ಮಂಜೇಶ್ವರ: ರಾಷ್ಟ್ರವ್ಯಾಪಿ ಭಾದಿಸಿದ ಕರೊನಾ ದಿಂದಾಗಿ ದೇಶ ವ್ಯಾಪಿ ಹಲವಾರು ಸಾವು ನೋವುಗಳು ನಡೆಯುತ್ತಿದ್ದು, ಭಾರತ ದೇಶವನ್ನ ಲಾಕ್ ಡೌನ್ ಮೂಲಕ ದೇಶದ ಜನತೆಯನ್ನು ರಕ್ಷಿಸಲು ಪ್ರಯತ್ನ ಪಟ್ಟ ಕೇಂದ್ರ ಪ್ರಧಾನಿ ನರೇಂದ್ರ ಮೋದಿ ಯವರಿಗೆ ಸರ್ವ ಜನತೆ ಧನ್ಯತೆಯನ್ನ ಸಮರ್ಪಿಸುವ ಸಲುವಾಗಿ ಸ್ಕಂದ ಕರೊನಾ ಹೆಲ್ಪ್ ಡೆಸ್ಕ್ ಮಂಜೇಶ್ವರ ಏರ್ಪಡಿಸಿದ್ದ ಮೋದಿ ಲುಕ್ "ಡ್ರೆಸ್ ಕೋಡ್ ಸ್ಪರ್ಧೆ" ಯ ಫಲಿತಾಂಶ ಶುಕ್ರವಾರ ಬೆಳಗ್ಗೆ 10. ಗಂಟೆಗೆ ಪ್ರಕಟಗೊಂಡಿದೆ.
ಮೋದಿ ಲುಕ್ ಡ್ರೆಸ್ ಕೋಡ್ ಸ್ಪರ್ಧೆಯಲ್ಲಿ ಜ್ಯುನಿಯರ್ ವಿಭಾಗದಲ್ಲಿ ಪ್ರಥಮ ಬಹುಮಾನವನ್ನ ಮಾ. ಹವ್ಯಾಸ್ ಆರ್.ಕೆ, ಪಟ್ಲಮನೆ ಕಯ್ಯಾರ್, ಜೋಡುಕಲ್ಲು. ಇವರು ಪಡೆದಿದ್ದಾರೆ. ಜ್ಯುನಿಯರ್ ವಿಭಾಗದಲ್ಲಿ ದ್ವಿತೀಯ ಬಹುಮಾನವನ್ನ ಮಾ. ಶಯನ್ ರಾಜ್, ರಾಮದಾಸ್ ನಗರ, ಕೂಡ್ಲು, ಕಾಸರಗೋಡು ಪಡೆದಿರುತ್ತಾರೆ. ಅಲ್ಲದೇ ಸೀನಿಯರ್ ವಿಭಾಗದಲ್ಲಿ ಪ್ರಥಮ ಬಹುಮಾನ ಮಾ.ಹವೀಶ್ ಪೂಜಾರಿ ಅಳಪೆ, ಪಡೀಲ್, ಮಂಗಳೂರು. ಹಾಗೂ ಸೀನಿಯರ್ ವಿಭಾಗದಲ್ಲಿ ದ್ವಿತೀಯ ಬಹುಮಾನ ಮಾ.ಶ್ರೀಶಾನ್ ಪೆಲತ್ತಡಿ, ಮುಳ್ಳೇರಿಯಾ ಪಡೆದಿರುತ್ತಾರೆ. ಹಾಗೂ 47 ಮಂದಿ ಸ್ಪರ್ಧಾಳುವಿಗೆ ವಿಶೇಷ ಬಹುಮಾನ ದೊರಕಿದೆ.
