HEALTH TIPS

ತೀವ್ರ ಆರ್ಥಿಕ ಸಂಕಷ್ಟ: ಇತಿಹಾಸ ಪುಟ ಸೇರಿದ ಅಟ್ಲಾಸ್ ಸೈಕಲ್ ಕಂಪನಿ

 
         ಲಖನೌ/ನವದೆಹಲಿ: ಸ್ವೀಡನ್‍ನ ಸ್ಟಾಕ್‍ಹೋಮ್‍ನಲ್ಲಿರುವ ನೊಬೆಲ್ ವಸ್ತುಸಂಗ್ರಹಾಲಯದ ಗೋಡೆಗಳನ್ನು ಅಲಂಕರಿಸುವ ನೂರಾರು ಕಲಾಕೃತಿಗಳಲ್ಲಿ ಕಪ್ಪು ಬಣ್ಣದ ಬೈಸಿಕಲ್ ಸಹ ಒಂದು. "ಅದು ಸಾಮಾನ್ಯ ಬೈಸಿಕಲ್ ಅಲ್ಲ" ಎಂದು ಮ್ಯೂಸಿಯಂನ ಕ್ಯುರೇಟರ್ ಕಳೆದ ವರ್ಷ ಡಿಸೆಂಬರ್ ನಲ್ಲಿ ಭಾರತೀಯ ಮೂಲದ ಪತ್ರಕರ್ತರಿಗೆ ತಿಳಿಸಿದ್ದರು. 2019 ರ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಪ್ರಧಾನ ಸಮಾರಂಬದ ವೇಳೆ ಈ ಪತ್ರಕರ್ತರಿಗೆ ಆ ಸೈಕಲ್ ಬಗ್ಗೆ ಹೇಳಲಾಗಿತ್ತು. ಏಕೆಂದರೆ ಅಟ್ಲಾಸ್ ತಯಾರಿಸಿದ ಬೈಸಿಕಲ್ ಭಾರತದ ಇನ್ನೊಬ್ಬ ಹೆಮ್ಮೆಯ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ವಿಜೇತ ಅಮತ್ರ್ಯ ಸೇನ್ ಅವರಿಗೆ ಸೇರಿತ್ತು.
      1998 ರ ನೊಬೆಲ್ ವಿಜೇತರಾದ  ಸೇನ್ ಪಶ್ಚಿಮ ಬಂಗಾಳದಲ್ಲಿ ತಮ್ಮ ಕ್ಷೇತ್ರಕಾರ್ಯದ ಸಮಯದಲ್ಲಿ ಅದರ ಮೇಲೆ ಸವಾರಿ ನಡೆಸಿದ್ದರು. ಇಂತಹಾ ಸೈಕಲ್ ಬ್ರಾಂಡ್‍ನ ತಯಾರಕರು  ಭಾರತದಲ್ಲಿ ಸೈಕ್ಲಿಂಗ್ ಕ್ರಾಂತಿಯ ಪ್ರವರ್ತಕರು ಮತ್ತು ಬಹುತೇಕ ಎಲ್ಲ ಮಕ್ಕಳ ಮೊದಲ ಸೈಕಲ್ ಆಗಿರುತ್ತಿದ್ದ  ಅಟ್ಲಾಸ್ ಸೈಕಲ್ಸ್ ಹರಿಯಾಣ ಲಿಮಿಟೆಡ್ ಈಗ ಶಾಶ್ವತವಾಗಿ ಬಾಗಿಲು ಮುಚ್ಚಿದೆ.
     ದೆಹಲಿಯಿಂದ 40 ಕಿ.ಮೀ ದೂರದಲ್ಲಿರುವ ಹರಿಯಾಣದ ಸೋನೆಪತ್‍ನಲ್ಲಿರುವ ಸಾಧಾರಣ ಟಿನ್ ಶೆಡ್ ಒಂದರಲ್ಲಿ  1951 ರಲ್ಲಿ ಪ್ರಾರಂಭವಾದ ಈ ಕಂಪನಿ ಇದೀಗ ಇತಿಹಾಸದ ಪುಟ ಸೇರಿದೆ.ಕಂಪನಿಯು ತನ್ನ ಕೊನೆಯ ಕೈಗಾರಿಕಾ ಪ್ರದೇಶವನ್ನು ನವದೆಹಲಿಯ ಹೊರವಲದಲ್ಲಿದ್ದ ಸಾಹಿಬಾಬಾದ್‍ನಲ್ಲಿ ಜೂನ್ 3ರಂದು ಬಂದ್ ಮಾಡುವ ಮೂಲಕ ಅಟ್ಲಾಸ್ ಕಂಪನಿ ಶಾಶ್ವತವಾಗಿ ಮುಚ್ಚಿದಂತಾಗಿದೆ.ನಮ್ಮ ದಿನನಿತ್ಯದ ಕಾರ್ಯಾಚರಣೆಗಳಿಗೆ ಹಣವನ್ನು ಹೊಂದಿಸುವಲ್ಲಿ  ನಾವು ತೊಂದರೆ ಎದುರಿಸುತ್ತಿದ್ದೇವೆ. ಕಚ್ಚಾ ವಸ್ತುಗಳನ್ನು ಖರೀದಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಈ ಪರಿಸ್ಥಿತಿಗಳಲ್ಲಿ, ಕಾರ್ಖಾನೆಯನ್ನು ನಿರ್ವಹಿಸುವ ಸ್ಥಿತಿಯಲ್ಲಿ ನಾವಿಲ್ಲ" ಎಂದು ಕಂಪನಿಯ ಗೇಟ್‍ಗಳ ಮೇಲೆ ಅಂಟಿಸಲಾದ ಸೂಚನಾ ಫಲಕ ಹೇಳಿದೆ.
