HEALTH TIPS

ಕೊರೊನಾ ಯುಗದ ಶೈಕ್ಷಣಿಕ ವರ್ಷ- ಆನ್‍ಲೈನ್ ತರಗತಿ ಆರಂಭ-ಕನ್ನಡ ಮಾಧ್ಯಮ ಅತಂತ್ರತೆಯಲ್ಲಿ

     
            ಕಾಸರಗೋಡು: ಕೋವಿಡ್-19 ರ ಆತಂಕದ ಹಿನ್ನೆಲೆಯಲ್ಲಿ ಕೇರಳದಲ್ಲಿ ಆನ್‍ಲೈನ್ ಮೂಲಕ ಶೈಕ್ಷಣಿಕ ವರ್ಷ ಆರಂಭಗೊಂಡಿತು.
            ಈ ಬಾರಿಯ ವಿಶೇಷತೆಯೆಂದರೆ ವಿದ್ಯಾರ್ಥಿಗಳು ಮನೆಯಲ್ಲಿ ಕುಳಿತು ಆನ್‍ಲೈನ್ ಮೂಲಕ ತಮ್ಮ ಶಾಲಾ ದಿನಗಳನ್ನು ಆರಂಭಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ಮಲೆಯಾಳ ಮಾಧ್ಯಮ ಶಿಕ್ಷಣ ಆನ್‍ಲೈನ್ ಮೂಲಕ ಆರಂಭಗೊಂದ್ದು, ಕಾಸರಗೋಡಿನಲ್ಲಿ ಕನ್ನಡ ಮಾಧ್ಯಮ ಶಿಕ್ಷಣ ದೊರಕಿಸುವ ವಿಷಯದಲ್ಲಿ ಅಧಿಕಾರಿಗಳು ಪರದಾಡುತ್ತಿದ್ದಾರೆ.
           ಶಿಕ್ಷಣ ಆನ್‍ಲೈನ್‍ನಲ್ಲಿ ದೊರಕಿಸುವ ಉದ್ದೇಶದಿಂದ ಕನ್ನಡ ಅಧ್ಯಾಪಕರು ಕಾಸರಗೋಡು ಅಣಂಗೂರಿನಲ್ಲಿರುವ ಕೈಟ್‍ನ ಜಿಲ್ಲಾ ಕಚೇರಿಗೆ ತಲುಪಿದ್ದರೂ, ಸರಕಾರದಿಂದ ನಿರ್ದೇಶ ಲಭಿಸಿದ ಬಳಿಕವೇ ಶಿಕ್ಷಣ ಆನ್‍ಲೈನ್‍ನಲ್ಲಿ ದೊರಕಿಸುವ ಕಾರ್ಯ ಆರಂಭವಾಗಬೇಕಿದೆಯೆಂದು ಅಧ್ಯಾಪಕರು ತಿಳಿಸಿದ್ದಾರೆ. ಸರಕಾರದಿಂದ ನಿರ್ದೇಶ ಲಭಿಸುವುದು ವಿಳಂಬವಾದರೆ ಅದು ವಿದ್ಯಾರ್ಥಿಗಳಿಗೆ ಸಮಸ್ಯೆ ಸೃಷ್ಟಿಯಾಗಲಿದೆ.
           ಜಿಲ್ಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿ ಕನ್ನಡ ತರಗತಿ ನಡೆಸಿ ಯು ಟ್ಯೂಬ್ ಮೂಲಕ ಲಭ್ಯಗೊಳಿಸಲಾಗುವುದೆಂದು ಕೈಟ್ ವಿಕ್ಟರ್ ಜಿಲ್ಲಾ ಕಚೇರಿ ಮೂಲಗಳು ತಿಳಿಸಿವೆ.
     ಮೊದಲ ಹಂತದಲ್ಲಿ ಎಸ್‍ಎಸ್‍ಎಲ್‍ಸಿಯ ಬಯಾಲಜಿ ಮತ್ತು ಒಂಭತ್ತನೇ ತರಗತಿಯ ಗಣಿತ ತರಗತಿ ರೆಕಾರ್ಡಿಂಗ್ ನಡೆಸಲಾಗುತ್ತಿದೆ. ರಾಜ್ಯ ಶಿಕ್ಷಣ ಸಚಿವರ ಔದ್ಯೋಗಿಕ ಪ್ರಕಟನೆ ಅನುಸರಿಸಿ ಮುಂದಿನ ದಿನಗಳಲ್ಲಿ ಒಂದರಿಂದ 10 ನೇ ತರಗತಿಯ ವರೆಗಿನ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ತರಗತಿ ನಡೆಸಿ ಯೂಟ್ಯೂಬ್‍ನಲ್ಲಿ ಅಳವಡಿಸುವ ಅಥವಾ ವಿಕ್ಟರ್ ಚಾನಲ್‍ನಲ್ಲಿ ಪ್ರಸಾರ ಮಾಡುವ ತೀರ್ಮಾನ ಹೊರ ಬೀಳಲಿರುವುದಾಗಿ ಕೈಟ್ ವಿಕ್ಟರ್ ಜಿಲ್ಲಾ ಸಂಚಾಲಕ ರಾಜೇಶ್ ತಿಳಿಸಿದ್ದಾರೆ. 9 ಹಾಗು 10 ನೇ ತರಗತಿ ವಿದ್ಯಾರ್ಥಿಗಳಿಗಾಗಿ ಆನ್‍ಲೈನ್ ಶಿಕ್ಷಣ ತಯಾರಿಸಲಾಗುತ್ತಿದೆ. ಆದರೆ ಇದರ ತರಗತಿಗಳು ಕನ್ನಡ ಮಾಧ್ಯಮ ಮಕ್ಕಳ ಶಿಕ್ಷಣ ವಿಷಯವನ್ನು ಮುಂದಕ್ಕೆ ನಿರ್ದೇಶಿಸುವುದಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ.
         ಜಿಲ್ಲೆಯಲ್ಲಿ ಸುಮಾರು 30 ಸಾವಿರ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿದ್ದಾರೆ. 15 ಸಾವಿರದಷ್ಟು ದ್ವಿತೀಯ ಭಾಷೆಯಾಗಿ ಕನ್ನಡ ಕಲಿಯುವವರಿದ್ದಾರೆ. ಈ ವಿದ್ಯಾರ್ಥಿಗಳ ಹಿತ ಗಮನದಲ್ಲಿರಿಸಿ ಕನ್ನಡದಲ್ಲೂ ಪ್ರಸಾರ ನಡೆಸುವಂತೆ ಮನವಿ ಮಾಡಿಕೊಳ್ಳಲಾಗುವುದೆಂದು ಜಿಲ್ಲಾ ಶಿಕ್ಷಣಾ„ಕಾರಿ ನಂದಿಕೇಶ್ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries