ಕಾಸರಗೋಡು: ಕೋವಿಡ್ 19 ಪ್ರತಿರೋಧ ಚಟುವಟಿಕೆಗಳ ಅವಲೋಕನ ನಡೆಸುವ ನಿಟ್ಟಿನಲ್ಲಿ ಪ್ರತಿ ವಾರ ಸಂಸದ, ಶಾಸಕರ, ನಗರಸಭೆ ಅಧ್ಯಕ್ಷರ ಸಹಿತ ಜನಪ್ರತಿನಿಧಿಗಳ, ಜಿಲ್ಲಾಧಿಕಾರಿ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳ ಸಭೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಪ್ರತಿ ಬುಧವಾರ ಬೆಳಗ್ಗೆ 10 ಗಂಟೆಗೆ ಈ ಸಭೆ ನಡೆಯಲಿದೆ. ಎರಡು ವಾರಕ್ಕೊಮ್ಮೆ ಈ ಸಭೆಯಲ್ಲಿ ತಾವೂ ಭಾಗವಹಿಸುವುದಾಗಿ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ತಿಳಿಸಿದರು.
ಕೋವಿಡ್ ಪ್ರತಿರೋಧ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜನಪ್ರತಿನಿಧಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಚಿವ ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು.
ಸಂಪರ್ಕ ಮೂಲಕ ಸೋಂಕು ಹರಡದಂತೆ ಪ್ರಬಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಪಂಚಾಯತ್-ನಗರಸಭೆ ಮಟ್ಟದ ಜಾಗ್ರತಾ ಸಮಿತಿಗಳು, ವಾರ್ಡ್ ಮಟ್ಟದ ಜಾಗ್ರತಾ ಸಮಿತಿಗಳು ಸೂಕ್ತ ರೀತಿ ಸಭೆ ಸೇರುವಂತೆ ಸಚಿವ ಆದೇಶ ನೀಡಿದರು. ವಿವಿಧ ವಿಚಾರಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಶಾಸಕರಾದ ಕೆ.ಕುಂಞÂ್ಞ ರಾಮನ್, ಎಂ.ರಾಜಗೋಪಾಲನ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ನಗರಸಭೆಗಳ ಅಧ್ಯಕ್ಷ ರಾದ ವಿ.ವಿ.ರಮೇಶನ್, ಪೆÇ್ರ.ಕೆ.ಪಿ.ಜಯರಾಜನ್, ಕಾಸರಗೋಡು ನಗರಸಭೆ ಅಭಿವೃಧ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ. ಎಂ.ನೈಮೂನ್ನೀಸಾ, ಜಿಲ್ಲಾ ಪೆÇಲೀಸ್ವರಿಷ್ಠಾಧಿಕಾರಿ ಡಿ.ಶಿಲ್ಪಾ, ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ವಲಯ ಕಂದಾಯಾಧಿಕಾರಿ ಅಹಮ್ಮದ್ ಕಬೀರ್, ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ. ಮೊದಲಾವರು ಉಪಸ್ಥಿತರಿದ್ದರು.





