ಕಾಸರಗೋಡು: ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ಸಾಂಕ್ರಾಮಿಕ ರೋಗ ಶೈಕ್ಷಣಿಕ ವಲಯವನ್ನೇ ತಟಸ್ಥಗೊಳಿಸಿರುವ ಈ ಕಾಲಘಟ್ಟದಲ್ಲಿ ವಿದ್ಯಾನಗರ ಚಿನ್ಮಯ ವಿದ್ಯಾಲಯದ ಅಧ್ಯಾಪಕ ವೃಂದದವರು ಆನ್‍ಲೈನ್ ತರಗತಿಗಳ ಮೂಲಕ ವಿದ್ಯಾರ್ಥಿಗಳ ಮುಂದೆ ಮತ್ತೆ ಪ್ರತ್ಯಕ್ಷಗೊಂಡಿರುವರು.
ಒಂದೆರಡು ವಾರಗಳ ತರಬೇತಿಯನ್ನು ಹೊಂದಿದ ಅಧ್ಯಾಪಕರು ಆಸಕ್ತಿಯುತವೂ ಸರಳವೂ ಆದ ಶೈಲಿಯಲ್ಲಿ ಈ ನೂತನ ಪದ್ಧತಿಯನ್ನು ವಿದ್ಯಾರ್ಥಿಗಳ ಮುಂದಿರಿಸುವಲ್ಲಿ ಸಫಲರಾಗಿದ್ದಾರೆ. ಎಂತಹದೇ ಸಂದಿಗ್ಧ ಸಂದರ್ಭದಲ್ಲಿಯೂ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಕೂಡದೆಂಬುದೇ ವಿದ್ಯಾಲಯದ ಧ್ಯೇಯವಾಗಿದೆ. ನುರಿತ ಅಧ್ಯಾಪಕರ ತರಗತಿಗಳನ್ನು ಸಂಪೂರ್ಣವಾಗಿ ಪ್ರಯೋಜನ ಪಡಿಸಿಕೊಳ್ಳಬೇಕೆಂದು ವಿದ್ಯಾಲಯದ ಅಧ್ಯಕ್ಷ ಸ್ವಾಮಿ ವಿವಿಕ್ಷಾನಂದ ಸರಸ್ವತಿಜಿ ಹಾಗು ಪ್ರಾಂಶುಪಾಲ ಬಿ.ಪುಷ್ಪರಾಜ್ ವಿದ್ಯಾರ್ಥಿಗಳಲ್ಲಿಯೂ, ಹೆತ್ತವರಲ್ಲಿಯೂ ವಿನಂತಿಸಿದ್ದಾರೆ.





