ಬದಿಯಡ್ಕ: ಯುವಮೋರ್ಚಾ ಕಾಸರಗೋಡು ಮಂಡಲ ಸಮಿತಿ ಹಮ್ಮಿಕೊಂಡ ಸಾವಿರ ಗಿಡಗಳನ್ನು ನೆಡುವ ಅಭಿಯಾನಕ್ಕೆ ಶುಕ್ರವಾರ ವಿಶ್ವಪರಿಸರ ದಿನಾಚರಣೆಯಂದು ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಗಿಡವನ್ನು ನೆಟ್ಟು ಚಾಲನೆಯನ್ನು ನೀಡಲಾಯಿತು.
ಬದಿಯಡ್ಕ ಪೊಲೀಸ್ ಠಾಣಾಧಿಕಾರಿ ಅನೀಶ್ ಉದ್ಘಾಟಿಸಿದರು. ಬಿಜೆಪಿ ಕಾಸರಗೋಡು ಮಂಡಲ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ಯುವಮೋರ್ಚಾ ಕಾಸರಗೋಡು ಮಂಡಲ ಅಧ್ಯಕ್ಷ ರಕ್ಷಿತ್ ಕೆದಿಲಾಯ ಬದಿಯಡ್ಕ, ಬಿ.ಜೆ.ಪಿ ಬದಿಯಡ್ಕ ಪಂಚಾಯತ್ ಸಮಿತಿ ಪ್ರಧಾನ ಕಾರ್ಯದರ್ಶಿ ಅವಿನಾಶ್ ರೈ, ಯುವ ಮೋರ್ಚಾ ಬದಿಯಡ್ಕ ಪಂಚಾಯತ್ ಅಧ್ಯಕ್ಷ ಹಿತೇಶ್, ಕಾರ್ಯದರ್ಶಿ ಸುಜಿತ್, ಕಾರ್ಯಕರ್ತರಾದ ಕಾರ್ತಿಕ್ ಕಾಮತ್ ಬದಿಯಡ್ಕ, ರಾಜೇಶ್ ರೈ ಬದಿಯಡ್ಕ, ದೀಕ್ಷಿತ್ ಬದಿಯಡ್ಕ ಮೊದಲಾದವರು ಪಾಲ್ಗೊಂಡಿದ್ದರು.
ಅಭಿಮತ:
ಪರಿಸರ ಸಂರಕ್ಷಣೆಗೆ ಕಟಿಬದ್ಧರಾಗಿ ಯುವಮೋರ್ಚಾ ವತಿಯಿಂದ ಸಾವಿರ ಗಿಡಗಳನ್ನು ನೆಡುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕರ್ತರು ವಿವಿಧೆಡೆಗಳಲ್ಲಿ ಗಿಡನೆಡುವ ಮೂಲಕ ಸಹಕರಿಸುತ್ತಿದ್ದಾರೆ.
- ರಕ್ಷಿತ್ ಕೆದಿಲಾಯ, ಬದಿಯಡ್ಕ
ಯುವಮೋರ್ಚಾ ಕಾಸರಗೋಡು ಮಂಡಲ ಅಧ್ಯಕ್ಷ





