ತಿರುವನಂತಪುರ: ರಾಜ್ಯದಲ್ಲಿ ಆರಾಧನಾಲಯಗಳನ್ನು ತೆರೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕೋವಿಡ್ ನಿಬರ್ಂಧದೊಂದಿಗೆ ಈ ದೇವಾಲಯಗಳನ್ನು ಜೂನ್ 8 ರಿಂದ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಭಕ್ತರು ಸಾರ್ವಜನಿಕ ಪೂಜಾ ಸ್ಥಳಗಳಲ್ಲಿ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಬಂಧಿಸಲಾಗಿದೆ.
ಭಕ್ತರು ದೇವಾಲಯ ಭೇಟಿ ವೇಳೆ ಒಬ್ಬರಿಂದೊಬ್ಬರು ಆರು ಅಡಿಗಳ ಅಂತರದಲ್ಲಿ ಇರಬೇಕು. 65 ವರ್ಷ ದಾಟಿದವರು ಮತ್ತು 10 ವರ್ಷದೊಳಗಿನವರಿಗೆ ದೇವಾಲಯಕ್ಕೆ ಪ್ರವೇಶಿಸಲು ಅನುಮತಿ ನಿರಾಕರಿಸಲಾಗುತ್ತದೆ. ಈ ಬಗ್ಗೆ ಭಕ್ತರಿಗೆ ನೋವಾಗದಂತೆ ತಿಳಿಸುವ ಅಗತ್ಯ ಇದೆ. ದೇವಾಲಯಗಳಿಗೆ ಒಮ್ಮೆಗೆ ಗರಿಷ್ಠ ನೂರು ಮಂದಿಗಳಿಗೆ ಮಾತ್ರ ಪ್ರವೇಶಿಸಲು ಅನುವು ಮಾಡಲಾಗುವುದು. ಮೊದಲು ಬರುವವರಿಗೆ ಪ್ರವೇಶವನ್ನು ಒದಗಿಸಲು ವ್ಯವಸ್ಥೆ ಮಾಡಬೇಕು. ಭಕ್ತರು ವಿಗ್ರಹಗಳನ್ನು ಅಥವಾ ಪವಿತ್ರ ಗ್ರಂಥಗಳನ್ನು ಮುಟ್ಟಬಾರದು. ಭಕ್ತರಿಗೆ ಕೈಗವಸು, ಮಾಸ್ಕ್ ನೀಡಬೇಕು. ಕೋವಿಡ್ ರಕ್ಷಣೆಯ ಪೆÇೀಸ್ಟರ್‍ಗಳನ್ನು ಅಲ್ಲಲಿ ಪ್ರದರ್ಶಿಸಲು ಸೂಚಿಸಲಾಗಿದೆ.
ಆರಾಧನಾಲಯಗಳಲ್ಲಿ ಸಭೆ, ಭಾಷಣ, ಸಾಂಸ್ಕøತಿಕ ಚಟುವಟಿಕೆಗಳನ್ನು ಮಾಡಕೂಡದು. ದೈಹಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ದೇಹವನ್ನು ಶುದ್ಧೀಕರಿಸಲು ಸಾರ್ವಜನಿಕ ತೊಟ್ಟಿಯಿಂದ ನೀರನ್ನು ಬಳಸ ಕೂಡದು. ಆಲಯಗಳಿಗೆ ಬರುವ ವೇಳೆ ಸಾರ್ವಜನಿಕ ವ್ಯಾಪಾರ ಕೇಂದ್ರಗಳಿಂದ ನೀರು, ಬಿಸ್ಕಟ್ ಗಳನ್ನು ಸ್ವತಃ ಖರೀದಿಸಿ ತರಬೇಕು.ದೇವಾಲಯಗಳಲ್ಲಿ ತೀರ್ಥ,ಪ್ರಸಾದ, ಅನ್ನಪ್ರಸಾದಗಳನ್ನು ನೀಡಬಾರದು ಎಂದು ಸರ್ಕಾರ ಸೂಚಿಸಿದೆ.





