ಬದಿಯಡ್ಕ: ಗುರುವಾರ ಬೆಳಗ್ಗೆ ನಿಧನರಾದ ಜನಾನುರಾಗಿ ವೈದ್ಯ ಉಬ್ಬಾನ ಗೋಪಾಲಕೃಷ್ಣ ಭಟ್ಟರಿಗೆ ನೀರ್ಚಾಲಿನಲ್ಲಿ ನುಡಿನಮನ ಸಲ್ಲಿಸಲಾಯಿತು.
ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಪ್ರೌಢ ಶಾಲೆಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಬದಿಯಡ್ಕ ಗ್ರಾಪಂ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಉಬ್ಬಾನ ಡಾಕ್ಟರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ, ಕೃಷ್ಣ ಮಣಿಯಾಣಿ ಮೊಳೆಯಾರು, ಗ್ರಾಪಂ ಸದಸ್ಯರುಗಳಾದ ಡಿ.ಶಂಕರ ಹಾಗೂ ಮುಹಮ್ಮದ್ ಸಿರಾಜ್, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಬಾಲಸುಬ್ರಹ್ಮಣ್ಯ ಭಟ್, ಎಸ್.ಕೆ.ಗೋಪಾಲಕೃಷ್ಣ ಭಟ್, ಖಾದರ್ ಮಾನ್ಯ, ಶಿವರಾಮ ಮಲ್ಲಡ್ಕ ಹಾಗೂ ಅವರ ಅಭಿಮಾನಿಗಳು ಪುಷ್ಪಾರ್ಚನೆಗೈದು ನುಡಿನಮನ ಸಲ್ಲಿಸಿದರು.