     "ಜೂನ್ 1 ಮತ್ತು 2ಕ್ಕೆ ಲಾಕ್ ಡೌನ್ ನ ಬಳಿಕ ತೆರೆಯಲಿದೆ ಎಂಬ ಸಂತೋಷದೊಡನೆ ನಾವು ಬಂದಿದ್ದೆವು. ಆದರೆ ಕಾರ್ಖಾನೆ ಮುಚ್ಚುತ್ತದೆ ಎಂಬ ಬಗ್ಗೆ ಯಾವುದೇ ಸುಳಿವು ಇರಲಿಲ್ಲ ಎಂದು ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಹೇಶ್ ಕುಮಾರ್ ಹೇಳಿದರು."ಬುಧವಾರ, ನಾವು ಗೇಟ್‍ಗಳಲ್ಲಿ ಒಟ್ಟುಗೂಡುತ್ತಿದ್ದಾಗ ಗೇಟ್‍ನಲ್ಲಿ ನೋಟಿಸ್ ತೋರಿಸಿದ ಕಾವಲುಗಾರರಿಂದ ನಮಗೆ ಪ್ರವೇಶ ನಿರಾಕರಿಸಲಾಯಿತು" ಎಂದು ಕುಮಾರ್ ಹೇಳಿದರು, ಅವರು ಕಾರ್ಖಾನೆಯ ಹಠಾತ್ ಮುಚ್ಚುವಿಕೆಯ ವಿರುದ್ಧ ಕಾರ್ಮಿಕ ನ್ಯಾಯಾಲಯಕ್ಕೆ ತೆರಳಿದ್ದಾರೆ.
       "ಅಟ್ಲಾಸ್ ಒಂದು ಬ್ರ್ಯಾಂಡ್ ಹೆಡ್ ಆಗಿ ಕೆಲಸ ಮಾಡಿದ ಬಳಿಕ ಈ ಸುದ್ದಿ ಅತ್ಯಂತ ಖೇದಕರವಾಗಿದೆ. ನಂಗೆ ನಿದ್ರೆಯಿಲ್ಲದ ರಾತ್ರಿಯನ್ನು ನೀಡಿತು" ಎಂದು 19 ವರ್ಷಗಳ ಕಾಲ ಕಂಪನಿಯೊಂದಿಗೆ ಕೆಲಸ ಮಾಡಿದ ಮತ್ತು ಈಗ ಸೈಕಲ್ ಸೂತ್ರ ಎಂಬ ಸೈಕ್ಲಿಂಗ್ ಕ್ಲಬ್ ಅನ್ನು ನಡೆಸುತ್ತಿರುವ ಆಶಿಶ್ ನಾಗ್ಪಾಲ್ ಹೇಳಿದರು
      "ಗಿರೀಶ್ ಕಪೂರ್ ಮತ್ತು ಗೌತಮ್ ಕಪೂರ್ ಒಬ್ಬ ಅತ್ಯುತ್ತಮ ಉದ್ಯೋಗದಾತರು, ದೈವಭಕ್ತ ಮತ್ತು ಕರುಣಾಮಯಿ ಅಟ್ಲಾಸ್ ಬ್ರಾಂಡ್ ಬಗ್ಗೆ ಹೆಚ್ಚು ಒಲವು ಹೊಂದಿದ್ದಾರೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ.ಅತ್ಯಂತ ನಿಕಟವಾಗಿರುವ ಅಧಿಕಾರಿಗಳ ಪೈಕಿ ಇಬ್ಬರು ತಮ್ಮ 75 ನೇ ವಯಸ್ಸಿನಲ್ಲಿ ಸಹ ಉದ್ಯೋಗ ಮುಂದುವರಿಸಿದ್ದಾರೆ.ನಾಗ್ಪಾಲ್ ಹೇಳಿದರು.
