತೆ ಗೋಚರಿಸುತ್ತಿಲ್ಲ. ಒಂದು ವೇಳೆ ಜಿಲ್ಲಾಧಿಕಾರಿಗಳ ವಿವೇಚನೆಯನುಸಾರ ಕ್ರಮ ಕೈಗೊಳ್ಳುವುದಾದರೂ ಅಂತರ್ ರಾಜ್ಯ ಪಾಸ್ ಗಳ ಮೂಲಕ ವಿಷಯಗಳ ತುರ್ತು ಗಮನಿಸಿ ಜನರು, ವಾಹನಗಳ ಸಂಚಾರಕ್ಕೆ ಅನುವುಮಾಡುವ ಸಾಧ್ಯತೆಯಿದೆಂದು ಅಂದಾಜಿಸಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries