ಕಾಸರಗೋಡು: ಅರಬೀ ಕಡಲಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಮುಂದಿನ 24ತಾಸುಗಳಲ್ಲಿ ಕೇರಳದಲ್ಲಿ ಬಿರುಸಿನ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ವಾಯುಭಾರಕುಸಿತದ ಪರಿಣಾಮ ಸುಂಟರಗಾಳಿಯೊಂದಿಗೆ ಮುಂದಿನ 48ತಾಸುಗಳ ಕಾಲ ಭಾರಿ ಮಳೆಯಾಗಲಿದೆ. 'ನಿಸರ್ಗ'ಎಂದು ಗುರುತಿಸಲ್ಪಟ್ಟಿರುವ ಸುಂಟರಗಾಳಿ ಪರಿಣಾಮ ಕೇರಳದ ನಾನಾ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಹಾಗೂ ತಾಸಿಗೆ 45 ರಿಂದ 55 ಹಾಗೂ ಇನ್ನು ಕೆಲವೊಮ್ಮೆ 65ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಈ ಸಂದರ್ಭ ಸಮುದ್ರ ಪ್ರಕ್ಷುಬ್ಧಗೊಳ್ಳುವ ಹಿನ್ನೆಲೆಯಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಕರಾವಳಿಯಲ್ಲಿ ಸಮುದ್ರ ಕೊರೆತ ತೀವ್ರಗೊಳ್ಳುವ ಸಾಧ್ಯತೆಯಿರುವುದರಿಂದ ಕರಾವಳಿಜನತೆ ಜಾಗ್ರತೆ ಪಾಲಿಸುವಂತೆಯೂ ಸೂಚಿಸಲಾಗಿದೆ. ಜೂನ್ 2ರಂದು ಕಾಸರಗೋಡು ಮತ್ತು ಕಣ್ಣೂರು ಒಳಗೊಂಡಂತೆ ಕೇರಳದ ವಿವಿಧ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ವಾಯುಭಾರ ಕುಸಿತ- ಕೇರಳದಲ್ಲಿ ಬಿರುಸಿನ ಗಾಳಿಯೊಂದಿಗೆ ಮಳೆಗೆ ಸಾಧ್ಯತೆ
0
ಜೂನ್ 01, 2020