     ನಾನು ನನ್ನ ಬಾಲ್ಯದಲ್ಲಿ ಅಟ್ಲಾಸ್ ಸೈಕಲ್ ಸವಾರಿ ಮಾಡುತ್ತಿದ್ದೆ. ಬೈಸಿಕಲ್ ಎಂದರೆ ಅದು ಅಟ್ಲಾಸ್ ಎಂಬಷ್ಟು ಈ ಕಂಪನಿ ಖ್ಯಾತವಾಗಿತ್ತು. ಆದರೆ ಇಂತಹಾ ಸಾಂಸ್ಥೆ ಬಾಗಿಲು ಮುಚ್ಚಿದ್ದು ದುರಂತ  ಎಂದು ಪ್ರಸಿದ್ಧ ಪರಿಸರವಾದಿ ಮತ್ತು ಸೈಕ್ಲಿಂಗ್ ಬಫ್ ಸುನೀತಾ ನರೈನ್ ಹೇಳಿದರು.
       1951 ರಲ್ಲಿ ಜಾಂಕಿ ದಾಸ್ ಕಪೂರ್ ಅವರ ಪ್ರಯತ್ನದಿಂದ ಪ್ರಾರಂಬಗೊಂಡ ಅಟ್ಲಾಸ್ ಶೀಘ್ರವಾಗಿ ತನ್ನನ್ನು ತಾನು ಪ್ರಮುಖ ಬ್ರಾಂಡ್ ಆಗಿ ಸ್ಥಾಪಿಸಿಕೊಂಡಿತ್ತು. ಟಿನ್ ಶೆಡ್‍ನಿಂದ ಪ್ರಾರಂಬವಾಗಿ  12 ತಿಂಗಳಲ್ಲಿ 25 ಎಕರೆ ಕಾರ್ಖಾನೆ ಸಂಕೀರ್ಣಕ್ಕೆ ಸ್ಥಳಾಂತರಗೊಂಡಿತು. ಕಾರ್ಯಾಚರಣೆಯ ಮೊದಲ ವರ್ಷದಲ್ಲಿ, 12,000 ಸೈಕಲ್ ಗಳು ಉತ್ಪಾದನೆಗೊಂಡಿದ್ದು ಮುಂದೆಂದೂ ಹಿಂತಿರುಗಿ ನೋಡಿರಲಿಲ್ಲ. ಅಟ್ಲಾಸ್ ತನ್ನ ಮೊದಲಕನ್ಸೈನ್ಮೆಂಟ್ ಅನ್ನು 1958 ರಲ್ಲಿ ವಿದೇಶಕ್ಕೆ ಕಳುಹಿಸಿತು. ಅಂದಿನಿಂದ ಇದು ಹಲವಾರು ದೇಶಗಳಿಗೆ ಸೈಕಲ್ ಗಳನ್ನು  ರಫ್ತು ಮಾಡಿದೆ. ಇದು 1978 ರಲ್ಲಿ ಭಾರತದ ಮೊದಲ ರೇಸಿಂಗ್  ಸೈಕಲ್ ಅನ್ನು ಪರಿಚಯಿಸಿತು ಮತ್ತು 1982 ರಲ್ಲಿ ದೆಹಲಿ ಏಷ್ಯನ್ ಕ್ರೀಡಾಕೂಟಕ್ಕೆ ಸೈಕಲ್‍ಗಳ ಅಧಿಕೃತ ಪೂರೈಕೆದಾರನಾಗಿತ್ತು.
     2004 ರಲ್ಲಿ ಕಂಪನಿಗೆ ಕಷ್ಟದ ದಿನಗಳು ಪ್ರಾರಂಬವಾಗಿದ್ದವು. ಕಂಪನಿಯು ನಟ ಸುನಿಲ್ ಶೆಟ್ಟಿ ಮತ್ತು ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ತನ್ನ ಬ್ರಾಂಡ್ ರಾಯಭಾರಿಗಳಾಗಿ ಮಾಡಿದ್ದು ತೀವ್ರ ಸಂಘರ್ಷಕ್ಕೆ ನಾಂದಿ ಹಾಡಿತು.
      ಒಲಿಂಪಿಕ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ಕೂಡ ಈ ಸೈಕಲ್ ಬ್ರಾಂಡ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು. ಆದರೆ ಬೇಡಿಕೆಯ ಕುಸಿತದಿಂದ  2014 ರಲ್ಲಿ ಮಧ್ಯಪ್ರದೇಶದ ಮಲನ್‍ಪುರದಲ್ಲಿ ತನ್ನ ಘಟಕವನ್ನು ಮುಚ್ಚಲು ಕಾರಣವಾಗಿತ್ತು. 2018 ರಲ್ಲಿ ಅದು ತನ್ನ ಸೋನೆಪತ್ ಘಟಕದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು. ಇದೀಗ ಸಾಹಿಬಾಬಾದ್ ಕಾರ್ಖಾನೆಯನ್ನು ಮುಚ್ಚುವುದರೊಂದಿಗೆ ಅತ್ಯುತ್ತಮ ಬ್ರಾಂಡ್ ಒಂದು ಈಗ ನೆನಪು ಮಾತ್ರವಾಗಿ ಉಳಿದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries