ಮಲಪ್ಪುರಂ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಿನ್ನೆ(ಶುಕ್ರವಾರ) ಮಲಪ್ಪುರಂ ಜಿಲ್ಲೆಯ ಕುನ್ನುಮ್ಮಲ್ ಶ್ರೀ ತ್ರಿಪುರಾಂತಕ ದೇವಾಲಯ ಪರಿಸರದಲ್ಲಿ ವಿಶಿಷ್ಟ ಕಾರ್ಯಕ್ರಮವೊಂದು ಗಮನ ಸೆಳೆಯಿತು.
ಶ್ರೀಕ್ಷೇತ್ರದ ಪ್ರಧಾನ ಅರ್ಚಕ ಮಣಿಕಂಠನ್ ಎಂಬ್ರಾಂದ್ರಿ ಹಾಗೂ ಮುಸ್ಲಿಂಲೀಗ್ ನೇತಾರ ಪಾಣಕ್ಕಾಡ್ ಸಯ್ಯದ್ ಮುನವ್ವರ್ ಅಲಿ ಶಿಹಾಬ್ ತಂಙಳ್ ಜೊತೆಯಾಗಿ "ಮೈತ್ರಿ" ಹಸಿರು ಲಾಂಛನದಡಿ ಗಿಡ ನೆಡುವ ಮೂಲಕ ಸಾಮರಸ್ಯ ಮತ್ತು ಸಹಬಾಳ್ವೆಯ ಸಂದೇಶವನ್ನು ನೀಡಿ ಸಮಾಜಕ್ಕೆ ಮಾರ್ಗದರ್ಶಿಯಾದರು.
ಕೊರೊನಾ ಮಹಾಮಾರಿಯ ವ್ಯಾಪಕ ಸಂಕಷ್ಟದ ಮಧ್ಯೆ ಮನುಜ ತನ್ನೊಳಗಿನ ಅದುಮಿಟ್ಟ ಭಾವಗಳನ್ನು ಸಂದೇಶ ರೂಪದಲ್ಲಿ ತೋರ್ಪಡಿಸುವ ಮೂಲಕ ಮಾದರಿಯಾಗಿದ್ದು, ಜಿಡ್ಡುಗಟ್ಟಿರುವ ಸಮಾಜದ ಸುಸ್ಥಿರ ಹಸಿರುತನಕ್ಕೆ ಇದೊಂದು ಬೆಳಕಾಗಲಿ ಎಂದಷ್ಟೇ ಸಮರಸದ ಭರವಸೆ; ಹಾರೈಕೆಯ ಪ್ರಾರ್ಥನೆ.





