ಕುಂಬಳೆ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಭಾರತೀಯ ಜನತಾ ಪಕ್ಷ ಕುಂಬಳೆ ಸಮಿತಿಯ ವತಿಯಿಂದ ಕುಂಬಳೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪರಿಸರದಲ್ಲಿ ಕುಂಬಳೆ ಪಂಚಾಯತಿ 22 ನೇ ವಾರ್ಡಿನ ಸದಸ್ಯ, ಬಿಜೆಪಿ ಪಂಚಾಯತಿ ಸಮಿತಿ ಅಧ್ಯಕ್ಷ ಸುಧಾಕರ ಕಾಮತ್ ಅವರ ನೇತೃತ್ವದಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು.
ಸುಧಾಕರ ಕಾಮತ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿ ಸದಸ್ಯ ವಿನೋದನ, ಒಬಿಸಿ ಮೊರ್ಚಾ ಜಿಲ್ಲಾ ಸಮಿತಿ ಸದಸ್ಯ ಶಶಿ ಕುಂಬ್ಳೆ ಉಪಸ್ಥಿತರಿದ್ದರು. ಕುಂಬಳೆ ಬಿಜೆಪಿ ಪಂಚಾಯತಿ ಪ್ರಧಾನ ಕಾರ್ಯದರ್ಶಿ ಜಿತೇಶ್ ನಾೈಕಾಪು ಸ್ವಾಗತಿಸಿ, 144 ನೇ ಬೂತ್ ಅಧ್ಯಕ್ಷ ಕೆ.ಮಧುಸೂದನ್ ಕಾಮತ್ ವಂದಿಸಿದರು.





