ಕಾಸರಗೋಡು: ಜಿಲ್ಲೆಯ ಸಮಸ್ತ ಕನ್ನಡ ಸಮಸ್ಯೆಗಳನ್ನು ಆಳವಾಗಿ ಅಧ್ಯಯನ ಮಾಡಿ, ಭಾಷಾ ಅಲ್ಪಸಂಖ್ಯಾತರ ಹಕ್ಕು, ಸೌಲಭ್ಯಗಳನ್ನು ಲಭ್ಯವಾಗಿಸುವಲ್ಲಿ ಸತತ ದುಡಿಯುತ್ತಿರುವ, ಕೇರಳ ಲೋಕಸೇವಾ ಆಯೋಗದ ಅಂಡರ್ ಸೆಕ್ರೆಟರಿಯಾಗಿ ಸರಕಾರಿ ಸೇವೆಯಿಂದ ಗಣೇಶ್ ಪ್ರಸಾದ್ ನಿವೃತ್ತಿಯಾಗಿದ್ದಾರೆ.
1996ರಲ್ಲಿ ತಿರುವನಂತಪುರ ಸೆಕ್ರೆಟರಿಯೇಟ್‍ನಲ್ಲಿ ಸರಕಾರಿ ಹುದ್ದೆಗೆ ಸೇರಿದ ಅವರು ಬಳಿಕ ಕಾಸರಗೋಡು, ವಯನಾಡು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿ ಇದೀಗ ಕಾಸರಗೋಡಿನಲ್ಲಿ ಪಿಎಸ್‍ಸಿ ಅಂಡರ್ ಸೆಕ್ರೆಟರಿ ಹುದ್ದೆಯಿಂದ ನಿವೃತ್ತಿಯಾಗಿದ್ದಾರೆ.
ಗಣೇಶ್ ಪ್ರಸಾದ್ ಅವರು ಧಾರವಾಡ ವಿವಿಯಿಂದ ಪದವಿ ಮತ್ತು ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಗ್ರಂಥ ವಿಜ್ಞಾನದಲ್ಲಿ ಮದರಸು ವಿವಿಯಿಂದ ಹಾಗೂ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯದಿಂದ ಪದವಿಯನ್ನು ಪಡೆದುಕೊಂಡಿದ್ದಾರೆ.
1991ರ ಅವಿಭಜಿತ ಕಾಸರಗೋಡು ತಾಲೂಕಿನಲ್ಲಿ ತಾಲೂಕು ಗ್ರಂಥಪಾಲಕ ಸಂಘವನ್ನು ಸ್ಥಾಪಿಸಿ ಆ ಸಂಘದ ಮೂಲಕ ಅಂದಿನ ಕರ್ನಾಟಕ ಸಮಿತಿ ಅಧ್ಯಕ್ಷ ಯುಪಿ ಕುಣಿಕುಳ್ಳಾಯರ ಸಹಾಯದಿಂದ ಕಾಸರಗೋಡಿನಲ್ಲಿ ಗ್ರಂಥಾಲಯ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದರು. ಆನೇಕ ಗ್ರಂಥಾಲಯಗಳಿಗೆ ಕನ್ನಡ ಬಲ್ಲ ಗ್ರಂಥ ಪಾಲಕರ ನೇಮಕಾತಿ ಆದೇಶ, ಲೈಬ್ರರಿ ಸರ್ಟಿಫಿಕೆಟ್ ಕೋರ್ಸ್‍ಗೆ ಕನ್ನಡಿಗರಿಗೆ ಸೀಟು ಮೀಸಲಾತಿ, ಸಂಸ್ಕøತ ಅಧ್ಯಾಪಕ ಪರೀಕ್ಷಾ ತರಬೇತಿ, ಮೊಗ್ರಾಲ್‍ಪುತ್ತೂರು ಟೆಕ್ನಿಕಲ್ ಶಾಲೆಗೆ ಅಧ್ಯಾಪಕರ ಹುದ್ದೆ ಮಂಜೂರಾತಿ, ಹೈಸ್ಕೂಲ್‍ನ ಕೋರ್ ಸಬ್ಸೆಟ್‍ಗಳಿಗೆ ಕನ್ನಡಪರ ಆದೇಶ, ಅಂಗನವಾಡಿ ಕೈಪಿಡಿ ಕನ್ನಡದಲ್ಲಿ ಪ್ರಕಟಿಸಲು, ಮಂಜೇಶ್ವರ ತಾಲೂಕಿಗೆ ಕನ್ನಡ ಭಾಷಾ ಅಲ್ಪಸಂಖ್ಯಾತ ಪದವಿ ಘೋಷಣೆ, ಅಲ್ಲದೇ ಆನೇಕ ಉದ್ಯೋಗಾರ್ಥಿಗಳಿಗೆ ಉದ್ಯೋಗ ಸಂಬಂಧ ಮಾಹಿತಿಗಳನ್ನು ಸಕಾಲದಲ್ಲಿ ನೀಡುವ ಮೂಲಕ ಸಮಾಜ ಸೇವೆಯಲ್ಲೂ ಗುರುತಿಸಿಕೊಂಡಿದ್ದರು.
ಹಿರಿಯ ಕನ್ನಡ ಹೋರಾಟಗಾರ ಯುಪಿ ಕುಣಿಕುಳ್ಳಾಯರ ಮಾರ್ಗದರ್ಶನದಲ್ಲಿ ಕರ್ನಾಟಕ ಸಮಿತಿಯಿಂದ ತೊಡಗಿಸಿಕೊಂಡ ಗಣೇಶ್ ಪ್ರಸಾದ್ ಅವರು, ಪ್ರಸ್ತುತ ಕಾಸರಗೋಡಿನ ಕನ್ನಡ ಚಳುವಳಿ, ಕನ್ನಡಿಗರ ಸಮಸ್ಯೆ, ಕನ್ನಡಪರ ಆದೇಶ ಮುಂತಾದ ವಿಷಯಗಳಲ್ಲಿ ಅಕೃತವಾಗಿ ದಾಖಲೆಯೊಂದಿಗೆ ಮಾತನಾಡಬಲ್ಲ ಬೆರಳಣಿಕೆಯ ವ್ಯಕ್ತಿಗಳಲ್ಲಿ ಇವರು ಮೊದಲಿಗರು. ಜಿಲ್ಲೆಯ ಕನ್ನಡ ಋಣವನ್ನು ಮರೆಯದೇ ಸದಾ ಕನ್ನಜ ಪರವಾಗಿ ಹಗಲಿರುಳು ಕನ್ನಡ ವಿದ್ಯಾರ್ಥಿಗಳಿಗೆ, ಉದ್ಯೋಗಾರ್ಥಿಗಳ ಬಗ್ಗೆ ಚಿಂತಿಸುವ ಆನೇಕ ಕನ್ನಡಪರ ಕಡತಗಳ ಬೆನ್ನು ಹತ್ತಿ ನಿಸ್ವಾರ್ಥದಿಂದ ಓಡಾಡಿ ಕೆಲಸ ಮಾಡಿ ಕನ್ನಡ ಪರ ಆನೇಕ ಆದೇಶ ಜ್ಯಾರಿಗೆ ಕಾರಣಕರ್ತರಾಗಿದ್ದಾರೆ.
ಇದೀಗ ನಿವೃತ್ತ ಜೀವನವನ್ನು ಕಾಸರಗೋಡು ನಗರದ ಬ್ಯಾಂಕ್ ರಸ್ತೆಯ ಪರಿಸರದಲ್ಲಿ ಖಾಸಗಿ ಕಛೇರಿ ತೆರೆದು ಇಲ್ಲಿ ಕನ್ನಡಿಗಾಗಿ ಶಿಕ್ಷಣ, ಉದ್ಯೋಗ ಮಾಹಿತಿ, ಮಾರ್ಗದರ್ಶನ ನೀಡಲು ತೀರ್ಮಾನಿಸಿದ್ದಾರೆ.
ಪ್ರಸ್ತುತ ಕನ್ನಡಿಗರಿಗಾಗಿ ಕೇರಳ ಲೋಕಸೇವಾ ಆಯೋಗದ ಕನ್ನಡದಲ್ಲಿ ಮಾಹಿತಿ ಕೋಶ (ಪ್ರಶ್ನೋತ್ತರಗಳ ಸಂಗ್ರಹ ) ಪುಸ್ತಕ ರಚನೆಯ ಅಂತಿಮ ಹಂತದಲ್ಲಿದ್ದಾರೆ.
ಗಣೇಶ್ ಪ್ರಸಾದ್ ಅವರು ಮೂಲತ: ಮುಳಿಯಾರಿನ ಪಾಣೂರು ಪುರುಷೋತ್ತಮ ಭಟ್ ಹಾಗೂ ಸರಸ್ವತಿ ದಂಪತಿಗಳ ಪುತ್ರನಾಗಿದ್ದಾರೆ. ಪ್ರಸ್ತುತ ಕಾಸರಗೋಡು ವಿದ್ಯಾನಗರದ ಹಿದಾಯತ್‍ನಗರದ ಗಣೇಶ ನಿಲಯದಲ್ಲಿ ವಾಸವಾಗಿದ್ದಾರೆ. ಪತ್ನಿ ಪ್ರೇಮಲತಾ, ಪುತ್ರ ಪುನೀತಕೃಷ್ಣ , ಪುತ್ರಿ ವಿದ್ಯಾಸರಸ್ವತಿ ಹಾಗೂ ವಿನಯ ಪರಮೇಶ್ವರೀ ಇವರೊಂದಿಗೆ ಸುಖ ಸಂಸಾರ ನಡೆಸುತ್ತಿದ್ದಾರೆ.






