ಕಾಸರಗೋಡು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ಮರವಾಗಿ ಬೆಳೆಯಬಲ್ಲ ಸಸಿಗಳ ವಿತರಣೆ ನಡೆಯಿತು.
ಕಾಸರಗೋಡು ನ್ಯಾಯಾಲಯ ಸಮುಚ್ಚಯ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಸಹಾಯಕ ಜಿಲ್ಲಾ ನ್ಯಾಯಮೂರ್ತಿ ಶಶಿಕುಮಾರ್ ಪಿ.ಎಸ್. ಅವರು ಕಾಸರಗೋಡು ಬಾರ್ ಅಸೋಸಿಯೇಶನ್ ಅಧ್ಯಕ್ಷ ಎ.ಸಿ.ಅಶೋಕ್ ಕುಮಾರ್ ಅವರಿಗೆ ಸಸಿ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಿ.ಎಲ್.ಎಸ್.ಎ. ಕಚೇರಿ ಆವರಣದಲ್ಲಿ ಔಷಧೀಯ ಸಸಿಗಳ ನೆಡುವಿಕೆ ಮತ್ತು ತರಕಾರಿ ತೋಟ ನಿರ್ಮಿಸಲಾಯಿತು. ಕುಟುಂಬ ನ್ಯಾಯಾಲಯ ನ್ಯಾಯಮೂರ್ತಿ ಡಾ.ವಿಜಯಕುಮಾರ್, ಸಹಾಯಕ ನ್ಯಾಯಮೂರ್ತಿ ರಾಜನ್ ತಟ್ಟಿಲ್, ಪ್ರಧಾನ ನ್ಯಾಯಮೂರ್ತಿ ಮಿಜೀಬ್ ರಹಮಾನ್, ಸುಹೈಬ್ ಎಂ., ಶ್ರೀಜಾ ಜನಾರ್ದನನ್ ನಾಯರ್, ಬಾಲಕೃಷ್ಣನ್ ಬಿ., ಯಾಹ್ಯಾ ಟಿ., ದಿನೇಶ ಕೆ. ಮೊದಲಾದವರು ಉಪಸ್ಥಿತರಿದ್ದರು.





