ಮುಳ್ಳೇರಿಯ: ಮುಳ್ಳೇರಿಯದ ಕಯ್ಯಾರ ಕಿಞ್ಞಂಣ್ಣ ರೈ ಗ್ರಂಥಾಲಯ-ವಾಚನಾಲಯಕ್ಕೆ ಕೇರಳ ಸ್ಟೇಟ್ ಟೀಚರ್ಸ್ ಅಸೋಸಿಯೇಶನ್(ಕೆಎಸ್‍ಟಿಎ) ಮುಳ್ಳೇರಿಯ ಘಟಕ ಉಚಿತವಾಗಿ ಕೊಡಮಾಡಿದ ಟಿ.ವಿ. ಘಟಕವನ್ನು ಬುಧವಾರ ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ ಸ್ವಿಚ್ ಆನ್ ಮಾಡಿ ಉದ್ಘಾಟಿಸಿದರು.
ಎನ್.ವಿ.ಕುಞÂ್ಞಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಅಸೋಸಿಯೇಶನ್ ಪದಾಧಿಕಾರಿಗಳಾದ ಅನೀಶ್ ಕುಮಾರ್ ಪಯ, ಎಂ.ಪದ್ಮನಾಭನ್ ಉಪಸ್ಥಿತರಿದ್ದು ಶುಭಹಾರೈಸಿದರು. ಎಂ.ರಾಜೇಶ್ ಸ್ವಾಗತಿಸಿ, ಗ್ರಂಥಾಲಯದ ನಿರ್ವಾಹಕ ಮೋಹನ ಮಾಸ್ತರ್ ವಂದಿಸಿದರು.