ಮೋದಿ ಲುಕ್ ಡ್ರೆಸ್ ಕೋಡ್ ಸ್ಪರ್ಧೆಯು ಸಾಮಾಜಿಕ ಜಾಲತಾಣವಾದ ವಾಟ್ಸಾಪ್ ಮೂಲಕ ನಡೆದಿತ್ತು. ಸ್ಪರ್ಧೆಗೆ ಕಾಸರಗೋಡು, ದಕ್ಷಿಣ ಕನ್ನಡ, ಕೊಡಗು, ಬೆಂಗಳೂರು, ಚಿಕ್ಕಮಗಳೂರು, ಉಡುಪಿ, ಉತ್ತರಕನ್ನಡ ಜಿಲ್ಲೆಯಿಂದ ಈ ಸ್ಪರ್ಧೆಗೆ ಸ್ಪರ್ಧಾಳುಗಳು ಭಾಗವಹಿಸಿದ್ದರು. ಈ ಜಿಲ್ಲೆಯ ಸುಮಾರು 63 ಕ್ಕೂ ಅಧಿಕ ಮಂದಿ ಸ್ಪರ್ಧಾಳುಗಳು ಸ್ಪರ್ಧೆಗೆ ಭಾಗವಹಿಸಿದ್ದು, ತೀರ್ಪುಗಾರರು ಸ್ಪರ್ಧೆಗೊಳಪಟ್ಟ ಒಟ್ಟು 51 ಮಂದಿ ಸ್ಪರ್ಧಾಳುಗಳ ಫೆÇೀಟೋಗಳನ್ನ ಆಯ್ಕೆಗೊಳಿಸಿ, ಅದರಲ್ಲಿ ವಿಜೇತರನ್ನ ಆರಿಸಿರುತ್ತಾರೆ. ಜ್ಯುನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಸ್ಪರ್ಧಾ ವಿಜೇತರಲ್ಲದೆ ಉಳಿದ 47 ಮಂದಿ ಆಯ್ಕೆಗೊಂಡ ಸ್ಪರ್ಧಾಳುಗಳಾದ ಯಶ್ ಎಂ.ಶೆಟ್ಟಿ ಜೆಪ್ಪಿನಮೊಗರು, ಮಂಗಳೂರು, ತ್ರಿಶಾನ್ ಆಚಾರ್ಯ ಕೆರೆಮನೆ, ಕಾಸರಗೋಡು, ಮನ್ವಿ ಆಚಾರ್ಯ ಬಿಜೈ, ಕಾಪಿಕಾಡ್ ಮಂಗಳೂರು, ಶರಣ್ ಶೆಟ್ಟಿ ಜಪ್ಪಿನಮೊಗರು ಮಂಗಳೂರು, ಮನ್ವಿತ್ ಆಚಾರ್ಯ ಬಿಜೈ, ಕಾಪಿಕಾಡ್, ರುತ್ವ ಮೊರ್ಗನ್ಸ್ ಗೇಟ್ ಮಂಗಳೂರು, ಚೇತನ್ ಕುಮಾರ್ ಬೆಳ್ಳೂರು, ಆದಿತ್ಯ ಆಳ್ವ ಪೂಕಟ್ಟೆ ಕುಂಬಳೆ, ಪ್ರಣವಿ ಬಿ ಉಚ್ಚಿಲ್, ಆಧ್ಯ ಆರ್ ಬೀರಂತಬೈಲ್ ಕಾಸರಗೋಡು, ದಕ್ಷ ನಾಯಕ್ ಕಟೀಲು, ಕಾರ್ತಿಕ್ ಕುಮಾರ್ ನೆಲ್ಲಿಕುಂಜೆ, ಕಾಸರಗೋಡು, ರಿತಿಶಾ ಕೆ.ಜೆ ಅಸೈಗೋಳಿ, ಪ್ರತೀಕ್ಷಾ ಕೆ ಜೆ ಅಸೈಗೋಳಿ, ಮೋನಿಷಾ ಕಾಳ್ಯ0ಗಾಡ್ ಕಾಸರಗೋಡು, ಲಹರಿ ವಿ ಜೆ ಜಯನಗರ ಸುಳ್ಯ, ಶ್ರೀತಿಕ್ ಎಡನಾಡು ಕುಂಬಳೆ, ಯಶಶ್ ರೈ ಕಂಚಿಕಟ್ಟೆ ಕುಂಬಳೆ, ಮೋನಿಷ್ ಆರ್ ಕುಲಾಲ್ ಆದ್ಯಪಾಡಿ ಮಂಗಳೂರು, ಶ್ರೀಶ ಪ್ರಭು ಮೂಡಬಿದ್ರೆ, ಬಾಲಕೃಷ್ಣ ಡಿ ದೇಲಂಪಾಡಿ, ಕವನ ಜೈನ್ ಮೂಡು ಮೂರ್ನಾಡು, ಶೋಭಿತ್ ಮೈತಾಳ್ ಮನೆ ಮೀಯಪದವು, ಜಿಶಾನ್ ತುಂಬೆ, ಆಯುಷ್ ಜೆ.ಎಸ್ ಅಶೋಕನಗರ, ಮಂಗಳೂರು, ಆದರ್ಶ್ ಚಳಿಯಂಗೋಡ್ ಕಲ್ನಾಡ್ ಕಾಸರಗೋಡು, ವಿಹಾನ್ ಶೆಟ್ಟಿ ಬಿಕರ್ಣಕಟ್ಟೆ, ಮಂಗಳೂರು, ಮನ್ವಿತ್ ಕೆ.ಎಸ್ ರಾಮದಾಸ ನಗರ ಕೂಡ್ಲು ಕಾಸರಗೋಡು, ಆರ್ನವ್ ಪ್ರಭು ಮಣ್ಣಗುಡ್ಡೆ ಮಂಗಳೂರು, ಶನ್ವಿ ಮಂಗಳೂರು, ದಿಯಾ ಕಮಲ್ ಅರಿಯಪ್ಪಾಡಿ ಪೆರಡಾಲ, ಐಶ್ವರ್ಯ ಪೂಜಾರಿ ಪಡೀಲ್ ಮಂಗಳೂರು, ಶಾನ್ವಿ ಮರಾತಿಮೂಲೆ ಮೀಯಪದವು, ಚಿನ್ವಿಶ್ ಕೊಟ್ಟಾರಿ ಹೊಯಿಗೆಬೈಲ್ ಮಂಗಳೂರು, ತನ್ವಿತ್ ಬೇಕಲ್, ಪ್ರಯಾನ್ ಫರಂಗಿಪೇಟೆ ಮಂಗಳೂರು, ನಿಷ್ಕ ಡಿ.ಶೆಟ್ಟಿ ದೇಲಂತಬೆಟ್ಟು ಶಿಬರೂರು, ವೈಭವ್ ಕಾನಬೈಲ್ ಕೊಡಗು, ಮಯೂಕ್ ಎಸ್ ಜಿ.ಎಚ್.ಎಸ್.ಎಸ್ ಶಾಲೆ ಬಳಿ ಉಪ್ಪಳ, ಮೇಧ್ಯಾ ಸ್ಟೇಟ್ ಬ್ಯಾಂಕ್ ಮಂಗಳೂರು, ವಂಶಿ ಕೊಟ್ಟಾರಿ ಕುತ್ತಾರ್ ಮಂಗಳೂರು, ಪ್ರೀತಂ ಮುಗು ಕುಂಬಳೆ, ಸ್ನಿತಿಕ್ ಪಡೀಲ್ ಮಂಗಳೂರು, ರುದ್ವಿಕ್ ಮಂಜೇಶ್ವರ, ರುದ್ವಿನ್ ಮಂಜೇಶ್ವರ, ಅನ್ವಿತ್ ನೆಲ್ಲಿಕುನ್ನು ಕಾಸರಗೋಡು, ಸೌರಭ್ ಅಶೋಕನಗರ ಮಂಗಳೂರು. ಇವರಿಗೆ ಪೆÇ್ರೀತ್ಸಾಹಕ ವಿಶೇಷ ಬಹುಮಾನವಿದೆ. ಮಂಗಳೂರಿನ ಪ್ರಖ್ಯಾತ ನಾಟಕ ತಂಡವಾದ ಲಕುಮಿ ನಾಟಕ ತಂಡದ ಕಲಾವಿದ, ನಾಟಕ ರಚನೆಗಾರರಾಗಿರುವ ಚಿತ್ರ ಕಲಾವಿದ, ಶ್ರೀ ತುಳಸಿದಾಸ್ ಮಂಜೇಶ್ವರ ಇಂದಿನ ಮೋದಿ ಲುಕ್ ಡ್ರೆಸ್ ಕೋಡ್ ಸ್ಪರ್ಧೆಗೆ ತೀರ್ಪುಗಾರರಾಗಿ ಭಾಗವಹಿಸಿ, ಸ್ಪರ್ಧಾಳುಗಳ ಸ್ಪರ್ಧಾತ್ಮಕ ಹಾವ ಭಾವ, ಉಡುಗೆ ತೊಡುಗೆಗಳಿಗೆ ಪ್ರಾಸಸ್ತ್ಯ ಹಾಗೂ ಒತ್ತುಕೊಟ್ಟು ಸ್ಪರ್ಧೆಗೆ ಪ್ರಥಮ, ದ್ವಿತೀಯ ಬಹುಮಾನ ವಿಜೇತ ಸ್ಪರ್ಧಾಳುವನ್ನ ಆಯ್ಕೆಗೊಳಿಸಿರುತ್ತಾರೆ. ವಿಜೇತ ಮಕ್ಕಳಿಗೆ ಬಹುಮಾನವನ್ನ ಕೇರಳ ಸರಕಾರದ ಆದೇಶ ಬಂದ ಬಳಿಕ ಸಮಾರಂಭ ಏರ್ಪಡಿಸಿ ಬಳಿಕ ವಿತರಿಸಲು ಮಂಜೇಶ್ವರದ ಸ್ಕಂದ ಕರೊನಾ ಹೆಲ್ಪ್ ಡೆಸ್ಕ್ ನಿರ್ಧರಿಸಿದೆ.
ಕರೊನಾ ವೇಳೆ ಕಳೆದ 3 ತಿಂಗಳುಗಳಿಂದ ಸ್ಕಂದ ಹೆಲ್ಪ್ ಡೆಸ್ಕ್ ಮಂಜೇಶ್ವರವು ಸಾಮಾಜಿಕ ಕಾರ್ಯ ಚಟುವಟಿಕೆ ಅಲ್ಲದೇ, ಸಾಹಿತ್ಯ, ಸ್ಪರ್ಧಾತ್ಮಕ ವಿಷಯಗಳಿಗೆ ಒತ್ತು ಕೊಟ್ಟುಕೊಂಡು, ಕೋವಿಡ್ ರಜೆಯ ಹಿನ್ನೆಲೆಯಲ್ಲಿ ಮನೆಯಲ್ಲಿ ವಿಡಿಯೋ ಗೇಮ್, ಯೂಟ್ಯೂಬ್, ಲೂಡ ಗೇಮ್, ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ, ಕಾಲ ಕಳೆಯುವ ಮಕ್ಕಳಿಗೆ ಹಾಗೂ ಯುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ನೀಡುವ ನಿಟ್ಟಿನಲ್ಲಿ ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಚಿತ್ರ ರಚನಾ ಸ್ಪರ್ಧೆ, ಲಾಕ್ ಡೌನ್ ವರವೋ...? ಶಾಪವೋ..? ಎಂಬ ವಿಷಯದಲ್ಲಿ ಲೇಖನ ಸ್ಪರ್ಧೆ ನಡೆಸಲಾಗಿತ್ತು. ಅಲ್ಲದೆ ಇದೀಗ ದಿನಂಪ್ರತಿ 6 ವಿಭಾಗದಲ್ಲಿ ಸ್ಕಂದ ಚಿತ್ರ ಸ್ಪರ್ಧೆ ನಡೆಯುತ್ತಿದೆ. ಈ ಲಾಕ್ ಡೌನ್ ನ ಸಮಯವನ್ನ ಸ್ಪರ್ಧಾತ್ಮಕ ವಿಷಯಕ್ಕೆ ಒತ್ತು ನೀಡಿ ಮಕ್ಕಳನ್ನ ಮುಂದಿನ ಕಲಿಕೆಗೆ ಪೂರಕವಾಗುವ ಸ್ಪರ್ಧೆಗೆ ಭಾಗವಹಿಸಲು ಪ್ರೇರಣೆ ನೀಡಿದಲ್ಲದೆ ಮಕ್ಕಳ ಮನೋವಿಕಾಸವನ್ನ ಹೆಚ್ಚಿಸಿ ಮನ ಮುದಗೊಳಿಸುವ ಮೂಲಕ ಸಂದ ಹಿರಿಮೆ ಈ ಸ್ಕಂದ ಹೆಲ್ಪ್ ಡೆಸ್ಕ್ ಗಿದೆ.
ಕರೊನಾ ಲಾಕ್ ಡೌನ್ ಸಮಯದಲ್ಲಿ ಮಂಜೇಶ್ವರವನ್ನ ಕೇಂದ್ರಿಕರಿಸಿಕೊಂಡು ಪತ್ರಕರ್ತ, ಸಾಮಾಜಿಕ, ಧಾರ್ಮಿಕ ಸಾಂಸ್ಕøತಿಕ ಕಾರ್ಯದಲ್ಲಿ ಸಕ್ರೀಯರಾಗಿರುವ ರತನ್ ಕುಮಾರ್ ಹೊಸಂಗಡಿ ಇವರು ತನ್ನ ಸಹಪಾಠಿಗಳಾದ ಸುಕೇಶ್ ಬೆಜ್ಜ, ಅಶ್ವಿತ್ ಕುಮಾರ್ ಉಪ್ಪಳ, ಜಯ ಮಣಿಯಂಪಾರೆ, ಕಿಶೋರ್ ಭಗವತಿ, ಬಾಲಕೃಷ್ಣ ಮಜಿಬೈಲ್ ಕಟ್ಟೆಯವರ ನೇತೃತ್ವದಲ್ಲಿ ಸ್ಕಂದ ಕರೊನಾ ಹೆಲ್ಪ್ ಡೆಸ್ಕ್ ಎಂಬ ಹೆಲ್ಪ್ ಡೆಸ್ಕ್ ಪ್ರಾರಂಭಿಸಿದರು. ಬಳಿಕ ಮಂಜೇಶ್ವರ, ಮಿಂಜ, ವರ್ಕಾಡಿ ಪಂಚಾಯತ್ ನ ಆಯ್ದ ಸಾಮಾಜಿಕ ಸನ್ಮನಸ್ಕರ ನೆರವಿನ ಸಹಕಾರದೊಂದಿಗೆ ಈ ಮೂರು ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 250 ಆಹಾರ ಸಾಮಾಗ್ರಿಗಳ ಕಿಟ್ ನ್ನು ಕಡು ಬಡ ಕುಟುಂಬಗಳಿಗೆ ನೀಡಲಾಯಿತು. ಅಲ್ಲದೆ ಮಂಗಳೂರು ಆಸುಪಾಸಿನ ಕುಟುಂಬಗಳಿಗೆ ಕೂಡ ವಿವಿಧ ಸಂಘ ಸಂಸ್ಥೆಗಳ ಮೂಲಕ ನೀಡಲಾಯಿತು. ಮತ್ತು ಮಂಗಳೂರಿನ ತಮ್ಮದೇ ಸಂಸ್ಥೆಯಾಗಿರುವ ವಜ್ರಿ ಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ವತಿಯಿಂದ ಅನ್ನ ಆಹಾರ, ಬಿಸ್ಕೆಟ್ ವಿತರಣೆ, ಕಷಾಯ ವಿತರಣೆ, ಸ್ಯಾನಿಟರಿ ಪ್ಯಾಡ್ ವಿತರಿಸಿದರು. ಅದೇ ರೀತಿ ಮಂಜೇಶ್ವರದಲ್ಲೂ ಕೂಡ ಸ್ಕಂದ ಕರೊನಾ ಹೆಲ್ಪ್ ಡೆಸ್ಕ್ ವತಿಯಿಂದ 38 ಆಯುರ್ವೇದ ಗಿಡ ಮೂಲಿಕೆಯಿಂದ ತಯಾರಿಸಿದ ಕಷಾಯವನ್ನ ತಲಪಾಡಿಯಿಂದ ತೊಡಗಿ ರಾಷ್ಟ್ರೀಯ ಹೆದ್ದಾರಿ ಕುಂಬಳೆ, ಸೀತ0ಗೊಳಿ, ಪುತ್ತಿಗೆ, ಪೆರ್ಮುದೆ, ಪೈವಳಿಕೆ, ಉಪ್ಪಳ, ಮೀಯಪದವು, ಆನೆಕಲ್ಲು, ನಂದರಪದವು, ಪಾತೂರು, ಕೇದುಂಬಾಡಿಯಲ್ಲಿ ಕರ್ತವ್ಯ ನಿರ್ವಹಿಸುವ ಪೆÇಲೀಸ್ ಇಲಾಖೆ, ಆರೋಗ್ಯ ಕಾರ್ಯಕರ್ತರಿಗೆ, ಡಾಕ್ಟರ್ ಗಳಿಗೆ, ನೀಡಿದರು. ಅಲ್ಲದೇ ಕುಂಜತ್ತೂರುವಿನ ಐಗ್ಲೋದಿಯಲ್ಲಿ ವಾಸಿಸುವ ಆಂಧ್ರಭಾಷೆಯ ಮೀನು ಕಾರ್ಮಿಕರ ಮಕ್ಕಳಿಗೆ ಲಾಕ್ ಡೌನ್ ಸಮಯದಲ್ಲಿ ಬಿಸ್ಕೆಟ್ ವಿತರಣೆ, ಬಿಜೆಪಿ ಕರ್ನಾಟಕ ಮಧ್ಯಮ ಕೈಗಾರಿಕಾ ಸಂಸ್ಥೆಯ ಸಂಚಾಲಕರಾದ ಶ್ರೀ ಭದ್ರಿನಾಥ್ ಕಾಮತ್ ರ ಸಹಯೋಗದಲ್ಲಿ ಮಹಿಳೆಯರ ತಿಂಗಳ ಋತು ಮಾಸದ ಸಮಸ್ಯೆಗೆ ಸ್ಪಂದಿಸಿ ಸ್ಯಾನಿಟರಿ ಪ್ಯಾಡ್ ವಿತರಣೆಯನ್ನ ಕಾಸರಗೋಡು ಜಿಲ್ಲೆಯ ವಿವಿಧ ಆಶ್ರಮಗಳಿಗೆ, ಆಯ್ದ ಗ್ರಾಮೀಣ ಪ್ರದೇಶದ ಜನತೆಗೆ ವಿತರಿಸಲಾಗಿದೆ.
(ಚಿತ್ರ ಮಾಹಿತಿ: ಮೋದಿ ಲುಕ್ ಡ್ರೆಸ್ ಕೋಡ್ ಸ್ಪರ್ಧೆಯಲ್ಲಿ ಜ್ಯುನಿಯರ್ ವಿಭಾಗದಲ್ಲಿ ಪ್ರಥಮ ಬಹುಮಾನವನ್ನ ಮಾ. ಹವ್ಯಾಸ್ ಆರ್.ಕೆ, ಪಟ್ಲಮನೆ ಕಯ್ಯಾರ್, 2) ಸೀನಿಯರ್ ವಿಭಾಗದಲ್ಲಿ ಪ್ರಥಮ ಬಹುಮಾನ ಮಾ.ಹವೀಶ್ ಪೂಜಾರಿ ಅಳಪೆ, ಪಡೀಲ್, ಮಂಗಳೂರು,3)ಸೀನಿಯರ್ ವಿಭಾಗದಲ್ಲಿ ದ್ವಿತೀಯ ಬಹುಮಾನ ಮಾ.ಶ್ರೀಶಾನ್ ಪೆಲತ್ತಡಿ, ಮುಳ್ಳೇರಿಯಾ ,4)ಜ್ಯುನಿಯರ್ ವಿಭಾಗದಲ್ಲಿ ದ್ವಿತೀಯ ಬಹುಮಾನವನ್ನ ಮಾ. ಶಯನ್ ರಾಜ್, ರಾಮದಾಸ್ ನಗರ, ಕೂಡ್ಲು.)





