ತಿರುವನಂತಪುರ: ಸುಲಭ ಹಣ ಸಂಪಾದನೆಗಾಗಿ ತನ್ನ ಪತ್ನಿಯನ್ನೇ ಸ್ನೇಹಿತರಿಗೊಪ್ಪಿಸಿ ಬಳಿಕ ಅವರಿಂದ ಐದು ವರ್ಷದ ಬಾಲಕನ ಎದುರಿನಲ್ಲೇ 23 ರ ಹರೆಯದ ಯುವತಿಯೊಬ್ಬಳು ಅತ್ಯಾಚಾರಕ್ಕೊಳಗಾದ ಹೃದಯವಿದ್ರಾವಕ ಘಟನೆಗೆ ಕೇರಳ ಸಾಕ್ಷಿಯಾಗಿದೆ .
ಪ್ರಕರಣಕ್ಕೆ ಸಂಬಂಧಿಸಿ ಪತಿ ಸೇರಿದಂತೆ ಐದು ಮಂದಿಯನ್ನು ಪೆÇಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಪೆÇೀಕ್ಸೋ ಕೇಸು ದಾಖಲಿಸಲಾಗುವುದಾಗಿ ಪೆÇಲೀಸರು ತಿಳಿಸಿದ್ದಾರೆ.
ತಿರುವನಂತಪುರ ನಿವಾಸಿಯಾದ ಎರಡು ಮಕ್ಕಳ ತಾಯಾಗಿರುವ 23 ರ ಹರೆಯದ ಯುವತಿಯನ್ನು ಪತಿಯ ಸಮ್ಮತಿಯೊಂದಿಗೆ ಅತ್ಯಾಚಾರಗೈಯಲಾಗಿದೆ . ಅತ್ಯಾಚಾರಗೈದವರಿಂದ ಪತಿ ಹಣಪಡೆದಿರುವುದಾಗಿ ಪತ್ನಿ ತನಿಖಾಧಿಕಾರಿಗಳಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾಳೆ. ಬೀಚಿಗೆ ಹೋಗುವುದಾಗಿ ತಿಳಿಸಿ ಪತ್ನಿಯನ್ನು ಕರೆದೊಯ್ದು ಸ್ನೇಹಿತರಿಗೊಪ್ಪಿಸಿರುವುದಾಗಿ ದೂರಲಾಗಿದೆ. ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ಮೊದಲು ಪತಿಯ ಸ್ನೇಹಿತನ ಮನೆಯಲ್ಲೂ ಬಳಿಕ ನಿರ್ಜನಪ್ರದೇಶವೊಂದಕ್ಕೆ ಕೊಂಡೊಯ್ದು ತಾಸುಗಳ ತನಕ ಕಿರುಕುಳ ನೀಡಿರುವುದಾಗಿ ಹೇಳಲಾಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಇದೆಲ್ಲಾ ನಡೆಯುವಾಗಲೂ ಐದು ವರ್ಷದ ಪುತ್ರ ಜೊತೆಯಲ್ಲಿದ್ದನೆಂದು ಯುವತಿ ಹೇಳಿಕೆ ನೀಡಿದ್ದಾಳೆ.
ಬಳಿಕ ಯುವತಿ ಪುತ್ರನೊಂದಿಗೆ ಓಡಿ ಪರಾರಿಯಾಗುವ ಮಧ್ಯೆ ಎದುರಿನಿಂದ ಆಗಮಿಸಿದ ಕಾರು ಚಾಲಕನೊಬ್ಬ ಯುವತಿಯನ್ನು ಮನೆಗೆ ತಲುಪಿಸಿ ಬಳಿಕ ಪೆÇಲೀಸರಿಗೆ ಮಾಹಿತಿ ನೀಡಿದ್ದಾನೆ. ಯುವತಿಯ ಹೇಳಿಕೆಯಂತೆ ಪೆÇಲೀಸರು ಪ್ರಕರಣ ದಾಖಲಿಸಿದ್ದಾರೆ.





