ಕಾಸರಗೋಡು: ಅಂಟುರೋಗಗಳ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಸಾರ್ವಜನಿಕರು ಜಿಲ್ಲೆಯಲ್ಲಿ ಶುಚೀಕರಣ ನಡೆಸಿದರು. ಈ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಿನಂತಿಸಿದ್ದು, ನಾಡು ಅದನ್ನು ಸ್ವೀಕರಿಸಿ, ಆಚರಣೆಗೆ ತಂದಿದೆ. ಸ್ಥಳೀಯಾಡಳಿತ ಸಂಸ್ಥೆಗಳು, ಸಾಮಾಜಿಕ, ಸ್ವಯಂ ಸೇವಾ ಸಂಘಟನೆಗಳು, ರೆಸಿಡೆನ್ಸ್ ಅಸೋಸಿಯೇಶನ್ ಇತ್ಯಾದಿಗಳು ಶುಚೀಕರಣ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದುವು. ಕೋವಿಡ್ 19 ಸೋಂಕಿನ ಹರಡುವಿಕೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರ, ಆರೋಗ್ಯ ಇಲಾಖೆಗಳು ತಿಳಿಸಿರುವ ಕಟ್ಟುನಿಟ್ಟು ಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಶುಚೀಕರಣ ನಡೆಸಲಾಯಿತು. ಮನೆ ಮತ್ತು ಆವರಣದಲ್ಲಿ ಡ್ರೈ ಡೇ ಆಚರಿಸಲಾಯಿತು.
ಈ ಸಂಬಂಧ ಜಿಲ್ಲಾ ಪೆÇಲೀಸ್ ಕೇಂದ್ರ ಕಚೇರಿ ಆವರಣದಲ್ಲಿ ನಡೆದ ಶುಚೀಕರಣ ಕಾಯಕಕ್ಕೆ ಜಿಲ್ಲಾ ಪೆÇಲೀಸ್ ವರಿಷ್ಠಾ„ಕಾರಿ ಪಿ.ಎಸ್.ಸಾಬು ಅವರು ನೇತೃತ್ವ ವಹಿಸಿದ್ದರು. ಡಿ.ವೈ.ಎಸ್.ಪಿ. ಪಿ.ಬಾಲಕೃಷ್ಣನ್ ನಾಯರ್, ಸಿ.ಐ.ಅಬ್ದುಲ್ ರಹೀಂ ಮೊದಲಾದವರು ಜೊತೆಗಿದ್ದರು.





